/newsfirstlive-kannada/media/media_files/2026/02/19/india-vs-netherlands-2026-02-19-09-12-13.jpg)
Photograph: (BCCI)
ಅಹ್ಮದಾಬಾದ್​ನ ನಮೋ ಮೈದಾನದಲ್ಲಿ ಟಾಸ್​ ಗೆದ್ದ ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್​ ಯಾದವ್​ ಮೊದಲು ಬ್ಯಾಟಿಂಗ್ ಆಯ್ದುಕೊಂಡ್ರು. ಬ್ಯಾಟಿಂಗ್​ಗಿಳಿದ ಆರಂಭದಲ್ಲೇ ಟೀಮ್​ ಇಂಡಿಯಾಗೆ ಹಿನ್ನಡೆ ಎದುರಾಯ್ತು. ನೆದರ್​ಲ್ಯಾಂಡ್​ ವಿರುದ್ಧವೂ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸೊನ್ನೆ ಸುತ್ತಿದ್ರು.
2ನೇ ವಿಕೆಟ್​ಗೆ ಜೊತೆಯಾದ ಇಶಾನ್​ ಕಿಶನ್​-ತಿಲಕ್ ವರ್ಮಾ 29 ರನ್​ಗಳ ಜೊತೆಯಾಟವಾಡಿದ್ರು. 7 ಎಸೆತ ಎದುರಿಸಿ 2 ಬೌಂಡರಿ, 1 ಸಿಕ್ಸರ್​ ಸಿಡಿಸಿದ ಇಶಾನ್​ ಕಿಶನ್​ 18 ರನ್​ಗಳಿಸಿದ್ರು. 5ನೇ ಓವರ್​​ನ 2 ಎಸೆತದಲ್ಲಿ ದುರಾದೃಷ್ಟಕರ ರೀತಿಯಲ್ಲಿ ಔಟಾದ್ರು.
ನೆದರ್​​ಲ್ಯಾಂಡ್​ ಎದುರು ತಿಲಕ್​ ವರ್ಮಾ ಎಚ್ಚರಿಕೆಯ ಆಟವಾಡಿದ್ರು. 3 ಬೌಂಡರಿ, 1 ಸಿಕ್ಸರ್​ ಸಿಡಿಸಿದ ತಿಲಕ್ 31 ರನ್​ಗಳ ಕಾಣಿಕೆ ನೀಡಿದ್ರು. ನಾಯಕ ಸೂರ್ಯಕುಮಾರ್​ ಯಾದವ್ ಕನ್ಸಿಸ್ಟೆನ್ಸಿ ಆಟ ಮುಂದುವರೆಸಿದ್ರು. 2 ಬೌಂಡರಿ, 1 ಸಿಕ್ಸರ್​ ಸಹಿತ 28 ಎಸೆತಗಳಲ್ಲಿ 34 ರನ್​ಗಳಿಸಿ ನಿರ್ಗಮಿಸಿದ್ರು.
ಇದನ್ನೂ ಓದಿ: ನಾ ನಿನ್ನ ಬಿಡಲಾರೆ: ‘ಒಪ್ಪಂದ ಆಗೊಯ್ತು’ ದುರ್ಗಾ-ಶರತ್ ಒಂದಾಗ್ತಾರಾ..?
/filters:format(webp)/newsfirstlive-kannada/media/media_files/2026/02/19/india-vs-netherlands-2-2026-02-19-09-13-53.jpg)
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಶಿವಂ ದುಬೆ ಅಹ್ಮದಾಬಾದ್​ನಲ್ಲಿ ಸಿಕ್ಸರ್​ ಸುರಿಮಳೆ ಸುರಿಸಿದ್ರು. ಅಬ್ಬರದ ಆಟವಾಡಿ ಡಚ್ಚರಿಗೆ ಡಿಚ್ಚಿ ಕೊಟ್ಟ ಶಿವಂ ದುಬೆ ಜಸ್ಟ್​ 25 ಎಸೆತಕ್ಕೆ ಹಾಫ್​ ಸೆಂಚುರಿ ಸಿಡಿಸಿದ್ರು. ಶಿವಂ ದುಬೆಗೆ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಸಾಥ್​ ನೀಡಿದ್ರು. ನಮೋ ಅಂಗಳದಲ್ಲಿ ಸಿಡಿದೆದ್ದ ಕುಂಗ್​ ಫು ಪಾಂಡ್ಯ ಅಂತಿಮ ಓವರ್​ಗಳಲ್ಲಿ ನೆದರ್​ಲ್ಯಾಂಡ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು.
