Advertisment

ಕ್ಷಣ ಕ್ಷಣಕ್ಕೂ ರೋಚಕತೆ ಹೆಚ್ಚಾಗಿತ್ತು.. ಸ್ಪೆಷಲ್ ವಿಡಿಯೋ ಹಂಚಿಕೊಂಡ ಬಿಸಿಸಿಐ -VIDEO

ಸಾಧಾರಣ ಟಾರ್ಗೆಟ್​​ ಚೇಸಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ಎದುರಿಸಿದ್ದು ಆಘಾತವನ್ನ. ಟೀಮ್​ ಇಂಡಿಯಾ ಟಾಪ್​ ಆರ್ಡರ್​ ಬ್ಯಾಟರ್ಸ್​​ ಜಸ್ಟ್​ 4 ಓವರ್​ ಅಂತ್ಯದೊಳಗೆ ಪೆವಿಲಿಯನ್​ ಸೇರಿದ್ರು. ಆಗ ಬಹುತೇಕರು ಕತೆ ಮುಗೀತು ಅಂದುಕೊಂಡಿದ್ರು. ಅಂತ್ಯದಲ್ಲಿ ಟೀಮ್​ ಇಂಡಿಯಾ ಏಷ್ಯನ್​ ಕಿಂಗ್​ ಆಗಿ ಮೆರದಾಡಿತು.

author-image
Ganesh Kerekuli
Suryakumar yadav (2)
Advertisment
  • ಪಾಕ್‌ನ ಮಣ್ಣುಮುಕ್ಕಿಸಿ ಭಾರತ ಏಷ್ಯಾ ಚಾಂಪಿಯನ್
  • ಅರಬ್ಬರ ನಾಡಲ್ಲಿ ‘ಸೂರ್ಯ’ ಪಡೆಗೆ ಭರ್ಜರಿ ಗೆಲುವು
  • ಬದ್ಧವೈರಿ ಎದುರು ಟೀಮ್​ ಇಂಡಿಯಾಗೆ ವಿಜಯ ‘ತಿಲಕ’

ಸಾಧಾರಣ ಟಾರ್ಗೆಟ್​​ ಚೇಸಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ಎದುರಿಸಿದ್ದು ಆಘಾತವನ್ನ. ಟೀಮ್​ ಇಂಡಿಯಾ ಟಾಪ್​ ಆರ್ಡರ್​ ಬ್ಯಾಟರ್ಸ್​​ ಜಸ್ಟ್​ 4 ಓವರ್​ ಅಂತ್ಯದೊಳಗೆ ಪೆವಿಲಿಯನ್​ ಸೇರಿದ್ರು. ಆಗ ಬಹುತೇಕರು ಕತೆ ಮುಗೀತು ಅಂದುಕೊಂಡಿದ್ರು. ಅಂತ್ಯದಲ್ಲಿ ಟೀಮ್​ ಇಂಡಿಯಾ ಏಷ್ಯನ್​ ಕಿಂಗ್​ ಆಗಿ ಮೆರದಾಡಿತು.

Advertisment

ಟೀಮ್​ ಇಂಡಿಯಾಗೆ ಆಘಾತ

147 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಟೀಮ್​ ಇಂಡಿಯಾ ಆರಂಭದಲ್ಲೇ ಆಘಾತ ಎದುರಿಸಿತು. ಟೂರ್ನಿಯಲ್ಲಿ ಸಾಲಿಡ್​ ಬ್ಯಾಟಿಂಗ್​ ನಡೆಸಿದ್ದ ಅಭಿಷೇಕ್​ ಶರ್ಮಾ ಆರಂಭದಲ್ಲೇ ಮುಗ್ಗರಿಸಿದ್ರು. 2ನೇ ಓವರ್​ನ ಮೊದಲ ಎಸೆತದಲ್ಲೇ ಅಭಿಷೇಕ್​ ಔಟಾದ್ರು.

