/newsfirstlive-kannada/media/media_files/2025/09/25/ravindra-jadeja-5-2025-09-25-14-31-34.jpg)
ಆಲ್​ರೌಂಡರ್​, ಹಿರಿಯ ಆಟಗಾರ ರವೀಂದ್ರ ಜಡೇಜಾಗೆ ಟೀಂ ಇಂಡಿಯಾದಲ್ಲಿ ಬಡ್ತಿ ಸಿಕ್ಕಿದೆ. ಟೆಸ್ಟ್​ ಕ್ರಿಕೆಟ್ ತಂಡದ ಉಪನಾಯಕನ ಜವಾಬ್ದಾರಿ ಜಡೇಜಾಗೆ ಸಿಕ್ಕಿದೆ.
ಇವತ್ತು ಬಿಸಿಸಿಐ ವೆಸ್ಟ್ ವಿಂಡೀಸ್​ ವಿರುದ್ಧದ ಟೆಸ್ಟ್​ ಸರಣಿಗೆ ತಂಡವನ್ನು ಪ್ರಕಟಿಸಿದೆ. ಶುಬ್ಮನ್ ಗಿಲ್​ ನಾಯಕತ್ವದಲ್ಲಿ 15 ಸದಸ್ಯರ ತಂಡ ಪ್ರಕಟವಾಗಿದೆ. ಅದರಲ್ಲಿ ಜಡೇಜಾರನ್ನು ವೈಸ್ ಕ್ಯಾಪ್ಟನ್ ಆಗಿ ನೇಮಕ ಮಾಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿದ್ದ ಪಂತ್, ತಂಡಕ್ಕೆ ಕಂಬ್ಯಾಕ್ ಮಾಡುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಪಂತ್ ಅನುಪಸ್ಥಿತಿಯಲ್ಲಿ ಜಡೇಜಾಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಒಂದು ವೇಳೆ ಪಂತ್ ತಂಡದಲ್ಲಿ ಇದ್ದಿದ್ದರೆ, ಅವರೇ ಉಪನಾಯಕರಾಗಿರುತ್ತಿದ್ದರು.
ಬಡ್ತಿ ಪಡೆದಿರುವ ಜಡೇಜಾ, ಒಟ್ಟು 85 ಟೆಸ್ಟ್ ಪಂದ್ಯಗಳನ್ನು ಆಡಿದ್ದು 128 ಇನ್ನಿಂಗ್ಸ್​ಗಳಲ್ಲಿ 3886 ರನ್​ಗಳಿಸಿದ್ದಾರೆ. 175 ಅವರ ಅತ್ಯಧಿಕ ಸ್ಕೋರ್ ಆಗಿದೆ. ಸ್ಟ್ರೈಕ್ ರೇಟ್ 55.22 ಆಗಿದೆ. ಬೌಲಿಂಗ್​ನಲ್ಲಿ 330 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಸ್ಥಾನ..?
ಶುಬ್ಮನ್ ಗಿಲ್ (ಕ್ಯಾಪ್ಟನ್), ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ್, ಜಸ್​ಪ್ರೀತ್ ಬುಮ್ರಾ, ಅಕ್ಸರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಎನ್​ ಜಗದೀಶನ್ (ವಿಕೆಟ್ ಕೀಪರ್), ಮೊಹ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್.
ಇದನ್ನೂ ಓದಿ: ವೆಸ್ಟ್​ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.