/newsfirstlive-kannada/media/media_files/2025/09/25/karnataka-players-1-2025-09-25-13-32-22.jpg)
ಭಾರತ ತಂಡವು ವೆಸ್ಟ್ ವಿಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಮೊದಲ ಪಂದ್ಯವು ಅಕ್ಟೋಬರ್ 2 ರಂದು ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ.
ಇದೀಗ ಬಿಸಿಸಿಐ ಬಲಿಷ್ಠ ತಂಡ ಪ್ರಕಟಿಸಿದ್ದು, ಅದರಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ ನೀಡಲಾಗಿದೆ. ಕೆ.ಎಲ್.ರಾಹುಲ್, ಪ್ರಸಿದ್ಧ್ ಕೃಷ್ಣ ಹಾಗೂ ದೇವದತ್ ಪಡಿಕಲ್​​ಗೆ ಸ್ಥಾನ ನೀಡಲಾಗಿದೆ. ಇನ್ನು ಇಂಗ್ಲೆಂಡ್​ ವಿರುದ್ಧ ಸರಣಿಯಲ್ಲಿ ಆಯ್ಕೆ ಆಗಿದ್ದ, ಕರುಣ್ ನಾಯರ್ ಅವರನ್ನು ಕೈಬಿಡಲಾಗಿದೆ.
ಇದನ್ನೂ ಓದಿ:ವೆಸ್ಟ್​ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ..!
ಟೀಂ ಇಂಡಿಯಾ ಪರ ಒಟ್ಟು 63 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೆ.ಎಲ್.ರಾಹುಲ್, 111 ಇನ್ನಿಂಗ್ಸ್​ಗಳಲ್ಲಿ 3789 ರನ್​ಗಳಿಸಿದ್ದಾರೆ. ಪ್ರಸಿದ್ಧ್ ಕೃಷ್ಣ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ. ಪ್ರಸಿದ್ಧ್ ಟೀಂ ಇಂಡಿಯಾ ಪರ 6 ಪಂದ್ಯಗಳನ್ನ ಆಡಿ, ಒಟ್ಟು 22 ವಿಕೆಟ್ ಪಡೆದಿದ್ದಾರೆ. ಇನ್ನು ತಂಡಕ್ಕೆ ಕಂಬ್ಯಾಕ್ ಮಾಡಿರುವ ದೇವದತ್ ಪಡಿಕ್ಕಲ್, ಎರಡು ಟೆಸ್ಟ್ ಪಂದ್ಯಗಳನ್ನ ಆಡಿ ಮೂರು ಇನ್ನಿಂಗ್ಸ್​ನಲ್ಲಿ 90 ರನ್​ಗಳಿಸಿದ್ದಾರೆ.
ರಿಷಬ್ ಪಂತ್ ತಂಡದಲ್ಲಿ ಸ್ಥಾನ ಪಡೆಯದ ಹಿನ್ನೆಲೆಯಲ್ಲಿ ಕೆ.ಎಲ್.ರಾಹುಲ್ ಮೇಲೆ ವಿಕೆಟ್ ಕೀಪಿಂಗ್ ಜವಾಬ್ದಾರಿ ಬಿದ್ದಿದೆ. ಹಾಗೆಯೇ ಶುಬ್ಮನ್ ಗಿಲ್ ತಂಡದ ನಾಯಕರಾಗಿ ಮುನ್ನಡೆಸಲಿದ್ದು, ಉಪನಾಯಕರಾಗಿ ರವೀಂದ್ರ ಜಡೇಜಾ ಬಡ್ತಿ ಪಡೆದಿದ್ದಾರೆ.
ಇದನ್ನೂ ಓದಿ:ಕೆಎಲ್ ರಾಹುಲ್​ಗೆ ಸ್ಥಾನ, ಸಂಕಷ್ಟಕ್ಕೆ ಸಿಲುಕಿದ ಮನೀಷ್ ಪಾಂಡೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.