ಇದನ್ನೂ ಓದಿ: ಪಾಕಿಸ್ತಾನಿ ಭಾಷೆಯಲ್ಲೇ ರೌಫ್​​ಗೆ ಉತ್ತರ ಕೊಟ್ಟ ಬೂಮ್ ಬೂಮ್ ಬೂಮ್ರಾ..? VIDEO

Surya kumar yadav (2)

ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​ ಜಸ್ಟ್​ 1 ರನ್​ಗಳಿಸಿ ನಿರ್ಗಮಿಸಿದ್ರೆ, ಉಪನಾಯಕ ಶುಭ್​ಮನ್​ ಗಿಲ್​ ಆಟ 5 ರನ್​ಗಳಿಗೆ ಅಂತ್ಯವಾಯ್ತು. ಜಸ್ಟ್​​ 20 ರನ್​ಗಳಿಸುವಷ್ಟರಲ್ಲಿ 3 ವಿಕೆಟ್​​ ಕಳೆದುಕೊಂಡ ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು.

Advertisment

ತಿಲಕ್​​ ವರ್ಮಾ - ಸಂಜು ಸ್ಯಾಮ್ಸನ್​ ಆಸರೆ

4ನೇ ವಿಕೆಟ್​ಗೆ ಜೊತೆಯಾದ ತಿಲಕ್​ ವರ್ಮಾ- ಸಂಜು ಸ್ಯಾಮ್ಸನ್​​ ಟೀಮ್​ ಇಂಡಿಯಾ ಕುಸಿದ ತಂಡಕ್ಕೆ ಚೇತರಿಕೆ ನೀಡಿದ್ರು. 50 ಎಸೆತಗಳಲ್ಲಿ 57 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದ್ರು. ಒಂದು ಕ್ಯಾಚ್​​ ಡ್ರಾಪ್​ನಿಂದಾಗಿ ಅದೃಷ್ಟದ ಅವಕಾಶ ಪಡೆದ ಸಂಜು ಸ್ಯಾಮ್ಸನ್​ 2 ಬೌಂಡರಿ, 2 ಸಿಕ್ಸರ್​ ಸಿಡಿಸಿ ಪಾಕ್​ ಬೌಲರ್​​ಗಳ ಮೇಲೆ ಒತ್ತಡ ಹೇರಿದ್ರು. ಆದರೆ ಬಿಗ್​ ಸ್ಕೋರ್​​ ಕಲೆ ಹಾಕುವಲ್ಲಿ ಫೇಲ್​ ಆದರು. 24 ರನ್​ಗಳಿಸಿ ನಿರ್ಗಮಿಸಿದ್ರು. ಇನ್ನೊಂದು ತುದಿಯಲ್ಲಿದ್ದ ತಿಲಕ್​ ವರ್ಮಾ, ಉತ್ತಮ ಆಟ ಮುಂದುವರೆಸಿದರು.

ಇದನ್ನೂ ಓದಿ: ಮೊದಲ ದಿನವೇ ಬಿಗ್​ಬಾಸ್​​ ಶಾಕ್​.. ಮುಖ್ಯದ್ವಾರ ಓಪನ್ ಆಗಿದೆ, ಆಚೆ ಹೋಗೋರು ಯಾರು?

TILAK_VARMA_SANJU

5ನೇ ವಿಕೆಟ್​​ಗೆ ತಿಲಕ್​ ವರ್ಮಾ ಜೊತೆಯಾದ ಶಿವಂ ದುಬೆ ಸಾಲಿಡ್​ ಆಟವಾಡಿದ್ರು. ಆರಂಭದಲ್ಲಿ ತಾಳ್ಮೆಯ ಆಟವಾಡಿದ ಈ ಜೋಡಿ ಕೊನೆಯ 6 ಓವರ್​​ಗಳಲ್ಲಿ ಗೆಲುವಿಗೆ 63 ರನ್​ ಬೇಕಿದ್ದಾಗ ಅಬ್ಬರಿಸಿದ್ರು. ಹ್ಯಾರಿಸ್​​ ರೌಫ್​​​ ಎಸೆದ 17ನೇ ಓವರ್​ನಲ್ಲಿ 17 ರನ್​ ಸಿಡಿಸಿದ್ರು. ಇದ್ರ ನಡುವೆ ತಿಲಕ್​ ವರ್ಮಾ ಹಾಫ್​​ ಸೆಂಚುರಿಯನ್ನೂ ಪೂರೈಸಿದ್ರು. 

