/newsfirstlive-kannada/media/media_files/2026/02/18/naa-ninna-bidalare-kannada-serial-2026-02-18-16-50-09.jpg)
ನಾ ನಿನ್ನ ಬಿಡಲಾರೆ.. ಅಯ್ಯೋ ಟೆನ್ಯನ್​ ಆಗ್ಬೇಡಿ ನಾನಲ್ಲ.. ನಾನೇಳ್ತಿರೋದು ನಾ ನಿನ್ನ ಬಿಡಲಾರೆ ಸಿರಿಯಲ್​ ಬಗ್ಗೆ.. ದುರ್ಗಾಳಿಗೆ ಶರತ್​ ಮೇಲೆ ಲವ್​ ಆಗಿದೆ. ಆ ಪ್ರೀತಿನಾ ಶರತ್​ ಬಳಿ ಹೇಳ್ಕೊಬೇಕು ಅಂತಾ ದುರ್ಗ ನೂರಾರು ಕನಸು ಕಾಣ್ತಿದ್ಲು.. ಆದ್ರೆ ಶರತ್​ನ ಮಾತಿನಿಂದ ದುರ್ಗಾ ಕನಸು ನುಚ್ಚು ನೂರಾಗಿದೆ. ಹಾಗಾದ್ರೆ ದುರ್ಗಾ ಮುಂದೇನು ಮಾಡ್ತಾಳೆ? ಶರತ್​ನಿಂದ ದೂರವಾಗ್ತಾಳಾ? ಅಂಬಿಕಾ ಶರತ್​ ಹಾಗೂ ದುರ್ಗಾಳನ್ನ ಒಂದು ಮಾಡ್ತಾಳಾ? ಇದೇ ಸದ್ಯಕಿರೋ ಕುತೂಹಲ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿರಿಯಾನಿ ತಿನ್ನುವ ಮುನ್ನ ಹುಷಾರ್- ಸ್ಟಾರ್ ಅಂಬೂರ್ ಧಮ್ ಬಿರಿಯಾನಿ ಹೋಟೇಲ್ ನಲ್ಲಿ ಕೊಳೆತ ಚಿಕನ್ ಪತ್ತೆ!!
/filters:format(webp)/newsfirstlive-kannada/media/media_files/2026/02/18/naa-ninna-bidalare-kannada-serial-2-2026-02-18-16-50-30.jpg)
Zee ಕನ್ನಡದಲ್ಲಿ ಪ್ರಸಾರವಾಗ್ತಿರೋ ದುಷ್ಟಶಕ್ತಿ ದೈವಶಕ್ತಿಯ ನಡುವಿನ ಹೊರಾಟದ ನಾ ನಿನ್ನ ಬಿಡಲಾರೆ ಸೀರಿಯಲ್ ಹೊಸ ಹೊಸ ಟ್ವಿಸ್ಟ್ ಕೊಡ್ತಾ ಕುತೂಹಲ ಎಚ್ಚಿಸ್ತಿದೆ. ಶರತ್​ ಅಂಬಿಕಾಳನ್ನ ಪ್ರೀತಿಸಿ ಮದುವೆಯಾಗಿದ್ದ. ಆದ್ರೆ ಮಾಲವಿಕಾಳಿಂದ ಅಂಬಿಕಾ ಸಾವನಪ್ಪಿದ್ದು, ದೆವ್ವವಾಗಿ ಪ್ರತ್ಯಕ್ಷವಾಗಿದ್ದಾಳೆ. ಆದ್ರೆ ಅಂಬಿಕಾ ಆತ್ಮ ದುರ್ಗಾಗೆ ಮಾತ್ರ ಕಾಣಿಸುತ್ತಿದೆ. ಈ ನಡುವೆ ಶರತ್​ ದುರ್ಗಾಳನ್ನೇ 2ನೇ ಮದುವೆಯಾಗ್ತಾನೆ. ಆದ್ರೆ ಆಕೆಯನ್ನ ಹೆಂಡತಿಯಾಗಿ ಒಪ್ಪಿಕೊಳ್ಳುದಿಲ್ಲ. ಇನ್ನು ದುರ್ಗಾಳಿಗೂ ಅಷ್ಟೇ ಶರತ್​ ಕಂಡ್ರೆ ಅಷ್ಟಕ್ಕೆ ಅಷ್ಟೇ ಅನ್ನೋ ರೀತಿ ಇತ್ತು.
