‘ಮೈದಾನದಲ್ಲೂ ಆಪರೇಷನ್ ಸಿಂಧೂರ್..’ ಪಾಕ್ ಸೋಲಿಸಿದ ಬೆನ್ನಲ್ಲೇ ಮೋದಿ ಹೇಳಿದ್ದೇನು?

ಎಸಿಸಿ ಮುಖ್ಯಸ್ಥರಾಗಿರುವುದು ಪಾಕ್‌ನ ಮೊಹ್ಸಿನ್‌ ನಖ್ವಿ.. ಇವರಿಂದ ಟ್ರೋಫಿ ತೆಗೆದುಕೊಳ್ಳಲು ಭಾರತ ತಂಡ ನಿರಾಕರಿಸಿದ ಕಾರಣ, ಏಷ್ಯಾ ಕಪ್​ ಚಾಂಪಿಯನ್ಸ್​ ತಂಡವಾದ ಭಾರತ ಟ್ರೋಪಿ ಇಲ್ಲದೇ ಚಾಂಪಿಯನ್ಸ್​ ಪೋಸ್​ ನೀಡಿದೆ

author-image
Ganesh Kerekuli
asia cup trophy narendra modi
Advertisment
  • ಕ್ರಿಕೆಟ್​ ವಾರ್​ನಲ್ಲೂ ಭಾರತಕ್ಕೆ ಶರಣಾದ ಶತ್ರು ಪಾಕಿಸ್ತಾನ
  • ಅಂದು ಸಿಂಧೂರ.. ಇಂದು ತಿಲಕ.. ಪಾಕಿಸ್ತಾನಕ್ಕೆ ಸಿಂಹಸ್ವಪ್ನ
  • ಮೈದಾನದಲ್ಲೂ ಆಪರೇಷನ್ ಸಿಂಧೂರ್.. ಮೋದಿ ವಿಶ್​

ಕ್ರಿಕೆಟ್​ ವಾರ್​ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಸದೆಬಡಿದ ಭಾರತ, 9ನೇ ಬಾರಿ ಏಷ್ಯಾ ಕಪ್​ ಚಾಂಪಿಯನ್ಸ್​ ಪಟ್ಟವನ್ನು ಅಲಂಕರಿಸಿದೆ. ಕ್ರಿಕೆಟ್​ ಮೈದಾನದಲ್ಲಿ ಸುಮ್ಮನಿರಲಾದೇ ಭಾರತವನ್ನು ಕೆಣಕಿದ ಪಾಕಿಗೆ ಭಾರತ ಅದೇ ರೀತಿ ಉತ್ತರ ನೀಡಿದೆ. ಪಾಕ್​ ವಿರುದ್ಧ ರೋಚಕ ಗೆಲುವು ಸಾಧಿಸಿದ್ದು, ಇಡೀ ದೇಶವೇ ಸಂಭ್ರಮಸಿದೆ. ಭಾರತ ಗೆದ್ದರೂ, ಏಷ್ಯಾ ಕಪ್‌ ಟ್ರೋಫಿ ತಂಡದ ಕೈ ಸೇರಿಲ್ಲ.

