Advertisment

ಮದುವೆ ಸಂಭ್ರಮದಲ್ಲಿ ರುದ್ರ ಮಾಸ್ಟರ್.. ಹಳದಿ ಶಾಸ್ತ್ರದ ವಿಡಿಯೋ ವೈರಲ್..!

ರುದ್ರ ಮಾಸ್ಟರ್​. ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಳೆದ ಹಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಕೊರಿಯೋಗ್ರಾಫರ್ ಆಗಿ ರುದ್ರ ಮಾಸ್ಟರ್​ ವೀಕ್ಷಕರ ಮನೆ ಮಾತಾಗಿದ್ದಾರೆ.

author-image
Ganesh Kerekuli
rudra master (7)
Advertisment

ರುದ್ರ ಮಾಸ್ಟರ್​. ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಳೆದ ಹಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್  ಶೋನಲ್ಲಿ ಕೊರಿಯೋಗ್ರಾಫರ್ ಆಗಿ ರುದ್ರ ಮಾಸ್ಟರ್​ ವೀಕ್ಷಕರ ಮನೆ ಮಾತಾಗಿದ್ದಾರೆ. ಸದಾ ಕೆಲಸದಲ್ಲಿ ಬ್ಯುಸಿಯಾಗಿದ್ದ ರುದ್ರ ಮಾಸ್ಟರ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸೋಶಿಯಲ್​ ಮಿಡಿಯಾದಲ್ಲಿ ಅವರ ಹಳದಿ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮದ ವಿಡಿಯೋ ಸಖತ್​ ವೈರಲ್​ ಆಗ್ತಿದೆ.

Advertisment

ಇದನ್ನೂ ಓದಿ:ಬೆಂಗಳೂರಿನಲ್ಲಿ ಬಿರಿಯಾನಿ ತಿನ್ನುವ ಮುನ್ನ ಹುಷಾರ್‌- ಸ್ಟಾರ್‌ ಅಂಬೂರ್ ಧಮ್ ಬಿರಿಯಾನಿ ಹೋಟೇಲ್ ನಲ್ಲಿ ಕೊಳೆತ ಚಿಕನ್ ಪತ್ತೆ!!

rudra master (6)

ರುದ್ರ ಮಾಸ್ಟರ್. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಲವು ರಿಯಾಲಿಟಿ ಶೋಗಳಿಗೆ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಅದ್ರಲ್ಲೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ತಮ್ಮದೇ ಸ್ಟೈಲ್​ನಲ್ಲಿ ವೀಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಕನ್ನಡ ಬಿಗ್‌ಬಾಸ್‌ 12ನೇ ಸೀಸನ್​ನಲ್ಲಿ 3ನೇ ರನ್ನರ್‌ ಅಪ್ ಆಗಿರುವ ಕಾವ್ಯ ಶೈವ ಹಾಗೂ ಶಂಶಾಕ್​ ಕಳೆದ ಬಾರಿ ಡಿಕೆಡಿ ವಿನ್ನರ್​ ಆಗಿದ್ರು. ಇವರಿಗೆ ಕೊರಿಯೋಗ್ರಾಫರ್ ಆಗಿದ್ದವರು ರುದ್ರ ಮಾಸ್ಟರ್. ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋನಲ್ಲಿ ಹೀಗೆ ಹಲವಾರು ಜೋಡಿಗಳ ಗೆಲುವಿಗೆ ರುದ್ರ ಮಾಸ್ಟರ್ ಕಾರಣರಾಗಿದ್ರು.

rudra master (4)

ಪ್ರತಿಯೊಂದು ಮಾತಿಗೂ ಸಂಕೋಚದಿಂದ ಉತ್ತರ ಕೊಡುವ ರುದ್ರ ಮಾಸ್ಟರ್ ಅಂದ್ರೆ ಎಲ್ಲರಿಗೂ ಫೇವ್​ರೆಟ್​. ಹಲವು ಹೆಣ್ಣು ಮಕ್ಕಳ ಕ್ರಷ್​.  ಗ್ಯಾಪ್​ನಲ್ಲಿ ರುದ್ರ ಮಾಸ್ಟರ್​ ಲವ್​ನಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ರಿಯಾಲಿಟಿ ಶೋ ಅಂದ್ರೆನೇ ಹಾಗೇ.. ತಮಾಷೆ ಮಾಡೋದು ಕಾಲೆಳೆಯೋದು ಸರ್ವೇ ಸಾಮಾನ್ಯ.. ಅದ್ರಂತೆ ರುದ್ರ ಮಾಸ್ಟರ್ ಹಾಗೂ ಬೃಂದಾ ಪ್ರಭಾಕರ್‌ ಲವ್​ ಮಾಡ್ತಿದ್ದಾರೆ ಎಂಬ ಗಾಸಿಪ್​ ಹರಿದಾಡುತ್ತಿತ್ತು. ಈ ಇಬ್ಬರ ಜೋಡಿ ಎಷ್ಟು ಚೆನ್ನಾಗಿದೆ ಅಂತಾ ವೀಕ್ಷಕರು ಕೊಂಡಾಡಿದ್ದರು.

