Advertisment

6 ತಿಂಗಳ ಅಂತರ, 2 ಪ್ರತಿಷ್ಠಿತ ಟ್ರೋಫಿ.. ಗಂಭೀರ್​ ಸಕ್ಸಸ್​, ಟೀಮ್ ಇಂಡಿಯಾದ ಮುಂದಿನ ಟಾರ್ಗೆಟ್?

ಏಷ್ಯಾಕಪ್​ನಲ್ಲಿ ಟೀಮ್​ ಇಂಡಿಯಾ ಅಕ್ಷರಶಃ ದರ್ಬಾರ್​ ನಡೆಸ್ತು. ಟೀಮ್​ ಇಂಡಿಯಾದ ಘರ್ಜನೆಗೆ ಎದುರಾಳಿ ಪಡೆಗಳು ವಿಲ ವಿಲ ಒದ್ದಾಡಿದ್ವು. ಆಡಿದ 6 ಪಂದ್ಯಗಳಲ್ಲೂ ಗೆದ್ದು ಬೀಗಿದ ಟೀಮ್​ ಇಂಡಿಯಾ ಅಜೇಯವಾಗಿ ಟ್ರೋಫಿ ಗೆದ್ದಿದೆ.

author-image
Bhimappa
gautam_gambhir_surya
Advertisment

ಟೀಮ್​ ಇಂಡಿಯಾ ಮತ್ತೆ ಏಷ್ಯನ್​ ಕಿಂಗ್​ ಪಟ್ಟವನ್ನ ಅಲಂಕರಿಸಿದೆ. ಬದ್ಧವೈರಿ ಪಾಕ್​ ಪಡೆಯನ್ನ ಬಗ್ಗು ಬಡಿದು ಟ್ರೋಫಿ ಗೆಲ್ಲೋದ್ರೋಂದಿಗೆ ಟಿ20ಗೆ ನಾವೇ ಕಿಂಗ್​ ಅನ್ನೋದನ್ನ ಮತ್ತೆ ನಿರೂಪಿಸಿದೆ. ಈ ಸಕ್ಸಸ್​​ನ ಸೀಕ್ರೆಟ್​ ಕೇವಲ ಆಟಗಾರರ ಆಟ ಮಾತ್ರವಲ್ಲ, ಡಗೌಟ್​​ನಲ್ಲೇ ಕುಳಿತು ತಂತ್ರ, ರಣತಂತ್ರಗಳನ್ನ ರೂಪಿಸ್ತಾ, ಆಟಗಾರರನ್ನ ಗೈಡ್​ ಮಾಡ್ತಿದ್ದ ಗುರು ಗಂಭೀರ್ ಕೂಡ ಈ ಗೆಲುವಿನ ರೂವಾರಿ.

Advertisment

ಏಷ್ಯಾಕಪ್​ ಮೆಗಾ ಟೂರ್ನಿಗೆ ಅದ್ದೂರಿ ತೆರೆಬಿದ್ದಿದೆ. ಫೈನಲ್​ ಫೈಟ್​ನಲ್ಲಿ ಬದ್ಧವೈರಿ ಪಾಕ್​ ಪಡೆಯನ್ನ ಚಿಂದಿ ಉಡಾಯಿಸಿದ ಟೀಮ್​ ಇಂಡಿಯಾ ಟ್ರೋಫಿಗೆ ಮುತ್ತಿಕ್ಕಿದೆ. 9ನೇ ಬಾರಿ ಏಷ್ಯಾದ ಕಿಂಗ್​ ಪಟ್ಟವನ್ನೇರಿದೆ. 

ಪಂತ್​ಗೆ ಪ್ರತಿ ವಿಚಾರಕ್ಕೂ ಅಡ್ಡಗಾಲು; ಟೀಂ ಇಂಡಿಯಾದಲ್ಲಿ ರಿಷಬ್ vs ಗಂಭೀರ್..!