ಭಾರತಕ್ಕೆ ಶರಣಾದ ಶತ್ರು ಪಾಕಿಸ್ತಾನ

ಏಷ್ಯಾ ಕಪ್​ 2025 ಟೂರ್ನಿಯಲ್ಲಿ ಭಾರತ-ಪಾಕಿಸ್ತಾನದ ನಡುವೆ ಕ್ರಿಕೆಟ್​ ಪಂದ್ಯಕ್ಕಿಂತದಲ್ಲೂ ಭಾರೀ ಗಮನ ಸೆಳೆದಿದ್ದು, ಆಪರೇಷನ್​ ಸಿಂಧೂರ. ಕ್ರಿಕೆಟ್​ ಮೈದಾನದಲ್ಲಿ ಸುಮ್ಮನಿರಲಾದೇ ಭಾರತವನ್ನು ಕೆಣಕಿದ ಪಾಕಿಗೆ ಭಾರತ ಅದೇ ರೀತಿ ಉತ್ತರ ನೀಡಿದೆ. ಫೈನಲ್​ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 146 ರನ್ ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ ನೀಡಿದ 147 ರನ್​ಗಳ ಟಾರ್ಗೆಟ್​​ ಅನ್ನು ಭಾರತಕ್ಕೆ ನೀಡಿತ್ತು. ಆರಂಭಿಕ ಆಘಾತ ಅನುಭವಿಸಿದ ಭಾರತಕ್ಕೆ ಎಸ್​ 400 ರಕ್ಷಾ ಕವಚದ ಮಾದರಿಯಲ್ಲಿ ಬ್ಯಾಟರ್​ ತಿಲಕ್​ ವರ್ಮಾ, ಕೊನೆವರೆಗೂ ತಂಡದ ರಕ್ಷಣೆಗೆ ನಿಂತು ಆಡಿದರು. ಪಾಕಿಸ್ತಾನಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ರು. 

ಇದನ್ನೂ ಓದಿ: ಟ್ರೋಫಿ ಗೆದ್ದರೂ ಪ್ರಶಸ್ತಿ ಸ್ವೀಕರಿಸದ ಭಾರತ.. ಪಾಕ್​​ಗೆ ಸೋಲಿಗಿಂತ ದೊಡ್ಡ ಅವಮಾನ

ಕೊನೆ ಓವರ್​ನಲ್ಲಿ ರೌಫ್ ಎಸೆತಕ್ಕೆ ಬ್ರಹೋಸ್ಮ್​ ಸ್ಪೀಡ್​ನಲ್ಲಿ ಸಿಕ್ಸರ್​ ಬಾರಿಸಿದ ತಿಲಕ್​ ವರ್ಮಾ ಭಾರತದ ಗೆಲುವನ್ನು ಖಾತ್ರಿ ಪಡಿಸಿದ್ರು. ಅಂತಿಮವಾಗಿ ಭಾರತ ತಂಡ 5 ವಿಕೆಟ್​​ಗಳಿಂದ ಗೆಲವು ಸಾಧಿಸಿ, 9ನೇ ಬಾರಿ ಏಷ್ಯಾ ಕಪ್ ತಿಲಕವನ್ನು ಹಚ್ಚಿಕೊಳ್ತು.

ಮೈದಾನದಲ್ಲೂ ಆಪರೇಷನ್ ಸಿಂಧೂರ್.. ಮೋದಿ ವಿಶ್​

ಕೆಲವು ತಿಂಗಳುಗಳ ಹಿಂದೆ ಯುದ್ಧ ಭೂಮಿಯಲ್ಲಿ ಭಾರತದ ದಾಳಿಗೆ ತತ್ತರಿಸಿ ಹೋಗಿದ್ದ ಪಾಕಿಸ್ತಾನ ಇದೀಗ ಕ್ರಿಕೆಟ್​​ನಲ್ಲೂ ಮಣ್ಣು ಮುಕ್ಕಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟೀಂ ಇಂಡಿಯಾಕ್ಕೆ ತಮ್ಮದೇ ಶೈಲಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಮೈದಾನದಲ್ಲಿ ಆಪರೇಷನ್ ಸಿಂಧೂರ್. ಫಲಿತಾಂಶ ಒಂದೇ.. ಭಾರತಕ್ಕೆ ಜಯ. ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಗೆಲುವಿನ ಸಿಂಧೂರವಿಟ್ಟ ತಿಲಕ್.. ಪಾಕ್​ಗೆ ಅವಮಾನ, Asia Cup​ ಗೆದ್ದ ಸೂರ್ಯ ಪಡೆ

ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ, ಕೇಂದ್ರ ಗೃಹಸಚಿವ ಅಮಿತ್​ ಶಾ ಸೇರಿದಂತೆ ಹಲವು ನಾಯಕರು, ಎಕ್ಸ್​ ಖಾತೆಯಲ್ಲಿ ಟೀಂ ಇಂಡಿಯಾ ಆಟಗಾರರನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ: BIGG BOSS 12ಕ್ಕೆ ಎಂಟ್ರಿ ಕೊಟ್ಟ ಇನ್ನೂ 9 ಕಂಟೆಸ್ಟೆಂಟ್​ಗಳು.. ಯಾರು ಯಾರು ಗೊತ್ತಾ?

