Advertisment

ಫೈನಲ್ ಫೋಟೋಶೂಟ್​ಗೆ ಬರಲ್ಲ ಎಂದ ಸೂರ್ಯ.. ಅದಕ್ಕೆ ಪಾಕ್ ಕ್ಯಾಪ್ಟನ್ ಕೊಂಕು..!

ಇಡೀ ವಿಶ್ವವೇ ಬೆಕ್ಕಸ ಬೆರಗುಗಣ್ಣಿನಿಂದ ಕಾಯುತ್ತಿರುವ ರೋಚಕ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಕ್ರಿಕೆಟ್ ಪ್ರೇಮಿಗಳ ಉಸಿರು ಬಿಗಿ ಹಿಡಿಯುವಂತೆ ಮಾಡುವ ಇಂಡೋ ಪಾಕ್ ಬ್ಯಾಟಲ್​​​, 41 ವರ್ಷಗಳ ಬಳಿಕ ಏಷ್ಯಾಕಪ್​​ ಫೈನಲ್​​ನಲ್ಲಿ ಮುಖಾಮುಖಿಯಾಗ್ತಿರೋದು ಪಂದ್ಯದ ರೋಚಕತೆಯನ್ನ ಡಬಲ್ ಮಾಡಿದೆ.

author-image
Ganesh Kerekuli
Salman Agha
Advertisment

ಇಡೀ ವಿಶ್ವವೇ ಬೆಕ್ಕಸ ಬೆರಗುಗಣ್ಣಿನಿಂದ ಕಾಯುತ್ತಿರುವ ರೋಚಕ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಕ್ರಿಕೆಟ್ ಪ್ರೇಮಿಗಳ ಉಸಿರು ಬಿಗಿ ಹಿಡಿಯುವಂತೆ ಮಾಡುವ ಇಂಡೋ ಪಾಕ್ ಬ್ಯಾಟಲ್​​​, 41 ವರ್ಷಗಳ ಬಳಿಕ ಏಷ್ಯಾಕಪ್​​ ಫೈನಲ್​​ನಲ್ಲಿ ಮುಖಾಮುಖಿಯಾಗ್ತಿರೋದು ಪಂದ್ಯದ ರೋಚಕತೆಯನ್ನ ಡಬಲ್ ಮಾಡಿದೆ.

Advertisment

ಪಾಕಿಸ್ತಾನದ ಜೊತೆಗೆ ಪ್ರಿ-ಫೋಟೋ ಶೂಟ್ ಮಾಡಿಸಿಕೊಳ್ಳಲು ಟೀಂ ಇಂಡಿಯಾ ನಾಯಕ ಸೂರ್ಯ ಕುಮಾರ್​ ಯಾದವ್ ನಿರಾಕರಿಸಿದ್ದಾರೆ. ಏಷ್ಯಾಕಪ್​​ನಲ್ಲಿ ಎರಡು ತಂಡಗಳು ಫೈನಲ್ ಪ್ರವೇಶ ಮಾಡಿವೆ. ಸಾಮಾನ್ಯವಾಗಿ ಫೈನಲ್ ಪ್ರವೇಶ ಮಾಡಿದ ಬಳಿಕ ಪಂದ್ಯಕ್ಕೂ ಮುನ್ನ ಎರಡು ತಂಡದ ನಾಯಕರ ಮಧ್ಯೆ ಕಪ್ ಇಟ್ಟು  ಫೋಟೋಶೂಟ್ ನಡೆಯುತ್ತದೆ. ಪಾಕ್ ನಾಯಕನ ಜೊತೆ ಫೋಟೋ ತೆಗೆಸಿಕೊಳ್ಳಲು ಸೂರ್ಯಕುಮಾರ್​ ಒಪ್ಪಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ:ಸುಖಾಸುಮ್ಮನೇ ಕೆಣಕಿದ ಪಾಕ್.. ಮತ್ತೆ ಮಣ್ಣು ಮುಕ್ಕಿಸಲು ಸೂರ್ಯ ಸೇನೆ ಮಾಸ್ಟರ್ ಪ್ಲಾನ್

salman ali agha

ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಘಾ.. ಇದು ಸಂಪೂರ್ಣ ಆತನ ನಿರ್ಧಾರ. ಫೋಟೋಶೂಟ್​ಗೆ ಬರಬೇಕೋ, ಬೇಡವೋ ಅನ್ನೋ ನಿರ್ಧಾರ ಅವನದ್ದು. ಅದಕ್ಕೆಲ್ಲ ನಾನು ಏನೂ ಮಾಡೋಕೆ ಆಗಲ್ಲ ಎಂದಿದ್ದಾನೆ. ಜೊತೆಗೆ ಇವತ್ತಿನ ಪಂದ್ಯವನ್ನು ಗೆದ್ದು ತೋರಿಸ್ತೇವೆ ಎಂದಿದ್ದಾನೆ.

Advertisment

ಇವತ್ತಿನ ಪಂದ್ಯವನ್ನು ನಾವು ಗೆಲ್ತೇವೆ. ನಮ್ಮ ಪ್ರಯತ್ನ ಉತ್ತಮ ಕ್ರಿಕೆಟ್ ಆಡೋದು. ನಾವು ಒಳ್ಳೆಯ ಕ್ರಿಕೆಟ್ ಆಡಿದರೆ ಆ 40 ಓವರ್​​ಗಳಲ್ಲಿ ನಮ್ಮ ಗುರಿ ಸಾಧ್ಯವಾಗುತ್ತದೆ. ಆ ಮೂಲಕ ನಾವು ಅವರನ್ನು ಸೋಲಿಸಬಹುದು ಎಂದಿದ್ದಾನೆ.

ಇದನ್ನೂ ಓದಿ:ಫೈನಲ್​ಗೂ ಮುನ್ನವೇ ಆಘಾತ.. ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್​​ ಆಡೋದು ಡೌಟ್..! 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Ind vs Pak India vs Pakisthan final india vs pakistan asia cup Asia Cup 2025 Asia cup final
Advertisment
Advertisment
Advertisment