ಇದೀಗ ದುರ್ಗಾಳಿಗೆ ಶರತ್​ ಮೇಲೆ ಲವ್​ ಶುರುವಾಗಿದೆ. ಇದಕ್ಕೆ ಅಂಬಿಕಾಳ ಸಪೋರ್ಟ್ ಕೂಡ ಇದೆ. ಸದ್ಯ ಹಿತಾಳನ್ನು ಮುಗಿಸಿ ಸರ್ವಶಕ್ತಿ ತನ್ನ ವಶ ಮಾಡಿಕೊಳ್ಳಲು ಮಾಳವಿಕಾ ಹೊಂಚು ಹಾಕ್ತಿದ್ದಾಳೆ. ಹೀಗಾಗಿ ಹಿತಾಳನ್ನ ಬಲಿ ಕೊಡೋಕೆ ಮಾಳವಿಕಾ ಮಂತ್ರದಿಂದ ತಂತ್ರ ರೂಪಿಸಿ ಬಲೆ ಬೀಸಿದ್ಲು. ಹಿತಾ ಇನ್ನೇನು ಬಲೆಯಲ್ಲಿ ಬಿದ್ದೆಬಿಟ್ಲು ಎನ್ನುವಷ್ಟರಲ್ಲಿ ಶರತ್ ಕಾಳಿ ಅವತಾರ ಎತ್ತಿ ಹಿತಾಳನ್ನ ರಕ್ಷಿಸ್ತಾನೆ. ಇದ್ರಿಂದ ಮಾಳವಿಕಾ ಪ್ಲಾನ್ ಫ್ಲಾಪ್​ ಆಗಿ ಅಪ್ಪ-ಮಗಳು ಒಂದಾಗುವ ಹಾಗೆ ಆಗಿದೆ. ಹಿತ ನಿಧಾನವಾಗಿ ಮತ್ತೆ ಶರತ್​ನನ್ನ ಒಪ್ಪಿಕೊಳ್ಳಲು ಶುರುಮಾಡಿದ್ದಾಳೆ.
ಈ ನಡುವೆ ದುರ್ಗಾಳಿಗೆ ಶರತ್​ ಮೇಲೆ ಲವ್​ ಆಗಿದೆ. ಸೋ ಮಣಿ ದುರ್ಗಾ ಬಳಿ ನಿನ್ನ ಪ್ರೀತಿಯನ್ನ ಶರತ್​ ಬಳಿ ಹೇಳ್ಕೊ ಅಂತಾ ಐಡಿಯೂ ಕೊಡುತ್ತೆ. ಮಣಿ ಹೇಳಿದಂತೆ ನಾನು ನನ್ನ ಪ್ರೀತಿಯಾನ್ನ ಶರತ್​ ಬಳಿ ಹೇಳಿಕೊಂಡ್ರೆ ಅವರು ಒಪ್ಪಿಕೊಳ್ತಾರ ಅಂತಾ ಯೋಚಿಸ್ತಾ ಪ್ರೀತಿಯಾ ಅಲೆಯಲ್ಲೆ ತೇಳ್ತಾ ಇರುತ್ತಾಳೆ.. ಆದ್ರೆ ಇಲ್ಲೆ ಇರೋದು ನೋಡಿ ಟ್ವಿಸ್ಟ್​.. ದುರ್ಗಾ ಹೃದಯದಲ್ಲಿ ಪ್ರೀತಿ ಚಿಗುರೊಡೆಯೋ ಸಮಯದಲ್ಲೆ ಶರತ್​ ಮಾತು ದುರ್ಗಾಳನ್ನ ಬಾಡುವಂತೆ ಮಾಡುತ್ತೆ.
ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ರುದ್ರ ಮಾಸ್ಟರ್.. ಹಳದಿ ಶಾಸ್ತ್ರದ ವಿಡಿಯೋ ವೈರಲ್..!
