/newsfirstlive-kannada/media/media_files/2025/09/28/salman-ali-agha-2025-09-28-09-39-57.jpg)
ಏಷ್ಯಾ ಕಪ್ ಫೈನಲ್ (Asia cup final) ಪಂದ್ಯವು ಇವತ್ತು ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakisthan) ನಡುವೆ ನಡೆಯಲಿದೆ. ಈ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಪತ್ರಿಕಾಗೋಷ್ಠಿಯಲ್ಲಿ ದೊಡ್ಡ ಹೇಳಿಕೆ ನೀಡಿದ್ದಾನೆ.
ಹ್ಯಾಂಡ್‌ಶೇಕ್ ವಿವಾದದ ಬಗ್ಗೆ ಮಾತನಾಡುತ್ತ, ಅದರ ಬಗ್ಗೆ ಪ್ರತಿಕ್ರಿಯಿಸಲು ನಮ್ಮ ತಂಡಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ. ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ಭಾವನೆಗಳು ಯಾವಾಗಲೂ ಕ್ರಿಕೆಟನ್ನು ಮೀರುತ್ತವೆ. ಆದರೆ ಕ್ರೀಡಾ ಮನೋಭಾವ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಅಂತಾ ಬಡಾಯಿ ಕೊಚ್ಚಿಕೊಂಡಿದ್ದಾನೆ.
ಇದನ್ನೂ ಓದಿ:ಸುಖಾಸುಮ್ಮನೇ ಕೆಣಕಿದ ಪಾಕ್.. ಮತ್ತೆ ಮಣ್ಣು ಮುಕ್ಕಿಸಲು ಸೂರ್ಯ ಸೇನೆ ಮಾಸ್ಟರ್ ಪ್ಲಾನ್
2007ರಲ್ಲಿ ನಾನು 16 ವರ್ಷದೊಳಗಿನ ಕ್ರಿಕೆಟ್ ತಂಡದಲ್ಲಿದ್ದೆ. ಆಗಲೂ ಎರಡೂ ದೇಶಗಳ ನಡುವಿನ ಸಂಬಂಧಗಳು ಉತ್ತಮವಾಗಿರಲಿಲ್ಲ. ಆದರೂ ಆಟಗಾರರು ಕೈಕುಲುಕುತ್ತಿದ್ದರು. ಯಾವುದೇ ತಂಡ ಉದ್ದೇಶಪೂರ್ವಕವಾಗಿ ಹ್ಯಾಂಡ್​ಶೇಕ್ ತಪ್ಪಿಸಿಕೊಳ್ಳುವುದನ್ನು ಎಂದಿಗೂ ನೋಡಿಲ್ಲ. ಅದಕ್ಕೆ ನಮ್ಮ ತಂಡ ಫೈನಲ್​​ನಲ್ಲಿ ಉತ್ತರ ಕೊಡಲಿದೆ ಎಂದು ಎಚ್ಚರಿಕೆ ನೀಡಿದ್ದಾನೆ.
ಒತ್ತಡದಲ್ಲಿ ಕುಸಿಯಲು ಬಯಸಲ್ಲ
ಭಾರತದ ವಿರುದ್ಧ ಗುಂಪು ಹಂತ ಮತ್ತು ಸೂಪರ್ ಫೋರ್ ಪಂದ್ಯಗಳೆರಡರಲ್ಲೂ ಸೋತಿದೆ. ಅದಕ್ಕೆ ಕಾರಣ ಒತ್ತಡದಲ್ಲಿ ತಂಡ ಕುಸಿದಿದೆ. ಆದರೆ ಫೈನಲ್ ಪಂದ್ಯದಲ್ಲಿ ಹಾಗೆ ಆಗುವುದಿಲ್ಲ. ಹಿಂದಿನ ಪಂದ್ಯಗಳಲ್ಲಿ ನಮ್ಮ ತಂಡ ತಪ್ಪುಗಳನ್ನು ಮಾಡಿದೆ. ಅದೇ ಸೋಲಿಗೆ ಕಾರಣವಾಯಿತು. ಫೈನಲ್‌ನಲ್ಲಿ ಎರಡೂ ತಂಡಗಳು ಸಮಾನ ಒತ್ತಡ ಎದುರಿಸುತ್ತವೆ. ನಾವು ಭಾರತೀಯ ಮಾಧ್ಯಮ ಅಥವಾ ಹೊರಗಿನ ಶಬ್ದದ ಬಗ್ಗೆ ಕೇರ್​ ಮಾಡಲ್ಲ. ನಾವು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎಂದಿದ್ದಾನೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