/newsfirstlive-kannada/media/media_files/2025/09/25/vaibhav-suryavanshi-2025-09-25-14-57-13.jpg)
ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ವೈಭವ ವಿಶ್ವ ಕ್ರಿಕೆಟ್​ನಲ್ಲಿ ಮುಂದುವರಿದಿದೆ. 14 ವರ್ಷಕ್ಕೆ ಹಿಸ್ಟರಿ ಕ್ರಿಯೇಟ್ ಮಾಡಿರೋ ವೈಭವ್ ಸೂರ್ಯವಂಶಿ, ಯೂತ್​ ಒಡಿಐ ಕ್ರಿಕೆಟ್​​ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಾ ಸಾಗಿರುವ ವೈಭವ್ ಸೂರ್ಯವಂಶಿಯ ಆಟಕ್ಕೆ ಇಡೀ ವಿಶ್ವ ಕ್ರಿಕೆಟ್ ಲೋಕವೇ ಮೂಕವಿಸ್ಮಿತವಾಗಿದೆ. ಅಂಡರ್​​-19 ದಿನಗಳಲ್ಲೇ ಯೂತ್ ಒಡಿಐನಲ್ಲಿ ಅಸಾಧ್ಯವಾದ ದಾಖಲೆಗಳನ್ನ ಬರೆಯುತ್ತಾ ಮುನ್ನುಗ್ಗುತ್ತಿದ್ದಾರೆ.
ಸೀಸನ್-18ರ ಐಪಿಎಲ್​​​ನಿಂದ ವಿಶ್ವ ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡ್ತಿರುವ ವೈಭವ್ ಸೂರ್ಯವಂಶಿ, ಈಗ ಅಂಡರ್​​-19 ಕ್ರಿಕೆಟ್​ನಲ್ಲೂ ಡಾಮಿನೇಟಿಂಗ್ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಫ್ಯೂಚರ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ವಿಶ್ವ ಕ್ರಿಕೆಟ್ ಲೋಕವನ್ನಾಳುವ ಮುನ್ಸೂಚನೆ ನೀಡಿದ್ದಾರೆ.
ಆಸ್ಟ್ರೇಲಿಯಾದಲ್ಲೂ ರನ್ ಹೊಳೆ
ಐಪಿಎಲ್ ಬಳಿಕ ಇಂಗ್ಲೆಂಡ್ ಪ್ರವಾಸಕ್ಕಾಗಮಿಸಿದ್ದ ವೈಭವ್ ಸೂರ್ಯವಂಶಿ, ಅಂಡರ್​​-19 ಏಕದಿನ ಸರಣಿಯಲ್ಲಿ ರನ್​​​ ಹೊಳೆಯನ್ನೇ ಹರಿಸಿದ್ದರು. ಕನ್ಸಿಸ್ಟೆನ್ಸಿ ಆಟದ ಜೊತೆಗೆ ಫೈರಿ ಬ್ಯಾಟಿಂಗ್​ನಿಂದ ಎದುರಾಳಿಗೆ ನಡುಕ ಹುಟ್ಟಿಸಿದ್ದ ವೈಭವ್​, ಈಗ ಅದೇ ಆಟವನ್ನು ಆಸ್ಟ್ರೇಲಿಯಾದಲ್ಲೂ ಮುಂದುವರಿಸಿದ್ದಾರೆ.
ಆಸ್ಟ್ರೇಲಿಯಾ ಎ ಎದುರಿನ ಮೊದಲ ಎರಡು ಪಂದ್ಯಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿರುವ ವೈಭವ್ ಸೂರ್ಯವಂಶಿ, ಮೊದಲ ಇನ್ನಿಂಗ್ಸ್​ನಲ್ಲಿ 22 ಎಸೆತಗಳಲ್ಲಿ 38 ರನ್ ಸಿಡಿಸಿದ್ರೆ. 2ನೇ ಪಂದ್ಯದಲ್ಲಿ ಬರೋಬ್ಬರಿ 70 ರನ್ ಕೊಳ್ಳೆ ಹೊಡೆದಿದ್ದಾರೆ. ವೈಭವ್ ಸೂರ್ಯವಂಶಿಯ ಆಟಕ್ಕೆ ವಿಶ್ವ ಕ್ರಿಕೆಟ್ ಲೋಕವೇ ಸಲಾಂ ಹೇಳ್ತಿದೆ. ಆನ್​ಫೀಲ್ಡ್​ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸೂರ್ಯವಂಶಿ, ಸಿಕ್ಸರ್​ಗಳ ದಾಖಲೆ ಬರೆದಿದ್ದಾರೆ.
