/newsfirstlive-kannada/media/media_files/2025/09/15/team_india_pak_ind-2025-09-15-20-09-00.jpg)
ಒಂದಲ್ಲ.. ಎರಡಲ್ಲ.. ಬರೋಬ್ಬರಿ 41 ವರ್ಷದ ಇತಿಹಾಸ. ಈ 41 ವರ್ಷಗಳ ಏಷ್ಯಾಕಪ್​​ ಇತಿಹಾಸದಲ್ಲಿ 17 ಟೂರ್ನಿಗಳು ನಡೆದಿವೆ. 17 ಏಷ್ಯಾಕಪ್​​​​ಗಳ ಪೈಕಿ ಫಸ್ಟ್​ ಟೈಮ್ ಇಂಡೋ ಪಾಕ್ ಫೈನಲ್ ಮುಖಾಮುಖಿಯಾಗ್ತಿವೆ. ಈ ಹೈವೋಲ್ಟೇಜ್ ಬ್ಯಾಟಲ್​​ನಲ್ಲಿ ಯಾರು, ಏಷ್ಯಾನ್​ ಕಿಂಗ್ ಆಗ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇವತ್ತಿನ ಬಿಗ್ ಬ್ಯಾಟಲ್​​ನಲ್ಲೂ ಟೀಮ್ ಇಂಡಿಯಾನೇ ಗೆಲ್ಲೋ ಹಾಟ್ ಫೇವರಿಟ್​ ಆಗಿ ಅಖಾಡಕ್ಕಿಳಿಯುತ್ತಿದೆ.
ಇದನ್ನೂ ಓದಿ:ಪಾಕ್​ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ತಂಡ ಕಣಕ್ಕೆ.. ಸಂಭಾವ್ಯ ಆಟಗಾರರ ಲಿಸ್ಟ್..!
ಆದರೆ ಟೀಂ ಇಂಡಿಯಾಗೆ ಇಂಜುರಿ ಸಮಸ್ಯೆ ಕಾಡಿದೆ. ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ, ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದೇ ಕಾರಣದಿಂದ ಇವತ್ತಿನ ಹೈವೋಲ್ಟೇಜ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ. ಜೊತೆಗೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೂಡ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ನೋವು ಅನುಭವಿಸಿದ್ದರು.
ಆದರೆ ಅಭಿಷೇಕ್ ಶರ್ಮಾ ಚೇತರಿಸಿಕೊಂಡಿದ್ದಾರೆ ಅಂತಾ ತಂಡದ ಮ್ಯಾನೇಜ್ಮೆಂಟ್ ಬಹಿರಂಗವಾಗಿ ಹೇಳಿದೆ. ಇದು ಟೀಂ ಇಂಡಿಯಾಗೆ ಹಾಗೂ ಅಭಿಮಾನಿಗಳಿಗೆ ದೊಡ್ಡ ನಿರಾಳತೆ ತಂದಿದೆ. ಹಾರ್ದಿಕ್ ಪಾಂಡ್ಯ ಆಡ್ತಾರಾ? ಇಲ್ಲವಾ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ. ಒಂದು ವೇಳೆ ಪಾಂಡ್ಯ ಆಡದಿದ್ದರೆ ಅವರ ಸ್ಥಾನಕ್ಕೆ ಯಾರು ಅನ್ನೋದು ಕೂಡ ಕನ್ಫರ್ಮ್ ಆಗಿದೆ. ಹರ್ಷಿತ್ ರಾಣಾ ಅಥವಾ ಅರ್ಷ್​ದೀಪ್ ಸಿಂಗ್ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಫೈನಲ್ ಪಂದ್ಯಕ್ಕೂ ಮುನ್ನವೇ ಪಾಕ್ ನಾಯಕನ ಉಗ್ರ ಹೇಳಿಕೆ.. ಟೀಂ ಇಂಡಿಯಾಗೆ ಬೆದರಿಕೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