/newsfirstlive-kannada/media/media_files/2025/09/29/asia-cup-trophy-2025-09-29-07-34-36.jpg)
ಟೀಂ ಇಂಡಿಯಾ ಏಷ್ಯಾಕಪ್ ಪ್ರಶಸ್ತಿಯನ್ನು (Asia Cup-2025) ಗೆದ್ದಿದೆ. ಫೈನಲ್​​ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿ ಗೆದ್ದುಕೊಂಡಿದೆ. ಆ ಮೂಲಕ ಭಾರತ ತಂಡವು (Team India) ಬರೋಬ್ಬರಿ 9 ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿದೆ. 53 ಎಸೆತಗಳಲ್ಲಿ ಅಜೇಯ 69 ರನ್ ಗಳಿಸಿದ ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಭಿಷೇಕ್ ಶರ್ಮಾ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದರು.
ಇದನ್ನೂ ಓದಿ:ಬಿಸಿಸಿಐಗೆ ಮಿಥುನ್ ಮನ್ಹಾಸ್ ಅಧ್ಯಕ್ಷ.. ಕನ್ನಡಿಗ ರಘುರಾಮ್ ಭಟ್​​ಗೆ ಉನ್ನತ ಸ್ಥಾನ
ಪಾಕಿಸ್ತಾನ ಮೂಲದ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ (Mohsin Naqvi) ‘ಏಷ್ಯಾ ಕಪ್ ಟ್ರೋಫಿ’ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಅದರಂತೆ ಟ್ರೋಫಿ ಗೆದ್ದರೂ ಟೀಂ ಇಂಡಿಯಾ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. ಪರಿಣಾಮ ಪ್ರಶಸ್ತಿ ಪ್ರದಾನ ಸಮಾರಂಭವು ಸುಮಾರು ಒಂದು ಗಂಟೆ ತಡವಾಗಿ ಪ್ರಾರಂಭವಾಯಿತು. ಮೊಹ್ಸಿನ್ ನಖ್ವಿನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿರೋದು ಪಾಕ್​​ಗೆ ದೊಡ್ಡ ಮುಖಭಂಗ ಆಗಿದೆ. ಇದು ಸೋಲಿಗಿಂತ ಹೆಚ್ಚಿನ ನೋವುಂಟು ಮಾಡಿದೆ.
ಟೀಮ್ ಇಂಡಿಯಾ ಟ್ರೋಫಿ ಸ್ವೀಕರಿಸಲು ಮುಂದೆ ಬಾರದಿದ್ದಾಗ ನಿರೂಪಕ ಸೈಮನ್ ಡೌಲ್, ಭಾರತ ತನ್ನ ಪ್ರಶಸ್ತಿಗಳನ್ನು ಸ್ವೀಕರಿಸಲು ನಿರಾಕರಿಸಿದೆ. ಆದ್ದರಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಕ್ತಾಯಗೊಳಿಸಲಾಗುತ್ತಿದೆ ಎಂದು ಘೋಷಿಸಿದರು. ಆಗ ನಖ್ವಿ ಅಲ್ಲಿಂದ ಹೊರಟರು. ಯಾವುದೇ ಪಾಕಿಸ್ತಾನಿ ಮೂಲದವರಿಂದ ಟೀಂ ಇಂಡಿಯಾ ಟ್ರೋಫಿ ಅಥವಾ ಪ್ರಶಸ್ತಿಗಳನ್ನು ಸ್ವೀಕರಿಸುವುದಿಲ್ಲ ಎಂದು ಟೀಮ್ ಇಂಡಿಯಾ ಸ್ಪಷ್ಟಪಡಿಸಿತ್ತು. ಆ ಮೂಲಕ ನಖ್ವಿ ಸಾರ್ವಜನಿಕವಾಗಿ ಅವಮಾನಿತರಾದರು. ಭಾರತ ತಂಡವು ‘ಏಷ್ಯಾ ಕಪ್ 2025 ಟ್ರೋಫಿ’ ಇಲ್ಲದೆ ಫೋಟೋಗೆ ಪೋಸ್ ನೀಡಿತು.
ಪಂದ್ಯದ ನಂತರ ಬಿಡುಗಡೆಯಾದ ಫೋಟೋಗಳಲ್ಲಿ ಟೀಮ್ ಇಂಡಿಯಾ ವೇದಿಕೆಯ ಬಳಿ ಕುಳಿತಿರುವುದನ್ನು ತೋರಿಸಲಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಯುಎಇ ರಾಜಮನೆತನದ ಸದಸ್ಯರೊಂದಿಗೆ ಸಾಕಷ್ಟು ಸಮಯದವರೆಗೆ ವೇದಿಕೆಯಲ್ಲಿ ನಿಂತಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