ಈ ಬಾರಿಯ ಏಷ್ಯಾಕಪ್​ನಲ್ಲಿ ಟೀಮ್​ ಇಂಡಿಯಾ ಅಕ್ಷರಶಃ ದರ್ಬಾರ್​ ನಡೆಸ್ತು. ಟೀಮ್​ ಇಂಡಿಯಾದ ಘರ್ಜನೆಗೆ ಎದುರಾಳಿ ಪಡೆಗಳು ವಿಲ ವಿಲ ಒದ್ದಾಡಿದ್ವು. ಆಡಿದ 6 ಪಂದ್ಯಗಳಲ್ಲೂ ಗೆದ್ದು ಬೀಗಿದ ಟೀಮ್​ ಇಂಡಿಯಾ ಅಜೇಯವಾಗಿ ಟ್ರೋಫಿ ಗೆದ್ದಿದೆ. ಈ ಯಶೋಗಾಥೆಯ ಕ್ರೆಡಿಟ್​​ ಕೇವಲ ಆಟಗಾರರಿಗೆ ಮಾತ್ರವಲ್ಲ, ಹೆಡ್​ ಕೋಚ್​​ ಗೌತಮ್​ ಗಂಭೀರ್​ಗೂ ಸಲ್ಲಬೇಕು. 

ವೈಟ್​​ಬಾಲ್​ ಫಾರ್ಮೆಟ್​ನಲ್ಲಿ ಟೀಮ್​ ಇಂಡಿಯಾ ದರ್ಬಾರ್​.!

ಈಗ ಬದ್ಧವೈರಿ ಪಾಕ್​ ಪಡೆಯನ್ನ ಬಗ್ಗು ಬಡಿದು ಟೀಮ್​ ಇಂಡಿಯಾ ಏಷ್ಯಾಕಪ್​​ ಟ್ರೋಫಿ ಗೆಲ್ತಲ್ವಾ, ಇದೇ ದುಬೈ ಮೈದಾನದಲ್ಲಿ ಮೆನ್​ ಇನ್​ ಬ್ಲೂ ಪಡೆ 6 ತಿಂಗಳ ಹಿಂದೆ ಮತ್ತೊಂದು ಪ್ರತಿಷ್ಟಿತ ಟ್ರೋಫಿಯನ್ನ ಮುಡಿಗೇರಿಸಿಕೊಂಡಿತ್ತು. ಚಾಂಪಿಯನ್​​ ಟ್ರೋಫಿ ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡವನ್ನ ಮಣಿಸಿ ಚಾಂಪಿಯನ್ಸ್​ ಟ್ರೋಫಿ ಗೆದ್ದಿತ್ತು. 12 ವರ್ಷಗಳ ಸುದೀರ್ಘ ಅಂತರದ ಬಳಿಕ ಟೀಮ್​ ಇಂಡಿಯಾ ಗೆದ್ದ ಚಾಂಪಿಯನ್ಸ್​​ ಟ್ರೋಫಿ ಅದು. 

Advertisment

ಹೆಡ್​ಕೋಚ್​​ ಗೌತಮ್​​ ಗಂಭೀರ್​ಗೆ ಆಟಗಾರರ ಸಲಾಂ.!

ಕಳೆದೊಂದು ವರ್ಷದಿಂದ ವೈಟ್​ಬಾಲ್​ ಫಾರ್ಮೆಟ್​ನಲ್ಲಿ ಟೀಮ್​ ಇಂಡಿಯಾ ಅಕ್ಷರಶಃ ದರ್ಬಾರ್​ ನಡೆಸ್ತಿದೆ. ಟೀಮ್​ ಇಂಡಿಯಾದ ಗೆಲುವಿನ ಓಟವನ್ನ ತಡಿಯೋರೆ ಇಲ್ಲ. ಕ್ರಿಕೆಟ್​ ಜಗತ್ತಿನ ಬಲಾಢ್ಯರು ಅನಿಸಿಕೊಂಡ ತಂಡಗಳೂ ಟೀಮ್ ಇಂಡಿಯಾ ಮುಂದೆ ಮಂಡಿಯೂರಿವೆ. ಇದಕ್ಕೆ ಆಟಗಾರರ ಆಟ ಮಾತ್ರ ಕಾರಣವಲ್ಲ, ಗುರು ಗಂಭೀರ್​ ಪಾಠವೂ ಕಾರಣವಾಗಿದೆ. ಇದೀಗ ಏಷ್ಯಾಕಪ್​ ಗೆದ್ದ ಬೆನ್ನಲ್ಲೇ ಆಟಗಾರರು ಗುರುವಿಗೆ ಸಲಾಂ ಅಂತಿದ್ದಾರೆ. 

