ಏಷ್ಯಾ ಕಪ್ ಫೈನಲ್​ನಲ್ಲಿ ಈವರೆಗೂ ಭಾರತ- ಪಾಕಿಸ್ತಾನ ಮುಖಾಮುಖಿ ಆಗಿವೆಯಾ..?

ಟೀಮ್​ ಇಂಡಿಯಾ 8 ಬಾರಿ ಚಾಂಪಿಯನ್​ ಆಗಿದ್ರೆ, ಶ್ರೀಲಂಕಾ 6 ಬಾರಿ ಗೆದ್ದಿದೆ. ಆದ್ರೆ, ಪಾಕಿಸ್ತಾನ ಗೆದ್ದಿರೋದು ಕೇವಲ 2 ಬಾರಿ ಮಾತ್ರ. ಇನ್ನೊಂದು ಇಂಟರೆಸ್ಟಿಂಗ್​ ವಿಚಾರ ಏನಂದ್ರೆ, ಏಷ್ಯಾಕಪ್​ನಲ್ಲಿ ಇಂಡಿಯಾ- ಪಾಕಿಸ್ತಾನ ಹಲವು ಬಾರಿ ಮುಖಾಮುಖಿಯಾಗಿವೆ. ಆದ್ರೆ..

author-image
Bhimappa
VIRAT_KOHLI (3)
Advertisment

ಏಷ್ಯಾಕಪ್​ ಟೂರ್ನಿಯ ಹೈವೋಲ್ಟೆಜ್​ ಕದನಕ್ಕೆ ಕೌಂಟ್​​​ಡೌನ್​ ಶುರುವಾಗಿದೆ. ದುಬೈ ಅಂಗಳದಲ್ಲಿ ಬದ್ಧವೈರಿಯನ್ನ ಬಗ್ಗು ಬಡಿದು ದರ್ಬಾರ್​ ನಡೆಸೋಕೆ ಟೀಮ್​ ಇಂಡಿಯಾ ಸಜ್ಜಾಗಿದೆ. ಎದುರಾಳಿ ಪಾಕಿಸ್ತಾನ ಕೂಡ ತಂತ್ರ-ರಣತಂತ್ರಗಳನ್ನ ಹೆಣೆಯುತ್ತಿದೆ. ಆದ್ರೆ, ಇತಿಹಾಸ ಮಾತ್ರ ಟ್ರೋಫಿ ಟೀಮ್​ ಇಂಡಿಯಾದ್ದೇ ಅಂತಿದೆ.

INTENTION, PASSION, EMOTION, AGGRESION ,TENSION.. ಇದೆಲ್ಲದರ ಕಂಪ್ಲೀಟ್​​ ಪ್ಯಾಕೇಜ್​​. ಏಷ್ಯಾಕಪ್​ ಟೂರ್ನಿಯ ಹೈವೋಲ್ಟೆಜ್​ ಗೇಮ್​​ಗೆ ಕೌಂಟ್​ಡೌನ್​ ಶುರುವಾಗಿದೆ. ಸೂಪರ್​ ಸಂಡೇ ಅಲ್ಲಿ ಮಹತ್ವದ ಕಾದಾಟದಲ್ಲಿ ಇಂಡಿಯಾ-ಪಾಕಿಸ್ತಾನ ಮುಖಾಮುಖಿ ಆಗಲಿವೆ. ಕ್ರಿಕೆಟ್​ ಲೋಕ ಬದ್ಧವೈರಿಗಳ ನಡುವಿನ ಕಾದಾಟ ನೋಡಲು ಜಾತಕ ಪಕ್ಷಿಯಂತೆ ಕಾಯ್ತಿದೆ.  

Team India (13)

ಈ ಬಾರಿ ಇನ್ನಷ್ಟು ಹೆಚ್ಚಿದೆ ಅಭಿಮಾನಿಗಳ ಕ್ರೇಜ್​.!

ಈ ಬಾರಿಯ ಏಷ್ಯಾಕಪ್​ ಟೂರ್ನಿ ಅಭಿಮಾನಿಗಳಲ್ಲಿ ಇನ್ನಷ್ಟು ಕ್ರೇಜ್​ ಹುಟ್ಟು ಹಾಕಿದೆ. ಇಂದು ನಡೆಯೋ ಲೀಗ್​ ಹಂತದ ಪಂದ್ಯದ ಮಾತ್ರವಲ್ಲ, ಅದಾದ ಬಳಿಕವೂ ಇಂಡೋ-ಪಾಕ್​ ತಂಡಗಳು ರನ್​ಭೂಮಿಯಲ್ಲಿ ಮುಖಾಮುಖಿಯಾಗೋ ಸಾಧ್ಯತೆಯಿದೆ. ಸೂಪರ್​ 4 ಹಂತದಲ್ಲಿ ಒಂದು ಬಾರಿಯಾದ್ರೆ, ಫೈನಲ್​​ಗೆ ಪಾಕ್​ ಬಂದ್ರೆ ಮತ್ತೊಂದು ಬಾರಿ ಬದ್ಧವೈರಿಗಳ ನಡುವೆ ಕಾಳಗ ನಡೆಯಲಿದೆ. ಇದು ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದ ಕ್ರಿಕೆಟ್​ ಅಭಿಮಾನಿಗಳಲ್ಲಿ ಸ್ಪೆಷಲ್​ ಕ್ರೇಜ್​ ಹುಟ್ಟುಹಾಕಿದೆ.

ಫಸ್ಟ್​ ಟೈಂ ಫೈನಲ್​ನಲ್ಲಿ ಇಂಡೋ-ಪಾಕ್​ ಮುಖಾಮುಖಿ.?

ಏಷ್ಯಾಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ 8 ಬಾರಿ ಚಾಂಪಿಯನ್​ ಆಗಿದ್ರೆ, ಶ್ರೀಲಂಕಾ 6 ಬಾರಿ ಗೆದ್ದಿದೆ. ಆದ್ರೆ, ಪಾಕಿಸ್ತಾನ ಗೆದ್ದಿರೋ ಕೇವಲ 2 ಬಾರಿ ಮಾತ್ರ. ಇನ್ನೊಂದು ಇಂಟರೆಸ್ಟಿಂಗ್​ ವಿಚಾರ ಏನಂದ್ರೆ, ಏಷ್ಯಾಕಪ್​ನಲ್ಲಿ ಟೀಮ್​ ಇಂಡಿಯಾ- ಪಾಕಿಸ್ತಾನ ಹಲವು ಬಾರಿ ಮುಖಾಮುಖಿಯಾಗಿವೆ. ಆದ್ರೆ, ಈವರೆಗೆ ಫೈನಲ್​ನಲ್ಲಿ​ ಎದುರು ಬದುರಾಗಿಲ್ಲ. ಕಪ್​​ ಗೆಲ್ಲೋ ಫೇವರಿಟ್​ ಅನಿಸಿಕೊಂಡಿರೋ ಟೀಮ್​ ಇಂಡಿಯಾ ಫೈನಲ್​ಗೆ ಬರೋ ಸಾಧ್ಯತೆ ಹೆಚ್ಚಿದೆ. ಆದ್ರೆ, ಪಾಕಿಸ್ತಾನ ಬರುತ್ತಾ ಅನ್ನೋದೆ ಪ್ರಶ್ನೆಯಾಗಿದೆ. ಒಂದು ವೇಳೆ ಫೈನಲ್​ಗೆ ಬಂದ್ರೆ ಪಂದ್ಯದ ಕ್ರೇಜ್​ ನೆಕ್ಸ್ಟ್​ ಲೆವೆಲ್​ನಲ್ಲಿರಲಿದೆ. 

ಏಷ್ಯಾಕಪ್​ನಲ್ಲಿ ಟೀಮ್​ ಇಂಡಿಯಾದ್ದೇ ದರ್ಬಾರ್​​.!

ಏಷ್ಯಾಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾನೇ ದರ್ಬಾರ್​ ನಡೆಸಿದೆ. ಇಂಡೋ-ಪಾಕ್​ ಎದುರಾದಾಗಲೆಲ್ಲಾ ಮೆನ್​ ಇನ್​ ಬ್ಲೂ ಪಡೆಯ ಹುಲಿಗಳು ಘರ್ಜಿಸಿದ್ದಾರೆ. ಒನ್​ ಡೇ ಫಾರ್ಮೆಟ್​ ಇರಲಿ, ಟಿ20 ಫಾರ್ಮೆಟ್​ ಇರಲಿ, ಪಾಕ್​ ಎದುರು ಟೀಮ್​ ಇಂಡಿಯಾ ಮೇಲುಗೈ ಸಾಧಿಸಿದೆ. 

ಏಷ್ಯಾಕಪ್​ನಲ್ಲಿ ಪಾಕ್​ ಎದುರು ಭಾರತ

ಏಷ್ಯಾಕಪ್​ನಲ್ಲಿ ಭಾರತ -ಪಾಕಿಸ್ತಾನ ತಂಡಗಳು ಈವರೆಗೆ ಒಟ್ಟು 18 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಏಕದಿನದಲ್ಲಿ 15 ಪಂದ್ಯಗಳನ್ನಾಡಿದ್ದು 8 ಪಂದ್ಯದಲ್ಲಿ ಟೀಮ್​ ಇಂಡಿಯಾ ಜಯ ಸಾಧಿಸಿದ್ದು, 5 ಪಂದ್ಯ ಸೋತಿದೆ. 2 ಪಂದ್ಯ ರದ್ದಾಗಿವೆ. ಇನ್ನು, 3 ಟಿ20 ಪಂದ್ಯಗಳನ್ನಾಡಿದ್ದು, 2 ರಲ್ಲಿ ಭಾರತ ಗೆದ್ದಿದ್ದು 1 ಪಂದ್ಯ ಸೋತಿದೆ. 

