ಪಾಕಿಸ್ತಾನಿ ಭಾಷೆಯಲ್ಲೇ ರೌಫ್​​ಗೆ ಉತ್ತರ ಕೊಟ್ಟ ಬೂಮ್ ಬೂಮ್ ಬೂಮ್ರಾ..? VIDEO

ಏಷ್ಯಾಕಪ್​ ಫೈನಲ್​ ಬ್ಯಾಟಲ್​ನಲ್ಲಿ ಪಾಕ್ ತಂಡ ಉತ್ತಮ ಸ್ಟಾರ್ಟ್​​ ಪಡೆದುಕೊಳ್ತು. ಅಷ್ಟೇ ವೇಗವಾಗಿ ಹಳ್ಳಕ್ಕೆ ಬಿತ್ತು. ಟೀಮ್​ ಇಂಡಿಯಾ ಸ್ಪಿನ್​ ಮಾಂತ್ರಿಕರ ಕೈಚಳಕಕ್ಕೆ ಪಾಕ್​ ಬ್ಯಾಟರ್ಸ್​​ ಪೆವಿಲಿಯನ್​ ಪರೇಡ್​​ ನಡೆಸಿದ್ರು. ಟೀಮ್ ​ಇಂಡಿಯಾದ ಬೌಲಿಂಗ್​ ದಾಳಿ ಹೇಗಿತ್ತು?

author-image
Ganesh Kerekuli
japrit Bumrah
Advertisment
  • ಉತ್ತಮ ಆರಂಭ ಪಡೆದ ಪಾಕ್​ಗೆ ಶಾಕ್​ ಟ್ರೀಟ್​ಮೆಂಟ್​
  • ಸ್ಪಿನ್​ ಟ್ರ್ಯಾಪ್​ಗೆ ಸಿಲುಕಿ ವಿಲ ವಿಲ ಒದ್ದಾಡಿದ ಪಾಕ್​
  • ಟೀಮ್​ ಇಂಡಿಯಾ ದಾಳಿಗೆ ಪಾಕ್​ ತತ್ತರ 146ಕ್ಕೆ ಆಲೌಟ್​

ಏಷ್ಯಾಕಪ್​ ಫೈನಲ್​ ಬ್ಯಾಟಲ್​ನಲ್ಲಿ ಪಾಕಿಸ್ತಾನ ತಂಡ ಫ್ಲೈಯಿಂಗ್​ ಸ್ಟಾರ್ಟ್​​ ಪಡೆದುಕೊಳ್ತು.  ಅಷ್ಟೇ ವೇಗವಾಗಿ ಹಳ್ಳಕ್ಕೆ ಬಿತ್ತು. ಡಿಸೇಂಟ್​​ ಆರಂಭ ಪಡೆದ ಪಾಕ್​ ಪಡೆ ಸ್ಪಿನ್​ ಖೆಡ್ಡಾಗೆ ಸಿಕ್ಕು ವಿಲ ವಿಲ ಒದ್ದಾಡಿಬಿಡ್ತು. ಟೀಮ್​ ಇಂಡಿಯಾ ಸ್ಪಿನ್​ ಮಾಂತ್ರಿಕರ ಕೈಚಳಕಕ್ಕೆ ಪಾಕ್​ ಬ್ಯಾಟರ್ಸ್​​ ಪೆವಿಲಿಯನ್​ ಪರೇಡ್​​ ನಡೆಸಿದ್ರು. ಟೀಮ್ ​ಇಂಡಿಯಾದ ಬೌಲಿಂಗ್​ ದಾಳಿ ಹೇಗಿತ್ತು? ಅನ್ನೋದ್ರ ವಿವರ ಇಲ್ಲಿದೆ. 

ದುಬೈ ಅಂಗಳದಲ್ಲಿ ಮೊದಲು ಬ್ಯಾಟಿಂಗ್​ಗೆ ಬಂದ ಪಾಕಿಸ್ತಾನ ತಂಡ ಡಿಸೆಂಟ್​ ಆರಂಭ ಪಡೆದುಕೊಳ್ತು. ಆರಂಭಿಕರಾದ ಫಕಾರ್​ ಜಮಾನ್​, ಸಹಿಬ್ಝಾದಾ ಫರ್ಹಾನ್​​ ಎಚ್ಚರಿಕೆಯ ಆರಂಭ ಒದಗಿಸಿದ್ರು. ಟೀಮ್​ ಇಂಡಿಯಾದ ಬೌಲಿಂಗ್​ ದಾಳಿಯನ್ನ ತಾಳ್ಮೆಯ ಆಟದಿಂದಲೇ ಡೀಲ್​ ಮಾಡಿದ ಈ ಜೋಡಿ ಪವರ್​​ ಪ್ಲೇನಲ್ಲಿ 45 ರನ್​ಗಳಿಸಿತು. 

