ಬೌಂಡರಿ ಬರ.. ಸಿಕ್ಸರ್​ ಬರ.. ರನ್​ಗೂ ಬರ.. ಸೂರ್ಯಗೆ ಇದು ಲಾಸ್ಟ್​ ಚಾನ್ಸ್​..!

ನ್ಯೂಜಿಲೆಂಡ್​ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಮ್​ ಇಂಡಿಯಾ ನಾಯಕನ ಆಟ ಹೆಚ್ಚು ಚರ್ಚೆಯಲ್ಲಿದೆ. ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್​ ಯಾದವ್​ ಡಿಸ್ಟಿಂಕ್ಷನ್​​ನಲ್ಲಿ ಪಾಸ್​ ಆಗಿದ್ದಾರೆ. ಬ್ಯಾಟಿಂಗ್​ನಲ್ಲಿ ಫೇಲ್​ ಆಗಿದ್ದಾರೆ. ಕಿವೀಸ್​ ಸರಣಿಯಲ್ಲಾದ್ರೂ ಸೂರ್ಯನಿಗೆ ಹಿಡಿದಿರೋ ಗ್ರಹಣ ಬಿಡುತ್ತಾ?

author-image
Ganesh Kerekuli
Surya kumar yadav
Advertisment
  • ಟೀಮ್​ ಇಂಡಿಯಾ ಟಿ20 ನಾಯಕನಿಗೆ ‘ಗ್ರಹಣ’
  • ಹಳಿ ತಪ್ಪಿದ ಸೂರ್ಯಕುಮಾರ್​​ ಯಾದವ್​ ಆಟ​
  • ಸೌತ್​ ಆಫ್ರಿಕಾ ವಿರುದ್ಧವೂ ಶೈನ್​ ಆಗದ ಸೂರ್ಯ

ಭಾರತ- ನ್ಯೂಜಿಲೆಂಡ್​ ಟಿ20 ಸರಣಿ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್​ ಯಾದವ್​ ಹೆಡ್​ಲೈನ್ ಆಗಿದ್ದಾರೆ. ಫ್ಲಾಪ್​ ಮೇಲೆ ಫ್ಲಾಪ್​ ಶೋ ನೀಡ್ತಿರೋ ಸೂರ್ಯನಿಗೆ ಈ ಸರಣಿ ಮೋಸ್ಟ್​ ಇಂಪಾರ್ಟೆಂಟ್​​. ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾ ಆಡ್ತಾ ಇರೋ ಕೊನೆಯ ಸರಣಿ ಇದಾಗಿದೆ. ಈ ಸರಣಿಯಲ್ಲಿ ಸೂರ್ಯಕುಮಾರ್​ ಯಾದವ್​ ಟ್ರ್ಯಾಕ್​ ಮರಳಬೇಕಿದೆ.

ಇದನ್ನೂ ಓದಿ: ಮಹಿಳಾ ಒಳಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್, ಕದ್ದ ಬಳಿಕ ಏನು ಮಾಡ್ತಿದ್ದ ಗೊತ್ತಾ..?

Suryakumara yadav

ಟೀಮ್​ ಇಂಡಿಯಾ ಟಿ20 ನಾಯಕನಿಗೆ ‘ಗ್ರಹಣ’

ಟಿ20 ಕ್ರಿಕೆಟ್​​ನ ಬ್ರ್ಯಾಂಡ್ ಅಂಬಾಸಿಡರ್..  ಚುಟುಕು ಕ್ರಿಕೆಟ್​ನ ಈ ಬ್ರ್ಯಾಂಡ್​​ ಒಮ್ಮೆ ಸಿಡಿದು ನಿಂತ್ರೆ ಸ್ಫೋಟ ಫಿಕ್ಸ್​. ಬಾಲ್​ ಡಾಟ್ ಅನ್ನೋ ಪದವನ್ನೇ ಇಷ್ಟ ಪಡದ ಡೆಡ್ಲಿಯೆಸ್ಟ್ ಬ್ಯಾಟರ್. ವಿಶ್ವ ಕ್ರಿಕೆಟ್​ ಲೋಕ ಹೀಗೆ ನಾನಾ ಹೆಸರುಗಳಿಂದ ಸೂರ್ಯಕುಮಾರ್​ ಯಾದವ್​ನ ಕೊಂಡಾಡ್ತಿತ್ತು. ಈ ಸೂರ್ಯನಿಗೆ ಕಳೆದೊಂದು ವರ್ಷದಿಂದ ಹಿಡಿದಂತಿದೆ. ಪ್ರಜ್ವಲಿಸ್ತಿದ್ದ ಸೂರ್ಯ ಮಂಕಾಗಿದ್ದಾನೆ.

