/newsfirstlive-kannada/media/media_files/2025/09/21/team-india-15-2025-09-21-09-10-47.jpg)
ಕ್ರಿಕೆಟ್​ ಲೋಕದ ಮತ್ತೊಂದು ಹೈವೋಲ್ಟೆಜ್​​ ಬ್ಯಾಟಲ್​ಗೆ ವೇದಿಕೆ ಸಜ್ಜಾಗಿದೆ. ಸತತವಾಗಿ 3ನೇ ಭಾನುವಾರದಂದು ಬದ್ಧವೈರಿಗಳು ಆನ್​ಫೀಲ್ಡ್​ನಲ್ಲಿ ಮುಖಾಮುಖಿಯಾಗ್ತಿವೆ. ಆಫ್​ ದ ಫೀಲ್ಡ್​ನಲ್ಲಾದ ಘಟನೆಗಳು ಹಾಗೂ ಆನ್​ಫೀಲ್ಡ್​ ಬ್ಯಾಟಲ್​ಗಳು ಇಂದಿನ ಇಂಡೋ-ಪಾಕ್ ಕದನ ಫೀವರ್​ ಹೆಚ್ಚಿಸಿವೆ. ಬ್ಯಾಟಲ್​ಫೀಲ್ಡ್​ನಲ್ಲಿ ಪಾಕಿಗಳ ಸೊಕ್ಕಡಗಿಸಲು ಸೂರ್ಯನ ಸೈನ್ಯ ತುದಿಗಾಲಲ್ಲಿ ನಿಂತಿದೆ.
ದುಂಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು ರಾತ್ರಿ 8 ಗಂಟೆಯಿಂದ ಏಷ್ಯಾಕಪ್ ಫೈನಲ್ ಪಂದ್ಯ ಶುರುವಾಗಲಿದೆ. ಈಗಾಗಲೇ ಭಾರತದ ವಿರುದ್ಧ ಎರಡು ಬಾರಿ ಏಷ್ಯಾಕಪ್​​ನಲ್ಲಿ ಸೋತಿರುವ ಪಾಕ್, ಭಾರೀ ಅವಮಾನ ಎದುರಿಸಿದೆ. ಈ ಮಧ್ಯೆ ಇಂದು ಫೈನಲ್ ಮ್ಯಾಚ್ ನಡೆಯಲಿದೆ.
ಇದನ್ನೂ ಓದಿ: ಸುಖಾಸುಮ್ಮನೇ ಕೆಣಕಿದ ಪಾಕ್.. ಮತ್ತೆ ಮಣ್ಣು ಮುಕ್ಕಿಸಲು ಸೂರ್ಯ ಸೇನೆ ಮಾಸ್ಟರ್ ಪ್ಲಾನ್
ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಪ್ಲೇಯಿಂಗ್-11ನಲ್ಲಿ ಬದಲಾವಣೆ ಮಾಡುವ ನಿರೀಕ್ಷೆ ಇದೆ. ಕೆಲವು ಮಾಹಿತಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಇವತ್ತು ಆಡೋದು ಡೌಟ್ ಎನ್ನಲಾಗುತ್ತಿದೆ. ಉಳಿದಂತೆ ಎಲ್ಲಾ ಆಟಗಾರರು ಲಭ್ಯ ಇರಲಿದ್ದಾರೆ. ಇನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸಾಕಷ್ಟು ಬದಲಾವಣೆ ಮಾಡಿತ್ತು.
ಹರ್ಷಿತ್ ರಾಣಾ ಅರ್ಷ್​ದೀಪ್ ಸಿಂಗ್​ಗೆ ತಂಡದಲ್ಲಿ ಸ್ಥಾನ ಸಿಕ್ಕಿತ್ತು. ಆದರೆ ಇಂದು ತಂಡಕ್ಕೆ ಬುಮ್ರಾ ಮತ್ತು ಶಿವಂ ದುಬೆ ತಂಡಕ್ಕೆ ಕಂಬ್ಯಾಕ್ ಮಾಡ್ತಿದ್ದಾರೆ. ಹೀಗಾಗಿ ಇವತ್ತಿನ ಪ್ಲೇಯಿಂಗ್-11 ಭಾರೀ ನಿರೀಕ್ಷೆಯನ್ನ ಹುಟ್ಟು ಹಾಕಿದೆ.
ಸಂಭಾವ್ಯ ತಂಡ: ಅಭಿಷೇಕ್ ಶರ್ಮಾ, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ/ಅರ್ಷದೀಪ್ ಸಿಂಗ್, ಅಕ್ಸರ್ ಪಟೇಲ್, ಶಿವಂ ದುಬೆ, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ
ಇದನ್ನೂ ಓದಿ: ಫೈನಲ್ ಪಂದ್ಯಕ್ಕೂ ಮುನ್ನವೇ ಪಾಕ್ ನಾಯಕನ ಉಗ್ರ ಹೇಳಿಕೆ.. ಟೀಂ ಇಂಡಿಯಾಗೆ ಬೆದರಿಕೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