/newsfirstlive-kannada/media/media_files/2025/09/29/abhishek-sharma-1-2025-09-29-13-28-01.jpg)
ಏಷ್ಯಾ ಕಪ್​ ಫೈನಲ್​​ನಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದು 9ನೇ ಬಾರಿ ಟ್ರೋಫಿಗೆ ಮುತ್ತಿಟ್ಟಿದೆ. 53 ಎಸೆತಗಳಲ್ಲಿ ಅಜೇಯ 69 ರನ್ ಗಳಿಸಿದ ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಭಿಷೇಕ್ ಶರ್ಮಾ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದರು. ಈ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ, 314 ರನ್​ಗಳಿಸಿದರು
ಸರಣಿಶ್ರೇಷ್ಠ ಪ್ರಶಸ್ತಿಗೆ ಅರ್ಹರಾದ ಅಭಿಷೇಕ್ ಶರ್ಮಾ ಮಾತನಾಡಿ.. ಪ್ರೆಸರ್ ಇತ್ತು. ಅವರು ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದರು. ಅವರು ವೇಗವನ್ನು ಬದಲಾಯಿಸುತ್ತಿದ್ದರು. ನಾನು ಕೂಲ್ ಆಗಿರಲು ಪ್ರಯತ್ನಿಸುತ್ತಿದ್ದೆ. ಸ್ಯಾಮ್ಸನ್ ಅವರ ಅದ್ಭುತ ಇನ್ನಿಂಗ್ಸ್. ದುಬೆ ಒತ್ತಡದಲ್ಲಿ ಬ್ಯಾಟಿಂಗ್ ಮಾಡಿದ ರೀತಿ ತಂಡಕ್ಕೆ ಸಹಾಯಕ ಆಗಿದೆ. ಮತ್ತು ಅದು ಬೇಕಾಗಿತ್ತು. ನಾವು ಪ್ರತಿಯೊಂದು ಪರಿಸ್ಥಿತಿಗೂ ಸಿದ್ಧರಾಗಿದ್ದೇವೆ.
ಇದನ್ನೂ ಓದಿ:ಛೀಮಾರಿ ಹಾಕಿದ ಕ್ಯಾಪ್ಟನ್ ಸೂರ್ಯ, ಪಾಕ್ ಪತ್ರಕರ್ತನಿಗೂ ತರಾಟೆ.. ಭಾರೀ ಆಕ್ರೋಶ..!
/filters:format(webp)/newsfirstlive-kannada/media/media_files/2025/09/28/abhishek_sharma_gill-1-2025-09-28-17-11-51.jpg)
ನಾನು ಯಾವುದೇ ಪರಿಸ್ಥಿತಿಯಲ್ಲೂ ಬ್ಯಾಟಿಂಗ್​​ಗೆ ಸಿದ್ಧನಾಗಿದ್ದೆ. ನಾನು ನನ್ನ ಆಟದ ಮೇಲೆ ಕೇಂದ್ರೀಕರಿಸುತ್ತಿದ್ದೆ. ನಿಧಾನಗತಿಯ ವಿಕೆಟ್ ಬಗ್ಗೆ ಗೌತಿ ಸರ್ ಜೊತೆ ಮಾತನಾಡಿದೆ. ಪ್ರಯತ್ನಪಟ್ಟೆ. ಇದು ನನ್ನ ಜೀವನದ ಅತ್ಯಂತ ವಿಶೇಷ ಇನ್ನಿಂಗ್ಸ್‌ಗಳಲ್ಲಿ ಒಂದು. ಸರಣಿಶ್ರೇಷ್ಠ ಗೌರವವನ್ನು ಎಲ್ಲ ಭಾರತೀಯರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.
ಸರಣಿಶ್ರೇಷ್ಠ ಪ್ರಶಸ್ತಿಗೆ ಬಂದ ಕಾರಿನ ಬಗ್ಗೆ ಪ್ರತಿಕ್ರಿಯಿಸಿ.. ಕಾರು ಪಡೆಯೋದು ಯಾವಾಗಲೂ ಸಂತೋಷದ ಸಂಗತಿ. ವಿಶ್ವಕಪ್ ಗೆದ್ದ ನಂತರ ಯಾವುದೇ ಆರಂಭಿಕ ಆಟಗಾರ ಈ ತಂಡದಲ್ಲಿ ಸ್ಥಾನ ಪಡೆಯೋದು ಸುಲಭವಲ್ಲ. ನಾನು ನನ್ನ ಆಟದಲ್ಲಿ ತುಂಬಾ ಶ್ರಮಿಸಿದ್ದೇನೆ. ಜೊತೆಗೆ ಕೋಚ್, ನಾಯಕನ ಬೆಂಬಲ ಬೇಕು. ಪಂದ್ಯಾವಳಿಯ ಆರಂಭದಿಂದಲೂ ನನಗೆ ಬೆಂಬಲ ಇದೆ.
ಇದನ್ನೂ ಓದಿ: ಪಾಕಿಸ್ತಾನಿ ಭಾಷೆಯಲ್ಲೇ ರೌಫ್​​ಗೆ ಉತ್ತರ ಕೊಟ್ಟ ಬೂಮ್ ಬೂಮ್ ಬೂಮ್ರಾ..? VIDEO
/filters:format(webp)/newsfirstlive-kannada/media/media_files/2025/09/24/abhishek_sharma_75-2025-09-24-22-03-03.jpg)
ಉತ್ತಮ ಆರಂಭ ಪಡೆದರೆ ತಂಡ ಗೆಲ್ಲುತ್ತದೆ. ಕೆಲವೊಮ್ಮೆ ನೀವು ವಿಫಲರಾಗಬಹುದು. ಆದರೆ ನಾವು ಅದನ್ನು ಮುಂದುವರಿಸಬೇಕು. ಪವರ್‌ಪ್ಲೇನಲ್ಲಿ ಸ್ಪಿನ್ನರ್ ಬಳಸಿದರೆ ನಾನು ಆ ಅವಕಾಶ ಬಳಸಿಕೊಳ್ಳಲು ಪ್ರಯತ್ನಿಸುತ್ತೇನೆ. ವೇಗದ ಬೌಲರ್ ಯಾರಾಗಿದ್ದರೂ, ಮೊದಲ ಎಸೆತದಿಂದಲೇ ಪ್ರಾರಂಭಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಕ್ಷಣ ಕ್ಷಣಕ್ಕೂ ರೋಚಕತೆ ಹೆಚ್ಚಾಗಿತ್ತು.. ಸ್ಪೆಷಲ್ ವಿಡಿಯೋ ಹಂಚಿಕೊಂಡ ಬಿಸಿಸಿಐ -VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us