/newsfirstlive-kannada/media/media_files/2025/11/27/gambhir-and-gill-2025-11-27-10-31-33.jpg)
ಟೀಮ್​ ಇಂಡಿಯಾ ಒನ್​ ಡೇ ಕ್ಯಾಪ್ಟನ್​ ಶುಭ್​ಮನ್​ ಗಿಲ್​ಗೆ ಹೊಸ ಸಂಕಷ್ಟ ಆರಂಭವಾಗಿದೆ. ಈಗಾಗಲೇ ಟಿ20 ಫಾರ್ಮೆಟ್​ನಿಂದ ಹೊರಬಿದ್ದರೋ ಗಿಲ್​ಗೆ ಒನ್​ ಡೇ ಫಾರ್ಮೆಟ್​​ನಲ್ಲೂ ಸ್ಥಾನದ ಅಭದ್ರತೆ ಶುರುವಾಗಿದೆ. ಸಿಕ್ಕಾಪಟ್ಟೆ ಬಿಲ್ಡಪ್​ ಕೊಟ್ಟು ನೆಕ್ಸ್ಟ್​​ ಕೊಹ್ಲಿ ಎಂದು ಹೊಗಳಿ ಅಟ್ಟಕ್ಕೇರಿಸಿದವರೇ ಇಂದು ಗಿಲ್​ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡೋಕೆ ಆರಂಭಿಸಿದ್ದಾರೆ.
ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ಟೀಮ್​ ಇಂಡಿಯಾವನ್ನ ಚಾಂಪಿಯನ್​ ಪಟ್ಟವೇರಿಸಿದ ರೋಹಿತ್​ ಶರ್ಮಾಗೆ ನಾಯಕತ್ವದಿಂದ ಹೇಳದೇ ಕೇಳದೆ ಕೊಕ್​ ಕೊಟ್ಟ ಸೆಲೆಕ್ಟರ್ಸ್​​ ಯುವ ಶುಭ್​ಮನ್​ ಗಿಲ್​ಗೆ ಪಟ್ಟ ಕಟ್ಟಿದ್ರು. ಆಸಿಸ್​ ಸರಣಿಗೂ ಮುನ್ನ ಸಾರಥ್ಯವಹಿಸಿಕೊಂಡ ಗಿಲ್​ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಆದ್ರೆ, ಆ ನಿರೀಕ್ಷೆ ಈಗ ಹುಸಿಯಾಗಿದೆ. ಒನ್​ ಡೇ ಫಾರ್ಮೆಟ್​​ನಲ್ಲಿ ನಾಯಕನಾಗಿ ತಂಡವನ್ನ ಮುನ್ನಡೆಸಿದ ಎರಡೂ ಸರಣಿಗಳಲ್ಲಿ ಗಿಲ್​ ತಂಡವನ್ನ ಗೆಲ್ಲಿಸುವಲ್ಲಿ ಎಡವಿದ್ದಾರೆ.
ಇದನ್ನೂ ಓದಿ:ಮುಂಬೈ ಮೇಯರ್ ಸ್ಪರ್ಧೆಯ ಫೈಟ್ ಇನ್ನೂ ಮುಗಿದಿಲ್ಲ: ನಮಗೆ 6 ಸ್ಥಾನ ಮಾತ್ರ ಕೊರತೆ ಇದೆ -ಸಂಜಯ ರಾವತ್
/filters:format(webp)/newsfirstlive-kannada/media/media_files/2025/11/06/suryakumar_gill_indvsaus-2025-11-06-10-52-20.jpg)
ಗಿಲ್​ ಏಕದಿನ ಕ್ಯಾಪ್ಟನ್​ ಆಗಿ ಮೊದಲು ತಂಡವನ್ನ ಮುನ್ನಡೆಸಿದ್ದು ಆಸ್ಟ್ರೇಲಿಯಾದಲ್ಲಿ. ಆಸಿಸ್​ ಪ್ರವಾಸದ ಮೊದಲ ಎರಡು ಪಂದ್ಯಗಳಲ್ಲೇ ಟೀಮ್​ ಇಂಡಿಯಾ ಸೋಲುಂಡಿತು. ಕೊನೆಯ ಪಂದ್ಯ ಗೆದ್ದರೂ 2-1 ಅಂತರದಲ್ಲಿ ಸರಣಿ ಕಾಂಗರೂಗಳ ಪಾಲಾಯ್ತು. ಭಾರತದಲ್ಲಿ ತಂಡವನ್ನ ಮುನ್ನಡೆಸಿದ ಮೊದಲ ಸರಣಿಯಲ್ಲೂ ಕ್ಯಾಪ್ಟನ್​ ಗಿಲ್​ಗೆ​ ಹೀನಾಯ ಸೋಲಿನ ದರ್ಶನವಾಗಿದೆ. ಸರಣಿ ಗೆದ್ದು ನ್ಯೂಜಿಲೆಂಡ್​​ ಭಾರತದಲ್ಲಿ ಇತಿಹಾಸ ರಚಿಸಿದ್ರೆ, ಟೀಮ್​ ಇಂಡಿಯಾ ಸೋತು ಸುಣ್ಣವಾಗಿದೆ.
