Advertisment

ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಶುಭಾರಂಭ.. ಹರ್ಮನ್​ಪ್ರೀತ್​ ಕೌರ್​ ಪಡೆ ವಿಜಯಯಾತ್ರೆ

ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆ ಪಂದ್ಯದಲ್ಲಿ ಶ್ರೀಲಂಕಾದ ನಾಯಕಿ ಚಾಮರಿ ಅಥಪತ್ತು ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಓಪನರ್​ ಆಗಿ ಕ್ರೀಸ್​ಗೆ ಆಗಮಿಸಿದ್ದ ಸ್ಮೃತಿ ಮಂದಾನ ಹಾಗೂ ಪ್ರತಿಕಾ ರಾವಲ್

author-image
Bhimappa
Deepti_Sharma
Advertisment

ಐಸಿಸಿ ಮಹಿಳಾ ವಿಶ್ವಕಪ್​ನ ಉದ್ಘಾಟನಾ​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಹರ್ಮನ್​ಪ್ರೀತ್​ ಕೌರ್​ ನೇತೃತ್ವದ ಭಾರತ ಮಹಿಳಾ ತಂಡ ಡಿಎಲ್​​ಎಸ್​ ಮೆಥೆಡ್​ ಪ್ರಕಾರ ಗೆಲುವು ಸಾಧಿಸಿದೆ. ಈ ಮೂಲಕ 2025ರ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ವಿಜಯಯಾತ್ರೆ ಆರಂಭಿಸಿದೆ.

Advertisment

ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆ ಪಂದ್ಯದಲ್ಲಿ ಶ್ರೀಲಂಕಾದ ನಾಯಕಿ ಚಾಮರಿ ಅಥಪತ್ತು ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಓಪನರ್​ ಆಗಿ ಕ್ರೀಸ್​ಗೆ ಆಗಮಿಸಿದ್ದ ಸ್ಮೃತಿ ಮಂದಾನ ಹಾಗೂ ಪ್ರತಿಕಾ ರಾವಲ್ ಉತ್ತಮ ಆರಂಭ ಪಡೆಯಲಿಲ್ಲ. 8 ರನ್​ಗೆ ಮಂದಾನ ವಿಕೆಟ್​ ಒಪ್ಪಿಸಿ, ಬೇಸರದಿಂದ ಹೊರ ನಡೆದರು. 

ಇದನ್ನೂ ಓದಿ:6 ತಿಂಗಳ ಅಂತರ, 2 ಪ್ರತಿಷ್ಠಿತ ಟ್ರೋಫಿ.. ಗಂಭೀರ್​ ಸಕ್ಸಸ್​, ಟೀಮ್ ಇಂಡಿಯಾದ ಮುಂದಿನ ಟಾರ್ಗೆಟ್?

Deepti_Sharma_1

ಬಳಿಕ ಬ್ಯಾಟಿಂಗ್​ಗೆ ಬಂದ ಹರ್ಲೀನ್ ಡಿಯೋಲ್ ಭರ್ಜರಿ ಬ್ಯಾಟಿಂಗ್ ಮಾಡಿ 48 ರನ್​ ಸಿಡಿಸಿ ಆಡುವಾಗ ಅರ್ಧಶತಕದ ಹೊಸ್ತಿಲಿನಲ್ಲಿ ಔಟ್ ಆದರು. ಇವರನ್ನು ಬಿಟ್ಟರೇ ಆಲ್​ರೌಂಡರ್​ ದೀಪ್ತಿ ಶರ್ಮಾ 53, ಅಮನ್‌ಜೋತ್ ಕೌರ್ 57 ರನ್​ಗಳ ನೆರವಿನಿಂದ ಟೀಮ್ ಇಂಡಿಯಾ 47 ಓವರ್​ಗೆ 8 ವಿಕೆಟ್​ ನಷ್ಟಕ್ಕೆ 270 ರನ್​ಗಳ ಟಾರ್ಗೆಟ್​ ನೀಡಿತ್ತು.

Advertisment

ಈ ಗುರಿ ಬೆನ್ನತ್ತಿದ್ದ ಶ್ರೀಲಂಕಾ ಮಹಿಳಾ ತಂಡ ಉತ್ತಮವಾಗಿಯೇ ಬ್ಯಾಟಿಂಗ್ ಮಾಡಿತು. ಕ್ಯಾಪ್ಟನ್​ ಚಾಮರಿ 43 ರನ್ ಸಿಡಿಸಿ ಒಳ್ಳೆಯ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಸರಿಯಾಗಿ ಮಾಡದ ಕಾರಣ ಶ್ರೀಲಂಕಾ ಆಟಗಾರ್ತಿಯರು 211 ರನ್​ಗೆ ಆಲೌಟ್ ಆದರು. ಇದರಿಂದ ಭಾರತದ ಮಹಿಳಾ ತಂಡ 59 ರನ್​ಗಳ ಗೆಲುವು ಪಡೆಯಿತು. ಆಲೌರಂಡರ್​ ಪ್ರದರ್ಶನ ನೀಡಿದ್ದ ದೀಪ್ತಿ ಶರ್ಮಾ ಅರ್ಧಶತಕದ ಜೊತೆಗೆ 3 ವಿಕೆಟ್​ಗಳನ್ನು ಉರುಳಿಸಿದ್ದರು. ಇದರಿಂದ ಪ್ಲೇಯರ್​ ಆಫ್​ ದೀ ಮ್ಯಾಚ್ ಪ್ರಶಸ್ತಿ ಪಡೆದು ಸಂಭ್ರಮಿಸಿದರು.  

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs SL Women's World Cup Women’s ODI World Cup 2025
Advertisment
Advertisment
Advertisment