Advertisment

ಲಂಕನ್ನರ ವಿರುದ್ಧ ಅಭಿಷೇಕ್ ಶರ್ಮಾ, ತಿಲಕ್​ ಘರ್ಜನೆ.. ಬಿಗ್ ಟಾರ್ಗೆಟ್ ಸೆಟ್ ಮಾಡಿದ ಭಾರತ

ದುಬೈನ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಟಾಸ್ ಗೆದ್ದು ಫೀಲ್ಡಿಂಗ್ ತೆಗೆದುಕೊಂಡು, ಭಾರತವನ್ನು ಮೊದಲ ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಟೀಮ್ ಇಂಡಿಯಾ ಪರ ಓಪನರ್ಸ್​ ಆಗಿ ಕಣಕ್ಕೆ ಇಳಿದ ಅಭಿಷೇಕ್ ಶರ್ಮಾ

author-image
Bhimappa
TILAK_ABHI
Advertisment

ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಷ್ಯಾಕಪ್​ನ ಸೂಪರ್​-4 ಪಂದ್ಯದಲ್ಲಿ ಓಪನರ್ ಅಭಿಷೇಕ್ ಶರ್ಮಾ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 5 ವಿಕೆಟ್​​ಗೆ 203 ರನ್​ಗಳ ಟಾರ್ಗೆಟ್​ ಸೆಟ್ ಮಾಡಿದೆ. 

Advertisment

ದುಬೈನ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಟಾಸ್ ಗೆದ್ದು ಫೀಲ್ಡಿಂಗ್ ತೆಗೆದುಕೊಂಡು, ಭಾರತವನ್ನು ಮೊದಲ ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಟೀಮ್ ಇಂಡಿಯಾ ಪರ ಓಪನರ್ಸ್​ ಆಗಿ ಕಣಕ್ಕೆ ಇಳಿದ ಅಭಿಷೇಕ್ ಶರ್ಮಾ ಹಾಗೂ ಶುಭ್​​ಮನ್ ಗಿಲ್ ಜೋಡಿಯಾಟ ಬೇಗನೇ ಕುಸಿಯಿತು. ಏಕೆಂದರೆ 4 ರನ್​ಗೆ ಗಿಲ್​ ಔಟ್ ಆದರು. 

ಇದಾದ ಮೇಲೆ ಅಭಿಷೇಕ್​ಗೆ ಜೊತೆಯಾದ ನಾಯಕ ಸೂರ್ಯಕುಮಾರ್​ ಕೇವಲ 12 ರನ್​ಗೆ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್​ ನಂತರ ಕ್ರೀಸ್​ಗೆ ಆಗಮಿಸಿದ ತಿಲಕ್ ವರ್ಮಾ, ಶ್ರೀಲಂಕಾ ಬೌಲರ್​ಗಳನ್ನ ಚೆಂಡಾಡಿದರು. ಪಂದ್ಯದಲ್ಲಿ 34 ಎಸೆತಗಳನ್ನು ಎದುರಿಸಿದ ಯುವ ಬ್ಯಾಟರ್ ತಿಲಕ್, 4 ಬೌಂಡರಿ, 1 ಸಿಕ್ಸರ್​ನಿಂದ 49 ರನ್​ ಬಾರಿಸಿ ಅಜೇಯರಾಗಿ ಉಳಿದರು. ಓವರ್​​ ಮುಗಿದಿದ್ದರಿಂದ ಕೇವಲ 1 ರನ್​​ನಿಂದ ಅರ್ಧಶತಕದಿಂದ ವಂಚಿತರಾದರು.  

ಇದನ್ನೂ ಓದಿ: ಹ್ಯಾರಿಸ್​ ರೌಫ್, ಫರ್ಹಾನ್​ಗೆ ಬಿಗ್​ ಶಾಕ್​.. ವಿಚಾರಣೆಯಲ್ಲಿ ಪಾಕ್​​ ಪ್ಲೇಯರ್ಸ್​ಗೆ ಭಾರೀ ಅವಮಾನ!

Advertisment

SURYA_Asalanka

ಸಂಜು ಸ್ಯಾಮ್ಸನ್ ಬಿಗ್ ಬ್ಯಾಟಿಂಗ್ ಮಾಡಿ 3 ದೊಡ್ಡ ಸಿಕ್ಸರ್​ಗಳಿಂದ 39 ರನ್​ಗಳನ್ನು ಬಾರಿಸಿ ಕ್ಯಾಚ್​ ಔಟ್ ಆದರು. ಕಳೆದ ಪಂದ್ಯದಲ್ಲಿ ಘರ್ಜಿಸಿದ್ದ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ 2 ರನ್​ಗೆ ಆಟ ಮುಗಿಸಿದರು. ಅಕ್ಷರ್ ಪಟೇಲ್ ಆಲ್​ರೌಂಡರ್ ಆಟ ಪ್ರದರ್ಶಿಸಿದರು. 1 ಬೌಂಡರಿ, 1 ಸಿಕ್ಸರ್​ ಸೇರಿ 21 ಬಾರಿಸಿದರು. ಆರಂಭದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದ ಅಭಿಷೇಕ್ ಶರ್ಮಾ ಲಂಕಾದ ಬೌಲರ್​ಗಳನ್ನ ಧೂಳೆಬ್ಬಿಸಿದರು. 

ಕಳೆದ ಪಂದ್ಯದಲ್ಲೂ ಅಬ್ಬರಿಸಿದ್ದ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ರೌದ್ರಾವತಾರ ತೋರಿ, ಅಮೋಘವಾದ 8 ಬೌಂಡರಿ ಹಾಗೂ 2 ಬಿಗ್​ ಸಿಕ್ಸರ್​ ಸೇರಿದಂತೆ 61 ರನ್​ ಸಿಡಿಸಿದರು. ಈ ಅರ್ಧಶತಕದೊಂದಿಗೆ ಏಷ್ಯಾಕಪ್​ನಲ್ಲಿ ಹ್ಯಾಟ್ರಿಕ್​ ಫಿಫ್ಟಿ ಸಿಡಿಸಿದ ಯಂಗ್ ಬ್ಯಾಟರ್ ಎನಿಸಿದರು. ಈ ಎಲ್ಲರ ಬ್ಯಾಟಿಂಗ್​ನಿಂದ ಟೀಮ್ ಇಂಡಿಯಾದ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 203 ರನ್​ಗಳ ಗುರಿಯನ್ನು​ ಶ್ರೀಲಂಕಾಗೆ ನೀಡಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Abhishek Sharma Asia Cup 2025 IND vs SL
Advertisment
Advertisment
Advertisment