T20 ಫಾರ್ಮೆಟ್​​ನಲ್ಲಿ ಗುರು ಗಂಭೀರ್​​ಗೆ ಫುಲ್​ ಮಾರ್ಕ್ಸ್​.!​​​ 

2024ರ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟು ಟೀಮ್​ ಇಂಡಿಯಾದ ಹೆಡ್​ಕೋಚ್​ ಹುದ್ದೆಗೆ ರಾಹುಲ್​ ದ್ರಾವಿಡ್​​ ಗುಡ್​ ಬೈ ಹೇಳಿದ್ರು. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾರಂತಾ ದಿಗ್ಗಜ ಆಟಗಾರರು ಕೂಡ ನಿವೃತ್ತಿ ಘೋಷಿಸಿದ್ರು. ಯುವ ಆಟಗಾರರನ್ನ ಇಟ್ಟುಕೊಂಡು, ಟಿ20 ಚಾಂಪಿಯನ್​​ ಪಟ್ಟಕ್ಕೆ ತಕ್ಕಂತೆ ತಂಡವನ್ನ ಮುನ್ನಡೆಸಬೇಕಾದ ಜವಾಬ್ಧಾರಿ ನೂತನ ಕೋಚ್​ ಮುಂದಿತ್ತು. ಆ ಜವಾಬ್ದಾರಿಯಲ್ಲಿ ಗಂಭೀರ್​ ಸಮರ್ಥವಾಗಿ ನಿಭಾಯಿಸಿದ್ದಾರೆ. ಚುಟುಕು ಫಾರ್ಮೆಟ್​​ನಲ್ಲಿ​​ ಚಾಣಾಕ್ಯ ಗಂಭೀರ್ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಗೆಲುವಿನ ನಾಗಾಲೋಟ ನಡೆಸಿದೆ

ಗಂಭೀರ್​ ಮಾರ್ಗದರ್ಶನದಲ್ಲಿ T20ಯಲ್ಲಿ ಭಾರತ 

ಗೌತಮ್​ ಗಂಭೀರ್​​ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ​​T20 ಫಾರ್ಮೆಟ್​​ನಲ್ಲಿ 22 ಪಂದ್ಯಗಳನ್ನಾಡಿದೆ. ಈ ಪೈಕಿ 20 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 2 ಪಂದ್ಯ ಮಾತ್ರ ಸೋತಿದೆ. 90.90ರ ಗೆಲುವಿನ ಸರಾಸರಿ ಹೊಂದಿದೆ. 

Advertisment

ಏಕದಿನ ಮಾದರಿಯಲ್ಲೂ ಫಸ್ಟ್​​​ ಕ್ಲಾಸ್​​ನಲ್ಲಿ ಪಾಸ್​.!

ಟಿ20 ಫಾರ್ಮೆಟ್​ ಮಾತ್ರವಲ್ಲ, ಒನ್​ ಡೇ ಫಾರ್ಮೆಟ್​ನಲ್ಲೂ ಗಂಭೀರ್​​ ಫಸ್ಟ್​ ಕ್ಲಾಸ್​ನಲ್ಲಿ ಪಾಸ್​​ ಆಗಿದ್ದಾರೆ. ಕೋಚ್​ ಆದ ಆರೇ ತಿಂಗಳ ಅವಧಿಯಲ್ಲಿ ಚಾಂಪಿಯನ್ಸ್​ ಟ್ರೋಫಿಯನ್ನ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ಗೌತಮ್​ ಗಂಭೀರ್​​ದ್ದು. ಗಂಭೀರ್​​ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಒನ್​ ಡೇಯಲ್ಲಿ ಸೋತಿರೋದು ಜಸ್ಟ್​ 2 ಪಂದ್ಯ ಮಾತ್ರ. 