ನಾಯಕನಾದ ಬಳಿಕ ಶುಭ್​ಮನ್​ ಗಿಲ್​ ಬ್ಯಾಟಿಂಗ್​ ಕೂಡ ಫುಲ್​ ಡಲ್​ ಆಗಿದೆ. 6 ಪಂದ್ಯಗಳಿಂದ ಕೇವಲ 178 ರನ್​ಗಳಿಸಿದ್ದಾರೆ. ಜಸ್ಟ್​ 29.66ರ ಸರಾಸರಿಯಲ್ಲಿ ಗಿಲ್​ ಬ್ಯಾಟ್​ ಬೀಸಿದ್ದಾರೆ. ನಾಯಕನ ಪಟ್ಟವೇರೋಕೂ ಮುನ್ನ ಲೀಲಾಜಾಲವಾಗಿ ಬ್ಯಾಟ್​ ಬೀಸ್ತಾ ಇದ್ರು. ಆದ್ರೀಗ, ಗಿಲ್​ ಬ್ಯಾಟಿಂಗ್​ನಲ್ಲಿ ಆ ಖದರ್​ ಮಾಯವಾಗಿದೆ. ಹೀಗಾಗಿ ನಾಯಕತ್ವ ಗಿಲ್​ಗೆ ಹೊರೆಯಾಗ್ತಿದ್ಯಾ.? ಎಂಬ ಪ್ರಶ್ನೆಯೂ ಹುಟ್ಟಿದೆ.
ಇದನ್ನೂ ಓದಿ:ಹಿಂದೂಗಳ ಭಾವನೆಗೆ ದಕ್ಕೆ ಆರೋಪ; ರಿಂಕು ಸಿಂಗ್ ವಿರುದ್ಧ ಬಿತ್ತು ಕೇಸ್..!
/filters:format(webp)/newsfirstlive-kannada/media/media_files/2025/10/29/gill-1-2025-10-29-17-25-45.jpg)
ನಾಯಕನಾಗಿ ಮೊದಲ 2 ಸರಣಿ ಸೋಲ್ತಿದ್ದಂತೆ ಶುಭ್​ಮನ್​ ಗಿಲ್​ ಕ್ಯಾಪ್ಟನ್ಸಿ ಸ್ಟೈಲ್​ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಂಡವನ್ನ ಮುನ್ನಡೆಸಿದ 2 ಸರಣಿಗಳಲ್ಲೂ ನಾಯಕನಾಗಿ ಗಿಲ್​ ಇಂಪ್ರೆಸ್​ ಮಾಡಿಲ್ಲ. ಟ್ಯಾಕ್ಟಿಕ್ಸ್​​, ಗೇಮ್​ ಪ್ಲಾನ್​, ಬೌಲಿಂಗ್​ ರೊಟೇಶನ್​ ಎಲ್ಲಾ ವಿಚಾರದಲ್ಲಿ ಗಿಲ್​ ಫೇಲ್​ ಆಗಿದ್ದಾರೆ. ಬ್ಯಾಟ್ಸ್​ಮನ್​ ಆಗಿಯೂ ಗಿಲ್​ ವೈಫಲ್ಯ ಕಂಡಿದ್ದಾರೆ. ಇದೇ ತಂಡವನ್ನ ಲೀಡ್​ ಮಾಡಿ ಕನ್ನಡಿಗ ಕೆ.ಎಲ್​ ರಾಹುಲ್​ ಸೌತ್​ ಆಫ್ರಿಕಾ ಎದುರು ತಿಂಗಳ ಹಿಂದಷ್ಟೇ ಸರಣಿ ಗೆಲ್ಲಿಸಿದ್ರು. ಆದ್ರೆ, ಗಿಲ್​ ನಾಯಕತ್ವದಲ್ಲಿ ಭಾರತ ತಂಡ ಸೋತಿದೆ. 2027ರಲ್ಲಿ ಮಹತ್ವದ ವಿಶ್ವಕಪ್​ ಟೂರ್ನಿ ಇರೋದ್ರಿಂದ ನಾಯಕತ್ವ ಬದಲಾವಣೆ ಬಗ್ಗೆ ಬಿಸಿಸಿಐ ಚಿಂತಿಸೋ ಸಾಧ್ಯತೆಯೂ ಇದೆ.
