/newsfirstlive-kannada/media/media_files/2025/09/27/surya_tilak-2025-09-27-07-01-17.jpg)
ಶ್ರೀಲಂಕಾ ವಿರುದ್ಧ ನಡೆದ ಏಷ್ಯಾಕಪ್​ನ ಸೂಪರ್-4 ಪಂದ್ಯದಲ್ಲಿ ಟೀಮ್ ಇಂಡಿಯಾ ಸುಲಭವಾಗಿ ವಿಜಯ ಸಾಧಿಸಿದೆ. ಇದರಿಂದ ಸೂರ್ಯಕುಮಾರ್​ ಸೇನೆಗೆ ಮತ್ತೊಂದು ಗೆಲುವು ಒಲಿದು ಬಂದಿತು.
ದುಬೈನ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಟಾಸ್ ಗೆದ್ದು ಫೀಲ್ಡಿಂಗ್ ತೆಗೆದುಕೊಂಡರು. ಹೀಗಾಗಿ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಿತು. ಓಪನರ್ ಅಭಿಷೇಕ್ ಶರ್ಮಾ ಅವರ ಅರ್ಧಶತಕ ಹಾಗೂ ಯುವ ಬ್ಯಾಟರ್ ತಿಲಕ್, 4 ಬೌಂಡರಿ, 1 ಸಿಕ್ಸರ್​ನಿಂದ 49 ರನ್​ಗಳ ನೆರವಿನಿಂದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 203 ರನ್​ಗಳ ಗುರಿಯನ್ನು​ ಶ್ರೀಲಂಕಾಗೆ ನೀಡಿತ್ತು.
ಈ ಗುರಿ ಬೆನ್ನತ್ತಿದ್ದ ಲಂಕಾದ ಬ್ಯಾಟರ್​ಗಳು ಘರ್ಜನೆ ಜೋರಾಗಿಯೇ ಇತ್ತು. ಓಪನರ್​ ಪಾತುಂ ನಿಸ್ಸಾಂಕ ಅವರ ಭರ್ಜರಿ ಸೆಂಚುರಿ ಶ್ರಿಲಂಕಾಗೆ ಗೆಲುವು ತಂದು ಕೊಟ್ಟೇ ಬಿಟ್ಟಿತು ಎಂದುಕೊಂಡಿದ್ದರು. ಆದರೆ ಕೊನೆಯಲ್ಲಿ ಮ್ಯಾಚ್ ಡ್ರಾ ಆಗಿತ್ತು. ಹೀಗಾಗಿ ಸೂಪರ್ ಓವರ್​ ಅನ್ನು ಆಡಿಸಲಾಯಿತು. ಸೂಪರ್ ಓವರ್​ನಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಬ್ಯಾಟಿಂಗ್ ಮಾಡಲು ಹರಸಾಹಸ ಪಟ್ಟಿತು.
ಇದನ್ನೂ ಓದಿ: ಲಂಕನ್ನರ ವಿರುದ್ಧ ಅಭಿಷೇಕ್ ಶರ್ಮಾ, ತಿಲಕ್​ ಘರ್ಜನೆ.. ಬಿಗ್ ಟಾರ್ಗೆಟ್ ಸೆಟ್ ಮಾಡಿದ ಭಾರತ
20 ಓವರ್​ನಲ್ಲಿ ಬ್ಯಾಟಿಂಗ್ ಮಾಡಿದಂತೆ ಸೂಪರ್​ ಓವರ್​ನಲ್ಲಿ ಬ್ಯಾಟ್​ ಬೀಸಲು ಆಗಲಿಲ್ಲ. ಭಾರತದ ಪರ ಬೌಲಿಂಗ್ ಮಾಡಿದ ಅರ್ಷದೀಪ್ ಸಿಂಗ್ ಲಂಕನ್ನರನ್ನ ಗರಿಗೆದರಲು ಬಿಡಲೇ ಇಲ್ಲ. ಅರ್ಷದೀಪ್ ಸಿಂಗ್ ಹಾಕಿದ ಸೂಪರ್​ ಓವರ್​​ನ ಮೊದಲ ಎಸೆತ ಹೊಡೆದ​ ಕುಸಾಲ್ ಪೆರೆರಾ, ರಿಂಕು ಸಿಂಗ್​ಗೆ ಕ್ಯಾಚ್​ಕೊಟ್ಟು ಹೊರ ನಡೆದರು. ತಂಡ ರನ್​ಗಳ ಖಾತೆ ತೆರೆಯುವ ಮೊದಲೇ ವಿಕೆಟ್ ಖಾತೆ ತೆರೆಯಿತು.
2ನೇ ಎಸೆತದಲ್ಲಿ ಕಮಿಂದು ಮೆಂಡೀಸ್ 1 ರನ್​ ತೆಗೆದರು. 3ನೇ ಎಸೆತದಲ್ಲಿ ರನ್ ಬರಲಿಲ್ಲ. 4ನೇ ಎಸೆತವನ್ನು ಅರ್ಷದೀಪ್ ಸಿಂಗ್ ವೈಡ್ ಬಾಲ್ ಹಾಕಿದರು. ಇದರ ಬದಲಿಗೆ ಇನ್ನೊಂದು ಬಾಲ್ ಹಾಕಿದರು ರನ್ ಬರಲಿಲ್ಲ. 5ನೇ ಬಾಲ್​ನಲ್ಲಿ ಅರ್ಷದೀಪ್, ದಾಸುನ್ ಶನಕರನ್ನು ಔಟ್ ಮಾಡಿದರು. ಹೀಗಾಗಿ ಶ್ರೀಲಂಕಾ 2 ವಿಕೆಟ್​ಗೆ 2 ರನ್​ ಮಾತ್ರ ಟಾರ್ಗೆಟ್ ನೀಡಿತು.
ಬಳಿಕ ಕ್ರೀಸ್​ಗೆ ಬಂದ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಹಾಗೂ ಶುಭ್​ಮನ್ ಗಿಲ್​ ತಂಡವನ್ನು ಗೆಲ್ಲಿಸಿದರು. ವನಿಂದು ಹಸರಂಗ್ ಎಸೆದ ಮೊದಲ ಬಾಲ್​ ಅನ್ನು ಸ್ಟ್ರೈಕ್​ನಲ್ಲಿದ್ದ ಸೂರ್ಯಕುಮಾರ್ ಹೊಡೆದು 3 ರನ್​ ಓಡಿದರು. ಇದರಿಂದ ಸೂಪರ್​ ಓವರ್​ನಲ್ಲಿ ಟೀಮ್ ಇಂಡಿಯಾ ಅಮೋಘವಾದ ಗೆಲುವು ದಾಖಲಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