5ನೇ ವಿಕೆಟ್​ಗೆ ಶಿವಂ ದುಬೆ, ಹಾರ್ದಿಕ್​ ಪಾಂಡ್ಯ 35 ಎಸೆತಗಳಲ್ಲಿ 76 ರನ್​ಗಳ ಜೊತೆಯಾಟವಾಡಿದ್ರು. 31 ಎಸೆತ ಎದುರಿಸಿದ ಶಿವಂ ದುಬೆ 4 ಬೌಂಡರಿ, 6 ಸಿಕ್ಸರ್​ ಸಹಿತ 66 ರನ್​ಗಳಿಸಿ ಔಟಾದ್ರು. 3 ಸಿಕ್ಸರ್​ ಸಿಡಿಸಿ ಮಿಂಚಿದ ಹಾರ್ದಿಕ್ ಪಾಂಡ್ಯ 30 ರನ್​ಗಳಿಸಿ ಔಟಾದ್ರೆ ರಿಂಕು ಸಿಂಗ್​ 6 ರನ್​ಗಳೊಂದಿಗೆ ಅಜೇಯರಾಗುಳಿದ್ರು. 20 ಓವರ್​ಗಳ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 193 ರನ್​ಗಳಿಸಿತು.
ಬಿಗ್ ಟಾರ್ಗೆಟ್​ ಚೇಸಿಂಗ್​ಗಿಳಿದ ನೆದರ್ಲೆಂಡ್ಸ್​ ತಂಡ ಟೀಮ್​ ಇಂಡಿಯಾ ತಕ್ಕಮಟ್ಟಿಗೆ ಫೈಟ್​ ಕೊಡ್ತು. ಇಂಡಿಯನ್​​ ಬೌಲರ್​ಗಳನ್ನ ಡಚ್​ ಬ್ಯಾಟರ್ಸ್​ ದಿಟ್ಟವಾಗಿ ಎದುರಿಸಿದ್ರು. ಆದ್ರೆ, ಗೆಲುವಿನ ದಡ ಸೇರಿಸುವಲ್ಲಿ ಫೇಲ್​ ಆದ್ರು. 194 ರನ್​ಗಳ ಚೇಸಿಂಗ್​ಗಿಳಿದ ನೆದರ್​ಲ್ಯಾಂಡ್​ ತಂಡಕ್ಕೆ ಮೈಕೆಲ್ ಲೆವಿಟ್, ಮ್ಯಾಕ್ಸ್ ಒ’ಡೌಡ್ ಎಚ್ಚರಿಕೆಯ ಆರಂಭ ಒದಗಿಸಿದ್ರು. 5 ಓವರ್​ ಅಂತ್ಯಕ್ಕೆ ವಿಕೆಟ್​ ನಷ್ಟವಿಲ್ಲದೇ 33 ರನ್​ಗಳಿಸಿ ಡಿಸೆಂಟ್​ ಸ್ಟಾರ್ಟ್​ ಪಡೆದುಕೊಳ್ತು.
ಇದನ್ನೂ ಓದಿ: ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಲೋಗೋ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ: ಫೆಬ್ರವರಿ 21 ರಿಂದ 3 ದಿನ ನಡೆಯುವ ಟೂರ್ನಿ
/filters:format(webp)/newsfirstlive-kannada/media/media_files/2026/02/19/india-vs-netherlands-1-2026-02-19-09-14-12.jpg)
ಪವರ್​ ಪ್ಲೇನ ಕೊನೆಯ ಓವರ್​ನಲ್ಲಿ ದಾಳಿಗಿಳಿದ ವರುಣ್​ ಚಕ್ರವರ್ತಿ ಬ್ರೇಕ್ ಥ್ರೂ ನೀಡಿದ್ರು. 20 ರನ್​ಗಳಿಸಿದ್ದ ಒ ಡೌಡ್​ ಕ್ಲೀನ್​ ಬೋಲ್ಡ್​ ಆಗಿ ನಿರ್ಗಮಿಸಿದ್ರು. 4 ಬೌಂಡರಿ ಬಾರಿಸಿ ಮಿಂಚಿದ್ದ ಮೈಕೆಲ್​ ಲೆವಿಟ್​​ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಹಾರ್ದಿಕ್ ಪಾಂಡ್ಯ ಲೆವಿಟ್​ ವಿಕೆಟ್​ ಬೇಟೆಯಾಡಿದ್ರು. 3ನೇ ವಿಕೆಟ್​ಗೆ ಜೊತೆಯಾದ ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ 49 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ರು. ಈ ಜೊತೆಯಾಟ ಹೆಚ್ಚು ಮುಂದುವರೆಯಲಿಲ್ಲ. 13ನೇ ಓವರ್​ನಲ್ಲಿ ದಾಳಿಗಿಳಿದ ವರುಣ್​ ಚಕ್ರವರ್ತಿ ಕಾಲಿನ್ ಅಕರ್ಮನ್​ ಗೆ ಪೆವಿಲಿಯನ್​ ದಾರಿ ತೋರಿಸಿದ್ರು.