ಗಿಲ್​ ಫುಲ್ ಡಲ್
ಗಿಲ್​ನ ಆಲ್​​ಫಾರ್ಮೆಟ್​ ಕ್ಯಾಪ್ಟನ್​ ಮಾಡೋಕೆ ಮುಂದಾಗಿದ್ದ ಬಿಸಿಸಿಐ ಟಿ20 ಫಾರ್ಮೆಟ್​ಗೂ ಸರ್​​​​ಪ್ರೈಸ್​​ ರೀತಿಯಲ್ಲಿ ಕರೆತಂದಿತ್ತು. ಜೊತೆಗೆ ವೈಸ್​ ಕ್ಯಾಪ್ಟನ್​ ಪಟ್ಟವನ್ನೂ ಕಟ್ಟಿತ್ತು. ಆದ್ರೆ, ಗಿಲ್​ ಟಿ20 ಫಾರ್ಮೆಟ್​ನಲ್ಲಿ ಸತತ ವೈಫಲ್ಯ ಕಂಡರು. ಪರಿಣಾಮ ಟಿ20 ವಿಶ್ವಕಪ್​ ತಂಡದಿಂದಲೇ ಹೊರಬಿದ್ದಿದ್ದಾರೆ. ಇದೀಗ ಏಕದಿನ ಫಾರ್ಮೆಟ್​ನಲ್ಲೂ ಗಿಲ್​ ಫುಲ್​ ಡಲ್​ ಆಗಿದ್ದಾರೆ. ಟೆಸ್ಟ್​ ಕ್ರಿಕೆಟ್​​ನಲ್ಲಿ ಉತ್ತಮ ಫಾರ್ಮ್​ನಲ್ಲಿರೋ ಗಿಲ್, ವೈಟ್​ಬಾಲ್​ ಫಾರ್ಮೆಟ್​ನಲ್ಲಿ ವೈಫಲ್ಯದ ಸುಳಿಗೆ ಸಿಲುಕಿರೋದು ಅಚ್ಚರಿ ಮೂಡಿಸಿದೆ.
2 ಪಂದ್ಯಗಳ ವೈಫಲ್ಯಕ್ಕೆ ಏಕದಿನ ಫಾರ್ಮೆಟ್​ನಿಂದ ಗಿಲ್​ ತಲೆದಂಡವಾಗೋದು ಅನುಮಾನವೇ. ಟೀಮ್​ ಇಂಡಿಯಾದ ಮುಂದಿನ ಏಕದಿನ ಸರಣಿ ಇರೋದು ಜುಲೈನಲ್ಲಿ. ಜುಲೈನಲ್ಲಿ ಟೀಮ್​ ಇಂಡಿಯಾ ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಲಿದ್ದು, ಆ ಸರಣಿಯ ಪರ್ಫಾಮೆನ್ಸ್​​​ ಆಧಾರದಲ್ಲಿ ಗಿಲ್​ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ:ಕೋಚ್ ಗಂಭೀರ್ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್.. ಅದೆಷ್ಟು ಸರಣಿ ಸೋಲು ಸಹಿಸೋದು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us