/newsfirstlive-kannada/media/media_files/2025/09/29/surya-kumar-yadav-2-2025-09-29-08-58-12.jpg)
ಭಾರತ-ಪಾಕಿಸ್ತಾನ (India vs Pakisthan) ನಡುವಿನ ಕ್ರಿಕೆಟ್​ ಮ್ಯಾಚ್​ ಅದೊಂದು ಕೇವಲ ಪಂದ್ಯ ಮಾತ್ರವಲ್ಲ. ಕ್ರೀಡಾಂಗಣ ಎಂಬ ರಣರಂಗದಲ್ಲಿ ನಡೆಯುವ ಘೋರ ಕದನ. ಏಷ್ಯಾ ಕಪ್​ಗಾಗಿ ನಡೆದ ಫೈನಲ್​ ವಾರ್​ನಲ್ಲಿ ಟೀಂ ಇಂಡಿಯಾ, ಪಾಕಿಸ್ತಾನವನ್ನು ಸದೆಬಡಿದಿದು, ಏಷ್ಯಾ ಕಪ್​ ಚಾಂಪಿಯನ್​​​ ಆಗಿ ಗೆದ್ದು ಬೀಗಿದೆ. ಭಾರತ ಟ್ರೋಫಿ ಗೆದ್ದ ಬೆನ್ನಲ್ಲೇ ವಿವಾದ ನಡೆಯಿತು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಏಷ್ಯಾಕಪ್ 2025 ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿತು. ಮೊಹ್ಸಿನ್ ನಖ್ವಿ ಪಾಕಿಸ್ತಾನದ ಗೃಹ ಸಚಿವ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷ ಕೂಡ ಹೌದು! ಈತನಿಂದ ಭಾರತ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಬೆನ್ನಲ್ಲೇ ಏಸಿಸಿ ಬೇರೆ ಯಾರಿಂದಲೂ ಪ್ರಶಸ್ತಿ ನೀಡುವ ಪ್ರಯತ್ನಕ್ಕೆ ಕೈಹಾಕಲಿಲ್ಲ. ದಿಢೀರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕ್ಯಾನ್ಸಲ್ ಮಾಡಿ, ಟ್ರೋಫಿಯನ್ನ ಟೀಂ ಇಂಡಿಯಾದ ಡ್ರೆಸ್ಸಿಂಗ್​ ರೂಮ್​​ಗೆ ತಂದಿಟ್ಟು ಹೋಗಿದೆ. ಇದು ಚಾಂಪಿಯನ್ ತಂಡದ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ವಿಚಾರಕ್ಕೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್, ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದಾಗಿನಿಂದ ಇಂತಹ ಸನ್ನಿವೇಶ ನೋಡಿರಲಿಲ್ಲ. ಚಾಂಪಿಯನ್ ತಂಡಕ್ಕೆ ಟ್ರೋಫಿ ನಿರಾಕರಿಸಿದ ಘಟನೆಯನ್ನು ಎಂದಿಗೂ ನೋಡಿಲ್ಲ. ಕಠಿಣ ಪರಿಶ್ರಮದಿಂದ ಗೆದ್ದ ಟ್ರೋಫಿ ಅದು. ಆ ಟ್ರೋಫಿಗೆ ನಾವು ಅರ್ಹರು. ಇದಕ್ಕಿಂತ ಹೆಚ್ಚಿನದನ್ನು ಏನೂ ಹೇಳಲಾರೆ. ನನ್ನ ಟ್ರೋಫಿಗಳನ್ನು ನನ್ನ ಡ್ರೆಸ್ಸಿಂಗ್ ರೂಮ್​ನಲ್ಲಿ ಇರಿಸಲಾಗಿದೆ. ಎಲ್ಲಾ 14 ಆಟಗಾರರು ಮತ್ತು ಎಲ್ಲಾ ಸಹಾಯಕ ಸಿಬ್ಬಂದಿ ನನ್ನೊಂದಿಗಿದ್ದಾರೆ. ಇವು ನಿಜವಾದ ಟ್ರೋಫಿಗಳು ಎಂದಿದ್ದಾರೆ. ಆ ಮೂಲಕ ACCಗೆ ಹಾಗೂ ಅದರ ಅಧ್ಯಕ್ಷರ ನಡೆ ಮೇಲೆ ಅಸಮಾಧಾನ ಹೊರ ಹಾಕಿದರು.