ಶೈನ್​ ಆಗದ ಸೂರ್ಯ

ಸತತ ವೈಫಲ್ಯ ಅನುಭವಿಸಿದ್ದ ಸೂರ್ಯಕುಮಾರ್​ ಯಾದವ್​, 2025ರ ಅಂತ್ಯದಲ್ಲಿ ನಡೆದ ಸೌತ್​ ಆಫ್ರಿಕಾ ಸರಣಿಯಲ್ಲಾದ್ರೂ, ಕಮ್​​ಬ್ಯಾಕ್​ ಮಾಡ್ತಾರೆ ಅನ್ನೋದು ಕ್ರಿಕೆಟ್​​ ಲೋಕದ ನಿರೀಕ್ಷೆಯಾಗಿತ್ತು. ಆದ್ರೆ, ಸೌತ್​ ಆಫ್ರಿಕಾ ವಿರುದ್ಧವೂ ಸೂರ್ಯ ಶೈನ್​ ಆಗಲಿಲ್ಲ. ಸರಣಿಯಲ್ಲಿ ಆಡಿದ 4 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 34 ರನ್​.! 8.50ರ ಹೀನಾಯ ಸರಾಸರಿಯಲ್ಲಿ ಬ್ಯಾಟ್​ ಬೀಸಿದ ಸೂರ್ಯ ಸಿಡಿಸಿದ್ದು ಕೇವಲ 1 ಸಿಕ್ಸರ್​, 4 ಬೌಂಡರಿ ಮಾತ್ರ.

ಇದನ್ನೂ ಓದಿ: ಗಿಲ್ ಫುಲ್ ಡಲ್.. ODI ಕ್ಯಾಪ್ಟನ್ಸಿ ಸ್ಥಾನಕ್ಕೂ ಬಂತು ಕುತ್ತು..!?

Surya and sundar

ಬೌಂಡರಿ ಬರ! ಸಿಕ್ಸರ್​ ಬರ! ರನ್​ಗೂ ಬರ! 

2025.. ಈ ವರ್ಷವೇ ಸೂರ್ಯಕುಮಾರ್​ ಪಾಲಿಗೆ ಅನ್​ಲಕ್ಕಿ.! ಈ ಕ್ಯಾಲೆಂಡರ್​ ವರ್ಷದಲ್ಲಿ ವೈಫಲ್ಯದಲ್ಲೇ ಸೂರ್ಯಕುಮಾರ್​ ಮುಳುಗೆದ್ರು. 2025ರಲ್ಲಿ 21 ಪಂದ್ಯಗಳನ್ನ ಆಡಿದ ಸೂರ್ಯ ಒಂದೇ ಒಂದು ಅರ್ಧಶತಕ ಸಿಡಿಸಲಿಲ್ಲ. 13.62ರ ಹೀನಾಯ ಸರಾಸರಿಯಲ್ಲಿ 218 ರನ್​ಗಳಿಸಿದ ಇಂಡಿಯನ್​ ಕ್ಯಾಪ್ಟನ್ ​ಕೇವಲ 123.16ರ ಸಾದಾರಣ ಸ್ಟ್ರೈಕ್​ರೇಟ್​ ಹೊಂದಿದ್ರು. ಬೌಂಡರಿ-ಸಿಕ್ಸರ್​​ಗಳ ಸಲೀಸಾಗಿ ಸಿಡಿಸಿ ಫ್ಯಾನ್ಸ್​ಗೆ ಟ್ರೀಟ್​ ನೀಡ್ತಿದ್ದ ಸೂರ್ಯ ಕಳೆದ ವರ್ಷ ಸಿಡಿಸಿದ್ದು ಕೇವಲ 18 ಬೌಂಡರಿ, 10 ಸಿಕ್ಸರ್​ ಮಾತ್ರ.!