/filters:format(webp)/newsfirstlive-kannada/media/media_files/2026/02/18/naa-ninna-bidalare-kannada-serial-1-2026-02-18-16-50-55.jpg)
ಶರತ್​ ದುರ್ಗಾಳ ಬಳಿ ಬಂದು ಹಿತಾ ಮೊದಲಂತೆ ನಗ್ತಾ ಇದ್ದಾಳೆ ಅಂದ್ರೆ ಅದಕ್ಕೆ ನೀನೆ ಕಾರಣ.. ಆದ್ರೆ ಪ್ರೀತಿ ಅನ್ನೋ ವಿಷಯ ಬಂದ್ರೆ ಅಂಬಿಕಾಳನ್ನ ಬಿಟ್ರೆ ಬೇರೆ ಯಾರನ್ನ ಪ್ರೀತಿಸಲು ಸಾಧ್ಯವಿಲ್ಲ.. ನನ್ನ ಜೀವನದಲ್ಲಿ ಪ್ರೀತಿ ಅನ್ನೋ ಅರ್ಥಕ್ಕೆ ಅವಳೇ ಮೊದಲು ಅವಳೆ ಕೊನೆ ಅಂತಾ ಹೇಳಿದ್ದಾನೆ. ಇದ್ರಿಂದ ದುರ್ಗಾ ಮನಸ್ಸು ಒಡೆದು ಹೋಗಿದೆ.
ಸದ್ಯ ಶರತ್​ ಮುಂದೆ ಅಂಬಿಕಾ ಪ್ರತ್ಯಕ್ಷವಾಗಿದ್ದಾಳೆ.. ಶರತ್​ ಬಳಿ ನೀವು ಕಳೆದುಕೊಂಡಿದ್ದು ನಿಮಗೆ ಸಿಕ್ಕಿದ್ರು ನೀವು ಅನಾಥ ಪ್ರಜ್ಞೆಯಲ್ಲಿ ಬಾಳ್ತಿದ್ದೀರಾ. ಹೀತಾಗೆ ತಾಯಿ ಆಗಲು ದುರ್ಗಾ ಯೋಗ್ಯ ಅಂತ ಆದ್ರೆ ನಿಮಗೆ ಹೆಂಡ್ತಿ ಆಗೋಕೆ ಅವಳು ಯಾಕೆ​ ಯೋಗ್ಯಳಲ್ಲ ಅಂತಾ ಪ್ರಶ್ನೆ ಮಾಡ್ತಾಳೆ. ನನಗೋಸ್ಕರ ದುರ್ಗಾ ಪ್ರೀತಿನಾ ಒಪ್ಪಿಕೊಳ್ತೀನಿ ಅಂತಾ ಮಾತು ಕೊಡ್ತೀರಾ ಅಂತಾ ಕೇಳ್ತಾಳೆ. ಅದಕ್ಕೆ ಶರತ್​ ನಿನಗೋಸ್ಕರ ಅವಳನ್ನ ಪ್ರೀತಿಸೋದಕ್ಕೆ ಟ್ರೈ ಮಾಡ್ತೀನಿ ಅಂತಾ ಮಾತು ಕೊಡ್ತಾನೆ. ಮುಂದೆ ಅಂಬಿಕಾ ಆಸೆಯಂತೆ ಶರತ್​ ದುರ್ಗಾಳ ಪ್ರೀತಿಯನ್ನ ಒಪ್ಪಿಕೊಳ್ತಾನಾ? ದುರ್ಗಾ ಶರತ್​ ಒಂದಾಗ್ತಾರ? ಅನ್ನೋದನ್ನ ಕಾದುನೋಡಬೇಕಾಗಿದೆ.
ಇದನ್ನೂ ಓದಿ: ಸಾಮಾಜಿಕ ಮನ್ನಣೆಯ ಒತ್ತಡಕ್ಕಾಗಿ ಮದುವೆಯಾದೆ- ನಟಿ ನೀನಾ ಗುಪ್ತಾರಿಂದ ಪ್ರಾಮಾಣಿಕ ಹೇಳಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us