Advertisment

ಇದನ್ನೂ ಓದಿ: ಮಂಗಳಮುಖಿ, ಆಟೋ ಚಾಲಕನ ಮಧ್ಯೆ ಪ್ರೀತಿ-ಪ್ರೇಮ -ಈಗ ದುರಂತ ಅಂತ್ಯ, ಆಗಿದ್ದೇನು? 

rudra master (1)

ಬಳಿಕ ಕಾವ್ಯ ಶೈವ ಹಾಗೂ ರುದ್ರ ಮಾಸ್ಟರ್​ ಲವ್​ ಮಾಡ್ತಿದ್ದಾರೆ ಎಂಬ ಗಾಸಿಪ್​ ಶುರುವಾಯ್ತು. ಯಾಕಂದ್ರೆ ಕಾವ್ಯ ಶೈವ ರುದ್ರ ಮಾಸ್ಟರ್‌ಗೆ ಪತ್ರವೊಂದನ್ನು ಬರೆದಿದ್ರು. ಫಸ್ಟ್​ ಟೈಮ್​ ಲೆಟರ್​ ಬರೆದಿದ್ದಾಗಿ ಹೇಳಿ ಸ್ಟೇಜ್​ ಮೇಲೆ ಪತ್ರವನ್ನ ಕೊಟ್ಟಿದ್ರು.  ವಿಡಿಯೋ ಸಖತ್ ವೈರಲ್​ ಆಗಿತ್ತು. ಇಬ್ಬರದು ಕ್ಯೂಟ್‌ ಜೋಡಿ, ಸೂಪರ್‌ ಜೋಡಿ ಎಂದು ಹಲವರು ಕಮೆಂಟ್‌ ಕೂಡ ಹಾಕಿದ್ರು. ಈ ಎಲ್ಲಾ ಗಾಸಿಪ್​ಗಳಿಗೆ ರುದ್ರ ಮಾಸ್ಟರ್​ ತೆರೆ ಎಳೆದಿದ್ದಾರೆ.

rudra master


 
ರುದ್ರ ಮಾಸ್ಟರ್​ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಈ ಹಿಂದೆ ರುದ್ರ ಮಾಸ್ಟರ್‌ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ರುದ್ರ ಮಾಸ್ಟರ್‌ ನಿರೀಕ್ಷಾ ಜೊತೆಗೆ ವಿವಾಹ ವಾಗಲಿದ್ದಾರೆ. ಸದ್ಯ ರುದ್ರ ಮಾಸ್ಟರ್‌ ಹಾಗೂ ನಿರೀಕ್ಷಾ  ಅರಿಶಿನ ಶಾಸ್ತ್ರ ಹಾಗೂ ಸಂಗೀತ್​ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಸಂಗೀತ್​ ಕಾರ್ಯಕ್ರಮದಲ್ಲೂ ನವ ಜೋಡಿ ಭರ್ಜರಿ ಸ್ಟೆಪ್ಸ್​ ಹಾಕಿದೆ. ಈ ವಿಡಿಯೋಗಳೂ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ.

Advertisment

ಇದನ್ನೂ ಓದಿ: ಬ್ಯಾಂಕ್‌ನಲ್ಲಿಟ್ಟ ಚಿನ್ನ ಗುಳುಂ.. ಸತ್ತವ್ರ ಹೆಸ್ರಲ್ಲಿ ಲೋನ್ ಮಾಡಿ ಸ್ವಾಹ.. ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ..!

rudra master (3)

ರುದ್ರ ಮಾಸ್ಟರ್​ ಮದುವೆ ನಡೆಯುತ್ತಿದೆ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ರುದ್ರಾ ಮಾಸ್ಟರ್​ಗೆ ವಿಶ್​ಗಳ ಮಹಾಪೂರವೇ ಹರಿದು ಬರುತ್ತಿದೆ. ಕೆಲಸದಲ್ಲಿ ಸದಾ ಬ್ಯುಸಿಯಾಗಿ ಇರ್ತಿದ್ದ ರುದ್ರಾ ಮಾಸ್ಟರ್​ ಈಗ ರಿಯಲ್​ ಲೈಫ್​ನಲ್ಲೂ ಬ್ಯುಸಿ ಆಗ್ತಿದ್ದಾರೆ. ಆದ್ರೆ ಇದು ಲವ್​ ಮ್ಯಾರೆಜ್ವೋ, ಅರೇಂಜ್​ ಮ್ಯಾರೆಜೋ ಅನ್ನೋದಕ್ಕೆ ರುದ್ರಾ ಮಾಸ್ಟರ್​ ಹಾಗೂ ನಿರೀಕ್ಷಾನೇ ಕ್ಲಾರಿಟಿ ಕೊಡಬೇಕಿದೆ. 

rudra master (2)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rudra Master
Advertisment
Advertisment
Advertisment