ಇದನ್ನೂ ಓದಿ:ಛೀಮಾರಿ ಹಾಕಿದ ಕ್ಯಾಪ್ಟನ್ ಸೂರ್ಯ, ಪಾಕ್ ಪತ್ರಕರ್ತನಿಗೂ ತರಾಟೆ.. ಭಾರೀ ಆಕ್ರೋಶ..!

kuldeep yadava (1)

150ರ ಸ್ಟ್ರೈಕ್​​ರೇಟ್​​ನಲ್ಲಿ ಬ್ಯಾಟ್​ ಬೀಸಿದ ಫರ್ಹಾನ್ ವೇಗವಾಗಿ ರನ್​ಗಳಿಸಿದ್ರು. 35 ಎಸೆತಕ್ಕೆ ಅರ್ಧಶತಕ ಪೂರೈಸಿದ್ರು. ಮೊದಲ ವಿಕೆಟ್​ಗೆ ಫರ್ಹಾನ್​​-ಪಕಾರ್​​ 84 ರನ್​ಗಳ ಜೊತೆಯಾಟವಾಡಿದ್ರು. 

ಉತ್ತಮ ಆರಂಭ ಪಡೆದಿದ್ದ ಪಾಕಿಸ್ತಾನಕ್ಕೆ ಟೀಮ್​ ಇಂಡಿಯಾ ಸ್ಪಿನ್ನರ್​​ಗಳು ಶಾಕ್​ ಮೇಲೆ ಶಾಕ್​ ಕೊಟ್ರು. 9.4ನೇ ಓವರ್​ನಲ್ಲಿ ಪರ್ಹಾನ್​-ಫಕಾರ್​ ಜೊತೆಯಾಟವನ್ನ ಬ್ರೇಕ್​ ಮಾಡುವಲ್ಲಿ ವರುಣ್​ ಚಕ್ರವರ್ತಿ ಯಶಸ್ವಿಯಾದ್ರು. ಅರ್ಧಶತಕ ಸಿಡಿಸಿ ಮಿಂಚಿದ್ದ ಫರ್ಹಾನ್​​, ಚಕ್ರವರ್ತಿಯ ಚಮಾತ್ಕಾರಕ್ಕೆ ಮಂಡಿಯೂರಿದ್ರು. 

ಫರ್ಹಾನ್​​​ ಪತನದೊಂದಿಗೆ ಪಾಕ್​ ಪತನ ಆರಂಭವಾಯ್ತು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಸೈಮ್​ ಅಯುಬ್​ ಅಬ್ಬರ 2 ಬೌಂಡರಿಗೆ ಸೀಮಿತವಾಯ್ತು. ಕುಲ್​​​ದೀಪ್​ ಯಾದವ್​, ಸ್ಪಿನ್​​ ಸ್ಟ್ರೋಕ್​ಗೆ ಸೈಮ್​ ಅಯುಬ್​ ಥಂಡಾ ಹೊಡೆದ್ರು.

ಇದನ್ನೂ ಓದಿ:‘ಮೈದಾನದಲ್ಲೂ ಆಪರೇಷನ್ ಸಿಂಧೂರ್..’ ಪಾಕ್ ಸೋಲಿಸಿದ ಬೆನ್ನಲ್ಲೇ ಮೋದಿ ಹೇಳಿದ್ದೇನು?

kuldeep yadava

ವಿಕೆಟ್​ ಕೀಪರ್​ ಮೊಹಮ್ಮದ್​ ಹ್ಯಾರೀಸ್​​ ಅಕೌಂಟ್​​ ಓಪನ್​ ಮಾಡೋದಕ್ಕೂ ಅವಕಾಶ ಸಿಗಲಿಲ್ಲ. 2ನೇ ಎಸೆತಕ್ಕೆ ಹ್ಯಾರೀಸ್​ನ ಅಕ್ಷರ್​ ಪಟೇಲ್​ ಬಲಿಹಾಕಿದ್ರು. 

ಒಂದೆಡೆ ವಿಕೆಟ್​ ಉರುಳಿದ್ರೂ ತಂಡಕ್ಕೆ ಇನ್ನೊಂದು ತುದಿಯಲ್ಲಿ ಕ್ರಿಸ್​ ಕಚ್ಚಿ ನಿಂತಿದ್ದ ಫಕಾರ್​ ಜಮಾನ್ ಆಟ ವರುಣ್​ ಚಕ್ರವರ್ತಿಯ ಮುಂದೆ ನಡೀಲಿಲ್ಲ. ಬಿಗ್​ ಶಾಟ್​ ಪ್ಲೇ ಮಾಡೋಕೆ ಹೋಗಿ ಕೈ ಸುಟ್ಟುಕೊಂಡ್ರು. ಬಳಿಕ ಬ್ಯಾಟಿಂಗ್​ಗೆ ಬಂದ ಹಸನ್​ ತಲತ್​​, ಅಕ್ಷರ್​ ಪಟೇಲ್​ಗೆ ವಿಕೆಟ್​ ಒಪ್ಪಿಸಿದ್ರು. 