ಬಳಿಕ ಬ್ಯಾಟಿಂಗ್​ಗೆ ಬಂದ ಆರ್ಯನ್ ದತ್​​ ಮೊದಲ ಎಸೆತದಲ್ಲೇ ಡಕೌಟ್​ ಆದ್ರು. ಮರು ಓವರ್​ನಲ್ಲೇ ಶಿವಂ ದುಬೆ ಬಾಸ್​ ಡಿ ಲೀಡೆ ವಿಕೆಟ್​ ಉರುಳಿಸಿದ್ರು. ನೆದರ್ಲೆಂಡ್ಸ್​ ತಂಡದ ಕ್ಯಾಪ್ಟನ್​ ಸ್ಕಾಟ್​​ ಎಡ್ವರ್ಡ್ಸ್​​, ಬೂಮ್ರಾ ಬಿರುಗಾಳಿಗೆ ತರಗೆಲೆಯಂತೆ ಉದುರಿದ್ರು. ಪರ್ಫೆಕ್ಟ್​ ಯಾರ್ಕರ್​ಗೆ ಕ್ಲೀನ್ ಬೋಲ್ಡ್​ ಆಗಿ ನಿರ್ಗಮಿಸಿದ್ರು. ಝಾಕ್ ಲಯನ್ - ನೋಹ್​​​ ಕ್ರೋಯ್ಸ್​ ಕೊನೆಯವರೆಗೂ ಹೋರಾಟ ನಡೆಸಿದ್ರೂ ಗೆಲುವಿನ ದಡ ಸೇರಿಸಲಾಗಲಿಲ್ಲ. ಝಾಕ್ ಲಯನ್ 26 ರನ್​ಗಳಿಸಿ ಔಟಾದ್ರೆ, ಕ್ರೋಯ್ಸ್​​ 25 ರನ್​ಗಳಿಸಿ ಅಜೇಯರಾಗುಳಿದ್ರು.
ಇದನ್ನೂ ಓದಿ: ಭಾರತದಲ್ಲಿ ಎಐ ಅಭಿವೃದ್ದಿಗಾಗಿ 15 ಬಿಲಿಯನ್ ಡಾಲರ್ ಹೂಡಿಕೆಗೆ ಗೂಗಲ್ ನಿರ್ಧಾರ- ಭಾರತ ಅಮೆರಿಕಾದ ಮಧ್ಯೆ ಸೀ ಕೇಬಲ್ ಲಿಂಕ್ ನಿರ್ಮಾಣ
ಅಂತಿಮವಾಗಿ 20 ಓವರ್​ಗಳ ಅಂತ್ಯಕ್ಕೆ 7 ವಿಕೆಟ್​ ಕಳೆದುಕೊಂಡ ನೆದರ್ಲೆಂಡ್​​ 176 ರನ್​ಗಳಿಸಿತು. ಭಾರತದ ಪರ ವರುಣ್​ ಚಕ್ರವರ್ತಿ, ಶಿವಂ ದುಬೆ 2, ಹಾರ್ದಿಕ್​, ಬೂಮ್ರಾ ತಲಾ 1 ವಿಕೆಟ್​ ಕಬಳಿಸಿದ್ರು. ಟೀಮ್​ ಇಂಡಿಯಾ 17 ರನ್​ಗಳ ಭರ್ಜರಿ ಜಯ ಸಾಧಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us