14 ವರ್ಷದ ಟೀನೇಜ್ ಕ್ರಿಕೆಟರ್. ಅಂಡರ್​​-19 ಕ್ರಿಕೆಟ್​ನಲ್ಲಿ ಎಷ್ಟರ ಮಟ್ಟಿಗೆ ಆಡ್ತಾರೆ ಅನ್ನೋ ಪ್ರಶ್ನೆ ಸಹಜವಾಗೇ ಇರುತ್ತೆ. ಯೂತ್ ಕ್ರಿಕೆಟ್​​ನಲ್ಲಿ ರನ್ ವೈಭವ್ ಕೇವಲ ರನ್ ಮಾತ್ರವೇ ಹೊಡೆಯಲಿಲ್ಲ. ಸಿಕ್ಸರ್​ಗಳ ಸುನಾಮಿ ಸೃಷ್ಟಿಸಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, 19 ವರ್ಷದ ಯುವ ಕ್ರಿಕೆಟರ್​​ಗಳು ಸಿಡಿಸಿದ ಸಿಕ್ಸರ್​ಗಳನ್ನ ವೈಭವ್ ಸೂರ್ಯವಂಶಿ, ಜಸ್ಟ್​ 10 ಪಂದ್ಯಕ್ಕೆ ತಲುಪಿದ್ದಾರೆ. ಯೂತ್ ಕ್ರಿಕೆಟ್​​ನಲ್ಲಿ ಯಾರೂ ಬರೆಯದ ದಾಖಲೆಗಳನ್ನು ವೈಭವ್ ಸೂರ್ಯವಂಶಿ ಬರೆದಿದ್ದಾರೆ. ಸೂರ್ಯವಂಶಿಯ ಸಿಕ್ಸರ್​ಗಳ ಸುನಾಮಿಗೆ ಟೀಮ್ ಇಂಡಿಯಾದ ಅಂಡರ್​-19 ಕ್ಯಾಪ್ಟನ್ ಉನ್ಮುಕ್ತ್ ಚಾಂದ್, ಯಶಸ್ವಿ ಜೈಸ್ವಾಲ್​ರ ದಾಖಲೆಗಳೇ ಬ್ರೇಕ್ ಆಗಿವೆ.
ಇದನ್ನೂ ಓದಿ:ಧ್ರುವ ನನಗೆ ‘ದೇವರು ಕೊಟ್ಟ ತಮ್ಮ’ ಎಂದ ಮೇಘನಾ ರಾಜ್ -VIDEO
ಅಂಡರ್​-19 ಯೂತ್​​ ಕ್ರಿಕೆಟ್​​​ನಲ್ಲಿ 10 ಪಂದ್ಯಗಳನ್ನಾಡಿರುವ ವೈಭವ್ ಸೂರ್ಯವಂಶಿ, 540 ರನ್ ಗಳಿಸಿದ್ದಾರೆ. ಈ ಪೈಕಿ 41 ಸಿಕ್ಸರ್​ಗಳು ವೈಭವ್ ಬ್ಯಾಟ್​​ನಿಂದ ಚಿಮ್ಮಿವೆ. 21 ಪಂದ್ಯಗಳಿಂದ 1149 ರನ್ ಗಳಿಸಿರುವ ಉನ್ಮುಕ್ತ್ ಚಾಂದ್, 38 ಸಿಕ್ಸರ್​ ಸಿಡಿಸಿದ್ದಾರೆ. ಸಿಕ್ಸರ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿರುವ ಬಾಂಗ್ಲಾದ ಝವಾದ್ ಅಬ್ರಾರ್ 24 ಪಂದ್ಯಗಳಿಂದ 35 ಸಿಕ್ಸರ್ ಸಿಡಿಸಿದ್ರೆ. ಪಾಕ್​ನ ಶಹಜೈಬ್ ಖಾನ್ 24 