ಇದನ್ನೂ ಓದಿ:ಟೀಮ್ ಇಂಡಿಯಾದ ನಯಾ ರೈಸಿಂಗ್ ಸ್ಟಾರ್.. ಆಫ್​ ದಿ ಫೀಲ್ಡ್​ನಲ್ಲೂ ಅಭಿಷೇಕ್ ಶರ್ಮಾ ಕಮಾಲ್..!

Gautam_Gambhir (1)

ಗಂಭೀರ್​ ಮಾರ್ಗದರ್ಶನದಲ್ಲಿ ODIನಲ್ಲಿ ಭಾರತ 

ಗಂಭೀರ್​​ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಈವರೆಗೆ 11 ಏಕದಿನ ಪಂದ್ಯಗಳನ್ನಾಡಿದೆ. ಈ ಪೈಕಿ 8 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, 2 ಪಂದ್ಯ ಸೋತಿದೆ. 1 ಪಂದ್ಯ ರದ್ದಾಗಿದ್ದು, 72.72ರ ಗೆಲುವಿನ ಸರಾಸರಿ ಹೊಂದಿದೆ. 

Advertisment

ಟಿ20 ವಿಶ್ವಕಪ್ ಗೆಲುವು​ ಮುಂದಿನ ಟಾರ್ಗೆಟ್​.!

ಗಂಭೀರ್​ ಕೋಚ್​ ಆದ ಬಳಿಕ ರೆಡ್​ ಬಾಲ್​ ಫಾರ್ಮೆಟ್​ನಲ್ಲಿ ಟೀಮ್​ ಇಂಡಿಯಾ ಸ್ಟ್ರಗಲ್​ ಮಾಡಿದೆ ನಿಜ. ಆದ್ರೆ, ವೈಟ್​ಬಾಲ್​​ ಫಾರ್ಮೆಟ್​​​ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದೆ. ಸೀನಿಯರ್​ಗಳು ತಂಡದಿಂದ ದೂರಾಗಿದ್ರೂ, ಹೊಸದಾಗಿ ಬಂದಿರೋ ಯುವ ಆಟಗಾರರು ಗುರು ಗಂಭೀರ್​ ಮಾರ್ಗದರ್ಶನದಲ್ಲಿ ಬೊಂಬಾಟ್​ ಪ್ರದರ್ಶನ ನೀಡ್ತಿದ್ದಾರೆ. ಚಾಂಪಿಯನ್ಸ್​ ಟ್ರೋಫಿ, ಏಷ್ಯಾಕಪ್​ನಂತ ಪ್ರತಿಷ್ಟಿತ ಟ್ರೋಫಿ ಗೆದ್ದಿರೋ ಗಂಬೀರ್​  ಮುಂದಿನ ಟಾರ್ಗೆಟ್​ ಟಿ20 ವಿಶ್ವಕಪ್​ ಟ್ರೋಫಿ. ಫೆಬ್ರವರಿಯಲ್ಲಿ ನಡೆಯೋ ಟೂರ್ನಿಯಲ್ಲಿ ಹಾಲಿ ಚಾಂಪಿಯನ್​​ ಪಟ್ಟವನ್ನ ಉಳಿಸೋ ಸವಾಲು ಕೋಚ್​ ಗಂಭೀರ್​ ಮುಂದಿದೆ. ಟೀಮ್​ ಇಂಡಿಯಾದ ಸದ್ಯದ ಗೆಲುವಿನ ನಾಗಾಲೋಟವನ್ನ ನೋಡಿದ್ರೆ, ಟ್ರೋಫಿ ಗೆಲುವು ಕಷ್ಟದ್ದೇನಲ್ಲ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

asia cup trophy Gautam Gambhir Asia Cup 2025 Asia cup final
Advertisment
Advertisment
Advertisment