Advertisment

ಶಿವಂ ದುಬೆ ದರ್ಬಾರ್​

ಇನ್ನೊಂದೆಡೆ ಕ್ಯಾಲ್ಕ್ಯಲೇಟೆಡ್​​ ಇನ್ನಿಂಗ್ಸ್​ ಕಟ್ಟಿದ ಶಿವಂ ದುಬೆ 2 ಬೌಂಡರಿ, 2 ಸಿಕ್ಸರ್​ ಸಿಡಿಸಿ ಸ್ಪೋಟಿಸಿದ್ರು. 22 ಎಸೆತಗಳಲ್ಲಿ 33 ರನ್​ ಸಿಡಿಸಿ ಮಿಂಚಿದ್ರು. 19ನೇ ಓವರ್​ನ ಕೊನೆಯ ಎಸೆತದಲ್ಲಿ ಶಿವಂ ದುಬೆ ಔಟಾದ್ರೂ, ಟೀಮ್​ ಇಂಡಿಯಾಗೆ ಹಿನ್ನಡೆಯಾಗಲಿಲ್ಲ. ಕೊನೆಯ ಓವರ್​ನ 2ನೇ ಎಸೆತದಲ್ಲಿ ತಿಲಕ್​ ವರ್ಮಾ ಸಿಕ್ಸರ್​ ಸಿಡಿಸಿದ್ರೆ, 4ನೇ ಎಸೆತವನ್ನ ಬೌಂಡರಿ ಬಾರಿಸಿದ ರಿಂಕು ಸಿಂಗ್​ ತಂಡವನ್ನ ಗೆಲುವಿನ ದಡ ಸೇರಿಸಿದ್ರು. 5 ವಿಕೆಟ್​​ಗಳ ಜಯ ಸಾಧಿಸಿದ ಟೀಮ್​ ಇಂಡಿಯಾ, ಪಾಕ್​ಗೆ ಸೋಲಿನ ರುಚಿ ತೋರಿಸಿತು. 9ನೇ ಏಷ್ಯಾಕಪ್​ ಕಿರೀಟಕ್ಕೆ ಮುತ್ತಿಕ್ಕಿತು.

ಟೀಮ್​ ಇಂಡಿಯಾ ಗೆಲುವಿನ ಗಡಿ ದಾಟ್ತಿದ್ದಂತೆ ದೇಶದೆಲ್ಲೆಡೆ ಸಂಭ್ರಮಾಚರಣೆ ನಡೆಯಿತು. ಗೆಲುವನ್ನ ಆಪರೇಷನ್​ ಸಿಂಧೂರಕ್ಕೆ ಹೋಲಿಸಿದ ಪ್ರಧಾನಿ ಮೋದಿ ಯುದ್ಧದಲ್ಲೇ ಇರಲಿ, ಆಟದಲ್ಲೇ ಇರಲಿ ಜಯ ನಮ್ದೆ ಎಂದು ಟೀಮ್​ ಇಂಡಿಯಾವನ್ನ ಅಭಿನಂದಿಸಿದ್ರು. ಇಡೀ ದೇಶ ಬದ್ಧವೈರಿಯನ್ನ ಆನ್​​ಫೀಲ್ಡ್​ ಬ್ಯಾಟಲ್​ನಲ್ಲಿ ಹಿಮ್ಮೆಟ್ಟಿಸಿದ ಸಂಭ್ರಮದಲ್ಲಿ ತೇಲಾಡಿತು.

ಇದನ್ನೂ ಓದಿ: ಛೀಮಾರಿ ಹಾಕಿದ ಕ್ಯಾಪ್ಟನ್ ಸೂರ್ಯ, ಪಾಕ್ ಪತ್ರಕರ್ತನಿಗೂ ತರಾಟೆ.. ಭಾರೀ ಆಕ್ರೋಶ..!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

india win asia cup Surya kumar Yadav asia cup trophy india vs pakistan asia cup Asia Cup 2025 Asia cup final
Advertisment
Advertisment
Advertisment