ಪಂದ್ಯಗಳಿಂದ 31 ಸಿಕ್ಸರ್ ದಾಖಲಿಸಿದ್ದಾರೆ. ಸದ್ಯ ಟೀಮ್ ಇಂಡಿಯಾ ಪ್ರತಿನಿಧಿಸಿರುವ ಯಶಸ್ವಿ ಜೈಸ್ವಾಲ್​, ಯೂಡ್ ಏಕದಿನ ಕ್ರಿಕೆಟ್​​ನಲ್ಲಾಡಿದ 27 ಪಂದ್ಯಗಳಿಂದ 30 ಸಿಕ್ಸರ್ ಸಿಡಿಸಿದ್ದಾರೆ. ಗರಿಷ್ಠ ಸಿಕ್ಸರ್ ಸರದಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
ಯೂತ್ ಕ್ರಿಕೆಟ್​ನಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್, ಬೌಂಡರಿಗಳ ಪ್ರವಾಹ ಸೃಷ್ಟಿಸಿದ್ದಾರೆ. ಆದ್ರೆ, 10 ಮ್ಯಾಚ್​ಗಳಿಂದ 540 ರನ್ ಸಿಡಿಸಿರುವ ವೈಭವ್ ಸೂರ್ಯವಂಶಿ, ಬೌಂಡರಿಗಳಿಂದ 200 ರನ್ ಕೊಳ್ಳೆ ಹೊಡೆದಿದ್ರೆ. ಸಿಕ್ಸರ್​ಗಳ ಮೂಲಕ 246 ರನ್ ಗಳಿಸಿದ್ದಾರೆ. ಅಂದ್ರೆ, ವೈಭವ್ ಸೂರ್ಯವಂಶಿ ಗಳಿಸಿರುವ ರನ್​​​ಗಳ ಪೈಕಿ 84ರಷ್ಟು ರನ್, ಕೇವಲ ಬೌಂಡರಿ, ಸಿಕ್ಸರ್​ನಿಂದಲೇ ಬಂದಿದೆ. ಇಂಟ್ರೆಸ್ಟಿಂಗ್ ಅಂದ್ರೆ. ಸಿಕ್ಸರ್, ಬೌಂಡರಿ ಹೊರತಾಗಿ ಬಂದ ರನ್ ಕೇವಲ 94.. ಇದು ನಿಜಕ್ಕೂ ಅಚ್ಚರಿಯ ವಿಷಯ. ಇದು ವೈಭವ್ ಸೂರ್ಯವಂಶಿಯ ಪವರ್ ಬ್ಯಾಟಿಂಗ್​​​ಗೆ ಹಿಡಿದ ಕೈಗನ್ನಡಿಯೂ ಆಗಿದೆ.
14ರ ವಯಸ್ಸಿನಲ್ಲೇ ವಿಧ್ವಂಸಕಾರಿ ಬ್ಯಾಟಿಂಗ್​ನಿಂದ ರೆಕಾರ್ಡ್ಸ್​ ಬ್ರೇಕರ್ ಆಗಿರುವ ವೈಭವ್ ಸೂರ್ಯವಂಶಿ, ವಿಶ್ವ ಕ್ರಿಕೆಟ್ ಲೋಕದ ಫ್ಯೂಚರ್ ಸ್ಟಾರ್ ಮಾತ್ರವೇ ಅಲ್ಲ. ವಿಶ್ವ ಕ್ರಿಕೆಟ್ ಲೋಕದ ನಯಾ ಸಿಕ್ಸರ್ ಕಿಂಗ್ ಆಗುವತ್ತಾ ಹೆಜ್ಜೆ ಇಟ್ಟಿರುವುದು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.