Advertisment

ಭಾರತ vs ಪಾಕಿಸ್ತಾನ ಫೈನಲ್ ಮ್ಯಾಚ್​.. 41 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲು

ಏಷ್ಯಾ ಕಪ್ ಫೈನಲ್ ಪಂದ್ಯವು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಈ ಟೂರ್ನಮೆಂಟ್​​ನ 41 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡು ತಂಡಗಳು ಮುಖಾಮುಖಿ ಆಗುತ್ತಿವೆ. ಟೀಮ್ ಇಂಡಿಯಾ ಇದುವರೆಗೆ 8 ಬಾರಿ ಏಷ್ಯಾ ಕಪ್ ಗೆದ್ದಿದೆ. ಪಾಕಿಸ್ತಾನ 2 ಬಾರಿ ಪ್ರಶಸ್ತಿ ಗೆದ್ದಿದೆ.

author-image
Ganesh Kerekuli
india vs pakisthan (6)
Advertisment

ಏಷ್ಯಾ ಕಪ್ ಫೈನಲ್ (Asia cup final) ಪಂದ್ಯವು ಭಾರತ ಮತ್ತು ಪಾಕಿಸ್ತಾನ (India vs Pakisthan final ) ನಡುವೆ ನಡೆಯಲಿದೆ. ಈ ಟೂರ್ನಮೆಂಟ್​​ನ 41 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡು ತಂಡಗಳು ಮುಖಾಮುಖಿ ಆಗುತ್ತಿವೆ. ಟೀಮ್ ಇಂಡಿಯಾ ಇದುವರೆಗೆ 8 ಬಾರಿ ಏಷ್ಯಾ ಕಪ್ ಗೆದ್ದಿದೆ. ಪಾಕಿಸ್ತಾನ 2 ಬಾರಿ ಪ್ರಶಸ್ತಿ ಗೆದ್ದಿದೆ.

Advertisment

ಆದರೆ ಎರಡೂ ದೇಶಗಳು ಫೈನಲ್​ನಲ್ಲಿ ಮುಖಾಮುಖಿಯಾಗಿರಲಿಲ್ಲ. ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಫೈನಲ್ ತಲುಪಿದೆ. ಸಲ್ಮಾನ್ ಅಲಿ ಅಘಾ ನಾಯಕತ್ವದಲ್ಲಿ ಪಾಕಿಸ್ತಾನ ಫೈನಲ್ ತಲುಪಿದೆ. ಸೆಪ್ಟೆಂಬರ್ 28 ರಂದು ಭಾನುವಾರ ಫೈನಲ್ ಮ್ಯಾಚ್  ನಡೆಯಲಿದೆ.

ಮೂರನೇ ಬಾರಿಗೆ ಭಾರತ vs ಪಾಕ್

ಈ ಬಾರಿಯ ಏಷ್ಯಾ ಕಪ್​​ನಲ್ಲಿ ಮೂರನೇ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗುತ್ತಿವೆ. ಸೆಪ್ಟೆಂಬರ್ 14 ರಂದು ಲೀಗ್ ಹಂತದಲ್ಲಿ ಮೊದಲ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಸೂಪರ್ ಫೋರ್‌ನಲ್ಲಿ ಮತ್ತೆ ಮುಖಾಮುಖಿಯಾದವು. ಆಗ ಟೀಮ್ ಇಂಡಿಯಾ 6 ವಿಕೆಟ್‌ಗಳಿಂದ ಸೋಲಿಸಿತು. ಇದೀಗ ಮೂರನೇ ಬಾರಿಗೆ ಸೆಣಸಾಟ ನಡೆಸಲಿವೆ. 

ಇದನ್ನೂ ಓದಿ: ವೈಭವ್ ಸೂರ್ಯವಂಶಿ ಮತ್ತೆ ಸೆನ್ಸೇಷನ್.. ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಸಾಧನೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

India vs Pakisthan final Asia cup final Ind vs Pak Asia Cup 2025 india vs pakistan asia cup
Advertisment
Advertisment
Advertisment