ಪಾಕ್ ಪತ್ರಕರ್ತನ ಮೇಲೆ ಸೂರ್ಯ ಫೈರ್
ನಖ್ವಿಯಿಂದ ಟ್ರೋಫಿ ಸ್ವೀಕರಿಸದ ಬಗ್ಗೆ ಪಾಕಿಸ್ತಾನಿ ಪತ್ರಕರ್ತ ಸೂರ್ಯಕುಮಾರ್ ಯಾದವ್​​ಗೆ ಪ್ರಶ್ನೆ ಮಾಡಿದ್ದ. ಟೀಂ ಇಂಡಿಯಾ ಕ್ರೀಡೆಗೆ ರಾಜಕೀಯ ಬೆರಸುತ್ತಿದೆ ಎಂದು ಆರೋಪಿಸಿದ. ಅದಕ್ಕೆ ಸೂರ್ಯಕುಮಾರ್ ಯಾದವ್ ನಕ್ಕು.. ‘ನೀವು ಕೋಪಗೊಂಡಿದ್ದೀರಾ?’ ಎಂದು ಪ್ರಶ್ನೆ ಮಾಡಿದರು. ನಂತರ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸದಿರುವ ಬಗ್ಗೆ ಬಿಸಿಸಿಐ ಎಸಿಸಿಗೆ ಅಧಿಕೃತ ಇಮೇಲ್ ಕಳುಹಿಸಿದೆಯೇ ಎಂದು ಪತ್ರಕರ್ತ ಪ್ರಶ್ನೆ ಕೇಳಿದ. ನಮ್ಮ ತಂಡವು ಟೂರ್ನಮೆಂಟ್ ಗೆದ್ದರೆ ಅದು ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂದಷ್ಟೇ ಸೂರ್ಯ ಹೇಳಿದರು. ‘ನಾವು ಮೈದಾನದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ನಮಗೆ ಯಾವುದೇ ಸೂಚನೆಗಳು ಬಂದಿಲ್ಲ’ ಅಂತಾ ಖಾರವಾಗಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಟ್ರೋಫಿ ಗೆದ್ದರೂ ಪ್ರಶಸ್ತಿ ಸ್ವೀಕರಿಸದ ಭಾರತ.. ಪಾಕ್​​ಗೆ ಸೋಲಿಗಿಂತ ದೊಡ್ಡ ಅವಮಾನ
ಇನ್ನು ಪ್ರಶಸ್ತಿ ಸಮಾರಂಭದ ವೇದಿಕೆಗೆ ನಖ್ವಿ ಬರುತ್ತಿದ್ದಂತೆಯೇ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಕೇಳಿತು. ಮೊಹ್ಸಿನ್ ನಖ್ವಿ ವೇದಿಕೆ ಏರಿದ ತಕ್ಷಣ ಭಾರತೀಯ ತಂಡವು ಅವರಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿತು. ನಂತರ ಸಂಘಟಕರೊಬ್ಬರು ಟ್ರೋಫಿಯನ್ನು ಡ್ರೆಸ್ಸಿಂಗ್ ಕೋಣೆಗೆ ತೆಗೆದುಕೊಂಡು ಹೋದರು. ಪಂದ್ಯ ಮುಗಿದ ಒಂದು ಗಂಟೆಯವರೆಗೆ ಪಾಕಿಸ್ತಾನ ಡ್ರೆಸ್ಸಿಂಗ್ ಕೋಣೆಯಿಂದ ಹೊರಬರಲಿಲ್ಲ. ಪಿಸಿಬಿ ಅಧ್ಯಕ್ಷ ನಖ್ವಿ ಮಾತ್ರ ಮುಜುಗರ ಎದುರಿಸುತ್ತ ಏಕಾಂಗಿಯಾಗಿ ನಿಂತಿದ್ದರು. ಪಾಕಿಸ್ತಾನ ತಂಡ ಸುಮಾರು 55 ನಿಮಿಷಗಳ ನಂತರ ಹೊರಬಂದಾಗ, ಪ್ರೇಕ್ಷಕರು ‘ಭಾರತ, ಭಾರತ!’ ಎಂದು ಘೋಷಣೆ ಕೂಗಿದರು.
ಇದನ್ನೂ ಓದಿ:‘ಮೈದಾನದಲ್ಲೂ ಆಪರೇಷನ್ ಸಿಂಧೂರ್..’ ಪಾಕ್ ಸೋಲಿಸಿದ ಬೆನ್ನಲ್ಲೇ ಮೋದಿ ಹೇಳಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