ಸೂರ್ಯಕುಮಾರ್​ ಸೂರ್ಯಾಸ್ತದ ಕಡೆಗೆ 2024ರಿಂದಲೇ ಮುಖ ಮಾಡಿದ್ದಾರೆ. ಬಿಗ್​​ ಸ್ಟೇಜ್​ ಟಿ20 ವಿಶ್ವಕಪ್​​ನಲ್ಲಿ ಕೂಡ ಸೂರ್ಯನ ಅಬ್ಬರ ನಡೆಯಲಿಲ್ಲ. 2024ರ ಕ್ಯಾಲೆಂಡರ್​ ವರ್ಷದಲ್ಲಿ ಕೇವಲ 29.10ರ ಸರಾಸರಿಯಲ್ಲಿ ರನ್​ಗಳಿಸಿದ್ರು. 11 ಪಂದ್ಯವನ್ನಾಡಿದ್ದ ಸೂರ್ಯ ಕೇವಲ 291 ರನ್​ಗಳಿಸಿದ್ರು. 

ಪ್ರೈಮ್​ ಫಾರ್ಮ್​ನಲ್ಲಿದ್ದಾಗ ಟಿ20 ಕ್ರಿಕೆಟ್​ನ ಸುಲ್ತಾನ ಎನಿಸಿಕೊಂಡಿದ್ದ ಸೂರ್ಯಕುಮಾರ್​ ಈಗ ಅಗ್ನಿ ಪರೀಕ್ಷೆಯ ಕಣದಲ್ಲಿದ್ದಾರೆ. ಪ್ರತಿಷ್ಠಿತ ಟಿ20 ವಿಶ್ವಕಪ್​ ಟೂರ್ನಿ ಈ ಬಾರಿ ನಡೀತಾ ಇರೋದು ಭಾರತದಲ್ಲಿ. ಚಾಂಪಿಯನ್​ ಪಟ್ಟವನ್ನ ಡಿಫೆಂಡ್​ ಮಾಡಿಕೊಳ್ಳಬೇಕಾದ ಬಹುದೊಡ್ಡ ಜವಾಬ್ಧಾರಿ ಸೂರ್ಯಕುಮಾರ್​ ಯಾದವ್​ ಮೇಲಿದೆ. ಪ್ರತಿಷ್ಟಿತ ಟೂರ್ನಿಯಲ್ಲಿ ಸಾರಥಿ ಸೂರ್ಯ ತಂಡವನ್ನ ಮುಂದೆ ನಿಂತು ಲೀಡ್​ ಮಾಡಬೇಕಿದೆ. ಆದ್ರೆ, ಫಾರ್ಮ್​ ಸಮಸ್ಯೆ ಸೂರ್ಯನಿಗೆ ಅಡ್ಡಗಾಲಾಗಿದೆ. ನ್ಯೂಜಿಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ವೈಫಲ್ಯವನ್ನ ಮೆಟ್ಟಿ ನಿಲ್ಲಬೇಕಿದೆ.ಮಿಸ್ಟೆಕ್ಸ್​ ಮೇಲೆ ವರ್ಕೌಟ್​ ಮಾಡಿ ಸೂರ್ಯ ಶೈನ್​ ಆಗಬೇಕಿದೆ.  

ಇದನ್ನೂ ಓದಿ: ಬ್ಯಾಡ್ಮಿಂಟನ್ ಕ್ರೀಡೆಯಿಂದ ಅಧಿಕೃತ ನಿವೃತ್ತಿ ಘೋಷಿಸಿದ ಸೈನಾ ನೆಹ್ವಾಲ್‌: ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Surya kumar Yadav IND vs NZ
Advertisment