ಬಿಗ್​ಸ್ಟೇಜ್​​ಗಳಲ್ಲಿ ಟೀಮ್​ ಇಂಡಿಯಾದ ಮೇಲುಗೈ.!

ಏಷ್ಯಾಕಪ್​ ಟೂರ್ನಿ ಮಾತ್ರವಲ್ಲ, ಬಿಗ್​ ಸ್ಟೇಜ್​, ಹೈಪ್ರೆಶರ್​ ಪಂದ್ಯಗಳಲ್ಲಿ ಪಾಕ್​ ಎದುರು ಟೀಮ್​ ಇಂಡಿಯಾನೇ ಮೇಲುಗೈ ಸಾಧಿಸಿದೆ. ಐಸಿಸಿ ಆಯೋಜಿಸೋ ಏಕದಿನ ಹಾಗೂ ಟಿ20 ವಿಶ್ವಕಪ್​ಗಳಲ್ಲಿ ಭಾರತ ತಂಡ ಪರಾಕ್ರಮ ಮೆರೆದಿದೆ. ಐಸಿಸಿ ವಿಶ್ವಕಪ್​ನಲ್ಲಿ ಆಡಿದ 16 ಪಂದ್ಯಗಳ ಪೈಕಿ 1 ಪಂದ್ಯದಲ್ಲಿ ಮಾತ್ರ ಟೀಮ್​ ಇಂಡಿಯಾ ಸೋತಿರೋದು. ಉಳಿದ 15 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದೆ. 

ಇದನ್ನೂ ಓದಿ:ಭಾರತ -ಪಾಕ್ ಏಷ್ಯಾಕಪ್​ T20 ಮ್ಯಾಚ್​​ಗೆ ಕೌಂಟ್​​ಡೌನ್.. ಯಾವ ಟೀಮ್ ಸ್ಟ್ರಾಂಗ್..?

IND vs PAK: ಪಾಕ್ ವಿರುದ್ಧ ಟೀಂ ಇಂಡಿಯಾದ ಟಾರ್ಗೆಟ್ ಫಿಕ್ಸ್​​; ಗುರಿ ಸಾಧಿಸಿದ್ರೆ ಮರುಕಳಿಸಲಿದೆ ಮತ್ತೊಂದು ಇತಿಹಾಸ

ವಿಶ್ವಕಪ್​​​ನಲ್ಲಿ ಪಾಕ್​ ಎದುರು ಭಾರತ

ಏಕದಿನ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ 8 ಪಂದ್ಯಗಳಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಿವೆ. ಎಲ್ಲಾ ಪಂದ್ಯಗಳಲ್ಲೂ ಟೀಮ್​ ಇಂಡಿಯಾ ಗೆದ್ದಿದೆ. ಟಿ20 ಮಾದರಿಯಲ್ಲಿ 8 ಬಾರಿ ಎದುರು ಬದುರಾಗಿದ್ದು, ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಗೆದ್ದಿದ್ದು, 1 ಪಂದ್ಯದಲ್ಲಿ ಮಾತ್ರ ಸೋಲುಂಡಿದೆ. 

ಪಾಕಿಸ್ತಾನ ಮೇಲೆ ದರ್ಬಾರ್​ ನಡೆಸಿರುವ ಇತಿಹಾಸವನ್ನ ಹೊಂದಿರುವ ಟೀಮ್​ ಇಂಡಿಯಾ ಇದೀಗ ಮತ್ತೊಂದು ಗೆಲುವನ್ನ ಎದುರು ನೋಡ್ತಿದೆ. ಮೊದಲ ಪಂದ್ಯದಲ್ಲಿ ಅತ್ಯದ್ಭುತ ಪರ್ಫಾಮೆನ್ಸ್​ ನೀಡಿರುವ ಟೀಮ್​ ಇಂಡಿಯಾ ಸೂಪರ್​ ಸಂಡೆಯ ಕದನಕ್ಕೆ ಆತ್ಮವಿಶ್ವಾಸದಿಂದ ಸಜ್ಜಾಗಿದೆ. ಅಭಿಮಾನಿಗಳು ಕೂಡ ಹೈವೋಲ್ಟೆಜ್​ ಕದನವನ್ನ ನೋಡಲು ಕಾದು ಕುಳಿತಿದ್ದಾರೆ. ಮತ್ತೊಮ್ಮೆ ಪಾಕ್​ ಪಡೆಯ ಎದುರು ಟೀಮ್​ ಇಂಡಿಯಾ ಗೆದ್ದು ಬೀಗಲಿ ಅನ್ನೋದೆ ಎಲ್ಲರ ಆಶಯ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Asia Cup 2025 india vs pakistan asia cup PAK vs IND Ind vs Pak
Advertisment