/newsfirstlive-kannada/media/media_files/2025/09/29/rinku-and-tilak-varma-2025-09-29-14-43-44.jpg)
ಟೀಂ ಇಂಡಿಯಾ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಒಂಬತ್ತನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪಂದ್ಯ ಗೆಲ್ಲಲು ಪ್ರಮುಖ ಕಾರಣ ತಿಲಕ್ ವರ್ಮಾರ ಅದ್ಭುತ ಇನ್ನಿಂಗ್ಸ್ ಹಾಗೂ ಕುಲ್ದೀಪ್ ಯಾದವ್ ಅವರ ಸ್ಪಿನ್ ಮ್ಯಾಜಿಕ್.
ಭಾರತಕ್ಕೆ ಗೆಲ್ಲಲು 147 ರನ್‌ಗಳ ಗುರಿಯನ್ನು ಪಾಕ್ ನೀಡಿತ್ತು. ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಸೋಲಿನ ಭೀತಿಯಲ್ಲಿದ್ದ ತಂಡಕ್ಕೆ ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಆಸರೆಯಾದರು. ಮೂರನೇ ವಿಕೆಟ್‌ಗೆ 57 ರನ್‌ಗಳ ನಿರ್ಣಾಯಕ ಪಾರ್ಟ್ನರ್​ಶಿಪ್ ಮಾಡಿದರು. ತಿಲಕ್ ವರ್ಮಾ 50 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳೊಂದಿಗೆ ಅಜೇಯ 69 ರನ್ ಗಳಿಸಿದರು.
ಇದನ್ನೂ ಓದಿ:ಏಷ್ಯಾಕಪ್ ಗೆಲುವಿನ ಹಿಂದೆ ಅಭಿಷೇಕ ಶರ್ಮಾ ಪಾತ್ರ.. ನಿನ್ನೆಯ ದಿನ ಏನು ಹೇಳಿದರು ಅಭಿ?
ಇದಕ್ಕೂ ಮೊದಲು ಕುಲದೀಪ್ ಯಾದವ್ ತಮ್ಮ ಸ್ಪಿನ್ ಮೂಲಕ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಪಾಕಿಸ್ತಾನ 14ನೇ ಓವರ್​​ವರೆಗೆ ಕೇವಲ ಎರಡು ವಿಕೆಟ್ ಕಳೆದುಕೊಂಡು 114 ರನ್ ಗಳಿಸಿತ್ತು. ನಂತರ ಕುಲ್ದೀಪ್ ಸತತ ವಿಕೆಟ್‌ಗಳನ್ನು ಪಡೆದರು. ಸ್ಯಾಮ್ ಅಯೂಬ್, ಸಲ್ಮಾನ್ ಅಲಿ ಆಘಾ, ಶಾಹೀನ್ ಶಾ ಅಫ್ರಿದಿ ಮತ್ತು ಫಹೀಮ್ ಅಶ್ರಫ್ ಅವರನ್ನು ಔಟ್ ಮಾಡುವ ಮೂಲಕ 4 ವಿಕೆಟ್ ಕಬಳಿಸಿದರು. ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು.
ಕೊನೆಯ ಓವರ್‌ನ ರೋಮಾಂಚನ
ಕೊನೆಯ ಓವರ್‌ನಲ್ಲಿ ಗೆಲ್ಲಲು 10 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನ ಕೊನೆಯ ಎಸೆತದಲ್ಲಿ ದುಬೆಗೆ ಕ್ಯಾಚ್ ನೀಡಿದರು. ಹ್ಯಾರಿಸ್ ರೌಫ್ ಕೊನೆಯ ಓವರ್​ ಎಸೆಯಲು ಬಂದಿದ್ದರು.
- ಓವರ್​ 19.1: ತಿಲಕ್ ವರ್ಮಾ ರನ್ನಿಂಗ್ ಮೂಲಕ 2 ರನ್ ಪಡೆದರು.
- ಓವರ್​ 19.2: ತಿಲಕ್ ವರ್ಮಾ ಸಿಕ್ಸರ್ ಬಾರಿಸಿದರು.
- ಓವರ್​ 19.3: ತಿಲಕ್ ವರ್ಮಾ 1 ರನ್ ಪಡೆದರು.
- ಓವರ್​ 19.4: ರಿಂಕು ಸಿಂಗ್ ಬೌಂಡರಿ ಹೊಡೆಯುವ ಮೂಲಕ ಪಂದ್ಯ ಗೆಲ್ಲಿಸಿದರು.
ಇದನ್ನೂ ಓದಿ:ಬಾಳಬೇಕಾದ ಯುವತಿಯ ಜೀವವೇ ಹೋಯ್ತು! ಲಾರಿ ಹರಿದು ಹಾರಿತು ವಿದ್ಯಾರ್ಥಿನಿಯ ಪ್ರಾಣ ಪಕ್ಷಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