ದೇಶಾದ್ಯಂತ ಸಂಭ್ರಮ

ಫೈನಲ್​ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸುತ್ತಿದ್ದಂತೆ ದೇಶಾಧ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.. ಕರ್ನಾಕಟದಲ್ಲೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರಿಕೆಟ್​ ಪ್ರೇಮಿಗಳು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ರು.. ಬೆಳಗಾವಿಯ ಆರ್‌ಪಿಡಿ ವೃತ್ತದಲ್ಲಿ  ಕ್ರಿಕೆಟ್​ ಪ್ರೇಮಿಗಳು ತ್ರಿವರ್ಣ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದ್ರು.

ಇದನ್ನೂ ಓದಿ:ಬಿಸಿಸಿಐಗೆ ಮಿಥುನ್ ಮನ್ಹಾಸ್ ಅಧ್ಯಕ್ಷ.. ಕನ್ನಡಿಗ ರಘುರಾಮ್ ಭಟ್​​ಗೆ ಉನ್ನತ ಸ್ಥಾನ

TILAK_VARMA_SANJU

ಕೇವಲ ಕರ್ನಾಟಕ ಉತ್ತರ ಪ್ರದೇಶ, ರಾಂಚಿ, ಮಹಾರಾಷ್ಟ್ರ ಸೇರಿದಂತೆ ದೇಶದ ಮೂಲೆ ಮೂಲೆಯಲ್ಲೂ ಭಾರತದ ಗೆಲುವಿನ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಜಮ್ಮು ಕಾಶ್ಮೀರದ ಪೂಂಚ್​ನಲ್ಲಿ ಭಾರತೀಯ ಸೈನಿಕರು, ಸ್ಥಳೀಯರೊಂದಿಗೆ ಸೇರಿ, ಪಾಕಿಸ್ತಾನ ವಿರುದ್ಧದ ಭಾರತ ಕ್ರಿಕೆಟ್​ ಗೆಲುವನ್ನು ಸಂಭ್ರಮಿಸಿದ್ರು.. ಚತ್ತೀಸ್​ಘಡಲ್ಲಿ ಸಿಆರ್​ಪಿಎಸ್​ ಸೈನಿಕರು ಸಂಭ್ರಮಾಚರಣೆ ಜೋರಾಗಿತ್ತು.

ಎಸಿಸಿ ಮುಖ್ಯಸ್ಥರಾಗಿರುವುದು ಪಾಕ್‌ನ ಮೊಹ್ಸಿನ್‌ ನಖ್ವಿ.. ಇವರಿಂದ ಟ್ರೋಫಿ ತೆಗೆದುಕೊಳ್ಳಲು ಭಾರತ ತಂಡ ನಿರಾಕರಿಸಿದ ಕಾರಣ, ಏಷ್ಯಾ ಕಪ್​ ಚಾಂಪಿಯನ್ಸ್​ ತಂಡವಾದ ಭಾರತ ಟ್ರೋಪಿ ಇಲ್ಲದೇ ಚಾಂಪಿಯನ್ಸ್​ ಪೋಸ್​ ನೀಡಿದೆ. ಒಟ್ಟಾರೆ.. ಏಷ್ಯಾಕಪ್​ನಲ್ಲಿ ಪಾಕಿಸ್ತಾನದ ಮಣಿಸುವ ಮೂಲಕ ಭಾರತ ತಂಡ ಹೊಸ ದಾಖಲೆಯನ್ನು ಬರೆದಿದೆ.

ಇದನ್ನೂ ಓದಿ: ಫೈನಲ್ ಫೋಟೋಶೂಟ್​ಗೆ ಬರಲ್ಲ ಎಂದ ಸೂರ್ಯ.. ಅದಕ್ಕೆ ಪಾಕ್ ಕ್ಯಾಪ್ಟನ್ ಕೊಂಕು..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup 2025 India Win india vs pakistan asia cup India vs Pakisthan final Asia cup final asia cup trophy india win asia cup
Advertisment