ಭಾರತ - ಪಾಕ್ ಕದನ ಇಂದು, ಸ್ಪಿನ್ನರ್​ಗಳಿಗೆ ವರವಾಗಲಿದೆಯಾ ಪಿಚ್..!

ಇಂದು ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಏಷ್ಯಾ ಕಪ್ 2025 ರ ಗ್ರೂಪ್ ಎ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಎದುರಿಸಲಿದೆ. ಈಗಾಗಲೆ ಯುಎಇ ವಿರುದ್ಧದ ತಮ್ಮ ಆರಂಭಿಕ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳ ದೊಡ್ಡ ಜಯ ದೊರೆತಿದ್ದು, ಎರಡನೇ ಪಂದ್ಯದಲ್ಲೂ ಅದೇ ಫಾರ್ಮ್​ನನ್ನು ಮುಂದುವರೆಸಲು ಭಾರತದ ಆಟಗಾರರು ಸಜ್ಜಾಗಿದ್ದಾರೆ.

author-image
Ganesh Kerekuli
surya ali
Advertisment

ಮಳೆಯ ಭೀತಿ ಇಲ್ಲದಿದ್ದರೂ, ಇಂದು ದುಬೈನಲ್ಲಿ ಹೆಚ್ಚಿನ ತಾಪಮಾನದ ನಿರೀಕ್ಷೆಯಿದೆ. ಹಾಗಾಗಿ ಪಿಚ್‌ನ ಸ್ವರೂಪ ನಿಧಾನಗತಿಯಲ್ಲಿರುವ ಸಾಧ್ಯತೆಯಿದೆ, ಮೈದಾನದಲ್ಲಿ ಹುಲ್ಲು ಜಾಸ್ತಿ ಇರುವುದರಿಂದ ಬೌಂಡರಿಗೆ ಸ್ವಲ್ಪ ಅಡೆತಡೆಯಾಗಲಿದೆ. ಇದು ಸ್ಪಿನ್ ಬೌಲರ್‌ಗಳಿಗೆ ವರವಾಗಲಿದೆ. ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆಯಿದೆ. ಇಂದಿನ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ.

ಮೂಲಗಳ ಪ್ರಕಾರ, ಪಂದ್ಯದ ಸಮಯದಲ್ಲಿ ಭಾರತ ತಂಡವು ಪಾಕಿಸ್ತಾನದ ಬಗೆಗಿನ ತನ್ನ ಭಾವನೆಗಳನ್ನು 'ಸಾಂಕೇತಿಕ ಪ್ರತಿಭಟನೆ'ಗಳ ಮೂಲಕ ಸ್ಪಷ್ಟಪಡಿಸುವ ಸಾಧ್ಯತೆಯಿದೆ. ಅದು ಕಪ್ಪು ತೋಳುಪಟ್ಟಿಗಳನ್ನು ಧರಿಸುವುದು ಅಥವಾ ಹಸ್ತಲಾಘವದ ಧಿಕ್ಕಾರ ಇತ್ಯಾದಿಗಳ ರೂಪದಲ್ಲಿರಬಹುದು ಎಂದು ಅಂದಾಜಿಸಲಾಗಿದೆ. ಈ ಪಂದ್ಯವು ಭಾರತ ತಂಡಕ್ಕೆ ಕಡ್ಡಾಯವಾಗಿದೆ.

ಟೀಮ್ ಇಂಡಿಯಾದ ಸಂಭಾವ್ಯ ಆಟಗಾರರ ಪಟ್ಟಿ:

-ಸೂರ್ಯಕುಮಾರ್ ಯಾದವ್ (ನಾಯಕ) ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

ಇದನ್ನೂ ಓದಿ:ಭಾರತ-ಪಾಕ್ ಮ್ಯಾಚ್ ನೋಡಲ್ಲ.. ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ MLA ಪ್ರದೀಪ್ ಈಶ್ವರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Asia Cup 2025 india vs pakistan asia cup pahalgam attack Ind vs Pak
Advertisment