ಇದನ್ನೂ ಓದಿ: ಟ್ರೋಫಿ ಗೆದ್ದರೂ ಪ್ರಶಸ್ತಿ ಸ್ವೀಕರಿಸದ ಭಾರತ.. ಪಾಕ್​​ಗೆ ಸೋಲಿಗಿಂತ ದೊಡ್ಡ ಅವಮಾನ

Tema india (1)

ಕುಲ್​​ದೀಪ್​ ಕೈಚಳಕಕ್ಕೆ ಪಾಕ್​ ಥಂಡಾ

17ನೇ ಓವರ್​​ನಲ್ಲಿ ಕುಲ್​​ದೀಪ್​ ಯಾದವ್​ ಸ್ಪಿನ್​ ಮೋಡಿಗೆ ಪಾಕಿಸ್ತಾನ ಥಂಡಾ ಹೊಡೆದುಬಿಡ್ತು. ಕುಲ್​​ದೀಪ್​ ಕೈಚಳಕಕ್ಕೆ ಒಂದೇ ಓವರ್​​ನಲ್ಲಿ ಮೂರು ವಿಕೆಟ್​ಗಳು ಉದುರಿಬಿದ್ವು. ಪಾಕ್ ಕ್ಯಾಪ್ಟನ್​​ ಸಲ್ಮಾನ್​​ ಅಘಾ, ಶಾಹೀನ್​​ ಅಫ್ರಿದಿ, ಫಾಹೀಮ್​ ಆಶ್ರಫ್​ಗೆ ಕುಲ್​​ದೀಪ್​​ ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ದಾರಿ ತೋರಿಸಿದ್ರು. 

ಸೂಪರ್​ 4 ಪಂದ್ಯದಲ್ಲಿ ಕೈಸನ್ನೆ ಮಾಡಿ ಕುಚೇಷ್ಟೆ ಮಾಡಿದ್ದ ಹ್ಯಾರೀಸ್​ ರೌಫ್​​ಗೆ ಜಸ್​​ಪ್ರೀತ್​ ಬೂಮ್ರಾ ಫೈನಲ್​ ಫೈಟ್​ನಲ್ಲಿ ಸರಿಯಾದ ತಿರುಗೇಟು ನೀಡಿದ್ರು. ಫರ್ಪೆಕ್ಟ್​ ಯಾರ್ಕರ್​ ಹಾಕಿ ಕ್ಲೀನ್​ಬೋಲ್ಡ್​ ಮಾಡಿದ ಬೂಮ್ರಾ, ಕೈಸನ್ನೆ ಮಾಡಿ ಪೆವಿಲಿಯನ್​ ದಾರಿ ತೋರಿಸಿದರು. 

ಇದನ್ನೂ ಓದಿ:BBK12; ಒಟ್ಟು ಎಷ್ಟು ಕಂಟೆಸ್ಟೆಂಟ್ಸ್​ ದೊಡ್ಮನೆಗೆ ಎಂಟ್ರಿ ಆಗಿದ್ದಾರೆ.. ಅವರು ಯಾರೆಂದು ಗೊತ್ತಾ?

ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಮೊಹಮ್ಮದ್​ ನವಾಜ್​ ವಿಕೆಟ್​ ಉರುಳಿಸಿದ ಜಸ್​​ಪ್ರಿತ್​ ಬೂಮ್ರಾ ಪಾಕಿಸ್ತಾನ ಆಟಕ್ಕೆ ಅಂತ್ಯ ಹಾಡಿದ್ರು. 113 ರನ್​ಗೆ 1 ವಿಕೆಟ್​​ ಕಳೆದುಕೊಂಡಿದ್ದ ಪಾಕ್​ 146 ರನ್​ಗೆ ಆಲೌಟ್​​ ಆಯ್ತು. ಅಂದ್ರೆ 33 ರನ್​ಗಳಿಸುಷ್ಟರಲ್ಲಿ 9 ವಿಕೆಟ್​ ಕಳೆದುಕೊಂಡು, ಟೀಮ್​ ಇಂಡಿಯಾಗೆ 147 ರನ್​ಗಳ ಟಾರ್ಗೆಟ್​ ನೀಡ್ತು. 

ಇದನ್ನೂ ಓದಿ:ಭಾರತಕ್ಕೆ ಗೆಲುವಿನ ಸಿಂಧೂರವಿಟ್ಟ ತಿಲಕ್.. ಪಾಕ್​ಗೆ ಅವಮಾನ, Asia Cup​ ಗೆದ್ದ ಸೂರ್ಯ ