ಭಾರತ-ನ್ಯೂಜಿಲೆಂಡ್​ T20 ಮ್ಯಾಚ್.. ಹೇಗಿರುತ್ತೆ ಟೀಂ ಇಂಡಿಯಾ ಪ್ಲೇಯಿಂಗ್-11?

ಏಕದಿನ ಸರಣಿ ಸೋಲಿನ ಬಳಿಕ ಇದೀಗ ಟೀಮ್ ಇಂಡಿಯಾ, ಟಿ-20 ಸರಣಿಗೆ ಸಜ್ಜಾಗ್ತಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲಿ ಹೋದ ಮಾನವನ್ನ ಟಿ-20 ಸರಣಿಯಲ್ಲಿ ಹುಡುಕಲು ಮುಂದಾಗಿದೆ. ನಾಗ್ಪುರ್ ಪಂದ್ಯಕ್ಕೆ ಯಂಗ್ ಇಂಡಿಯಾ ಯಾವ ರೀತಿ ತಯಾರಿ ನಡೆಸಿಕೊಂಡಿದೆ?

author-image
Ganesh Kerekuli
IND vs NZ
Advertisment

ಟಿ-20 ವಿಶ್ವಕಪ್​​ಗೂ ಮುನ್ನ ನ್ಯೂಜಿಲೆಂಡ್ ಸರಣಿ, ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದ ಸರಣಿಯಾಗಿದೆ. ವಿಶ್ವಕಪ್​ಗೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಕಿವೀಸ್ ವಿರುದ್ಧದ 5 ಪಂದ್ಯಗಳ ಟಿ-20 ಸರಣಿ, ಟೀಮ್ ಇಂಡಿಯಾ ಪಾಲಿಗೆ ರಿಹರ್ಸಲ್ ಸರಣಿಯಾಗಿದೆ. ಈ ಸರಣಿಯಲ್ಲೇ ಟೀಮ್ ಇಂಡಿಯಾ, ವಿಶ್ವಕಪ್​​ಗೆ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡೋದು.. ಹಾಗಾಗಿ ಒಂದೊಂದು ಪಂದ್ಯ ಯಂಗ್ ಇಂಡಿಯಾಕ್ಕೆ ಪಾಠ ಇದ್ದಂತೆ.

ಇದನ್ನೂ ಓದಿ: ದಂಪತಿ ದುರಂತ ಅಂತ್ಯಕ್ಕೆ ಟ್ವಿಸ್ಟ್.. ದೊಡ್ಡಪ್ಪ, ದೊಡ್ಡಮ್ಮನಿಗೇ ಮುಹೂರ್ತ ಇಟ್ಟಿದ್ದು ವೈದ್ಯ ಮೊಮ್ಮಗ..!?

kuldeep yadava

ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್​, ನಾಗ್ಪುರದಲ್ಲಿ ಕಣಕ್ಕಿಳಿಯೋ ಓಪನರ್ಸ್​. ಕಿವೀಸ್​​ ಬೌಲರ್​ಗಳನ್ನ ಧ್ವಂಸ ಮಾಡಲು ತುದಿಗಾಲಲ್ಲಿ ನಿಂತಿರುವ ಅಭಿಷೇಕ್ ಮತ್ತು ಸಂಜು, ಡಿಸ್ಟ್ರಕ್ಟೀವ್ ಸ್ಟಾರ್ಟ್​ ನೀಡೋ ಉತ್ಸಾಹದಲ್ಲಿದೆ. ಕಮ್​​ಬ್ಯಾಕ್ ಹೀರೋ ಶ್ರೇಯಸ್ ಅಯ್ಯರ್, ನಾಯಕ ಸೂರ್ಯಕುಮಾರ್ ಯಾದವ್​ರಂತಹ ಅನುಭವಿ ಬ್ಯಾಟರ್ಸ್​ ಇದ್ದಾರೆ. ಶ್ರೇಯಸ್​​ಗೆ ಈ ಸರಣಿ ಅಗ್ನಿಪರೀಕ್ಷೆಯ ಸರಣಿಯಾದ್ರೆ, ವಿಶ್ವಕಪ್​ಗೂ ಮುನ್ನ ಫಾರ್ಮ್​​ ಕಂಡುಕೊಳ್ಳಲು ಸೂರ್ಯಕುಮಾರ್​ಗೆ ಅತ್ಯಂತ ಮಹತ್ವದಾಗಿದೆ.

ಇನ್​ಫಾರ್ಮ್​ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಪ್ಲೇಯಿಂಗ್ ಇಲೆವೆನ್​​ನಲ್ಲಿ ಎಂಟ್ರಿ ಕೊಡೋ ಸೂಚನೆ ಇದೆ. ಆದ್ರೆ ಟಾಪ್ ಆರ್ಡರ್​ನಲ್ಲಾ..? ಅಥವಾ ಮಿಡಲ್ ಆರ್ಡರ್​​ನಲ್ಲಾ ಅಂತ ಗೊತ್ತಿಲ್ಲ. ಆಲ್​ರೌಂಡರ್ ಶಿವಂ ದುಬೆ ಮೇಲೂ ಟೀಮ್ ಮ್ಯಾನೇಜ್ಮೆಂಟ್​ಗೆ ಕಣ್ಣಿದೆ. ಹಾಗಾಗಿ ಇಬ್ಬರಲ್ಲಿ ಯಾರು ವೇಯ್ಟಿಂಗ್ ಲಿಸ್ಟ್​ನಲ್ಲಿ ಇರ್ತಾರೆ ಅನ್ನೋದು ಕ್ಲಾರಿಟಿ ಇಲ್ಲ.

ಫಿನಿಷರ್ ರಿಂಕು ಸಿಂಗ್, ಪ್ಲೇಯಿಂಗ್ ಇಲೆವೆನ್​​ನಲ್ಲಿ ಸ್ಥಾನ ಪಡೆಯಲು ತೀವ್ರ ಕಸರತ್ತು ನಡೆಸಬೇಕಿದೆ. ಕಾರಣ, ಈಗಾಗಲೇ ಹರ್ಷಿರ್ ರಾಣಾ, ಬ್ಯಾಟಿಂಗ್​ನಲ್ಲಿ ಪರಾಕ್ರಮ ತೋರಿಸಿದ್ದಾರೆ. ಕೋಚ್ ಗಂಭೀರ್, ರಾಣಾರನ್ನ ಫಿನಿಷರ್ ಆಗಿ ನೋಡ್ತಾರಾ ಅಥವಾ ಸ್ಪೆಷಲಿಸ್ಟ್ ಬೌಲರ್​ ಆಗಿ ನೋಡ್ತಾರಾ ಅನ್ನೋದ್ರ ಮೇಲೆ, ರಿಂಕು ಸ್ಥಾನ ನಿರ್ಧಾರವಾಗಲಿದೆ.

ಇದನ್ನೂ ಓದಿ: ಗಿಲ್ಲಿ ಅಭಿಮಾನಿಗಳಿಗೆ ಕೈಮುಗಿದು ಕ್ಷಮೆ ಕೇಳಿದ ಮ್ಯೂಟಂಟ್ ರಘು..! VIDEO

Suryakumara yadav

ಕುಲ್​ದೀಪ್ ಯಾದವ್, ವರುಣ್ ಚಕ್ರವರ್ತಿ  ಪ್ಲೇಯಿಂಗ್ ಇಲೆವೆನ್​ನಲ್ಲಿ ಆಡೋದು ಪಕ್ಕಾ..! ಆದ್ರೂ ಲೆಗ್​ಸ್ಪಿನ್ನರ್ ರವಿ ಬಿಷ್ನೋಯ್, ಕುಲ್​ದೀಪ್ ಮತ್ತು ವರುಣ್ ಜೊತೆ ಸ್ಥಾನಕ್ಕಾಗಿ ಕಾಂಪೀಟ್ ನಡೆಸಲಿದ್ದಾರೆ. ಆರಂಭದಲ್ಲಿ ಬಿಷ್ನೊಯ್​ಗೆ ಚಾನ್ಸ್​ ಸಿಗದಿದ್ರೂ, ಸರಣಿ ಅಂತ್ಯದಲ್ಲಾದ್ರೂ ಒಂದೆರೆಡು ಪಂದ್ಯಗಳು ಅಡೋ ಚಾನ್ಸ್ ಅಂತ ಸಿಗೋ ಸಾಧ್ಯತೆ ಇದೆ.

ಏಕದಿನ ಸರಣಿಯಲ್ಲಿ ಹೊಸಬರನ್ನ ಆಡಿಸಿದ್ದ ನ್ಯೂಜಿಲೆಂಡ್, ಟಿ-20 ಸರಣಿಗೆ ಅನುಭವಿ ಮತ್ತು ಸೂಪರ್​ಸ್ಟಾರ್ ಆಟಗಾರರು ಕಣಕ್ಕಿಳಿಸಲಿದೆ. ಮಿಚ್ಚೆಲ್ ಸ್ಯಾಂಟ್ನೆರ್ ನಾಯಕತ್ವದ ಕಿವೀಸ್, ಟಿ-ಟ್ವೆಂಟಿ ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಆತ್ಮವಿಶ್ವಾಸಕ್ಕೆ ಹೊಡೆತ ಕೊಡಲು ಕಾಯುತ್ತಿದೆ. 

ಪ್ರತಿಷ್ಟೆ, ಪೈಪೋಟಿ, ಜಿದ್ದಾಜಿದ್ದಿ ಎಲ್ಲವನ್ನೂ ಈ ಟಿ-20 ಸರಣಿಯಲ್ಲಿ ನೋಡಬಹುದು. ಹಾಗಾಗಿ ಈ ಸರಣಿ, ಕ್ರಿಕೆಟ್ ಅಭಿಮಾನಿಗಳಿಗೆ ಫುಲ್ ಎಂಟರ್​ಟೈನ್ಮೆಂಟ್ ನೀಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ದಂಪತಿ ದುರಂತ ಅಂತ್ಯಕ್ಕೆ ಟ್ವಿಸ್ಟ್.. ದೊಡ್ಡಪ್ಪ, ದೊಡ್ಡಮ್ಮನಿಗೇ ಮುಹೂರ್ತ ಇಟ್ಟಿದ್ದು ವೈದ್ಯ ಮೊಮ್ಮಗ..!?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

T20I India vs NewZealand IND vs NZ
Advertisment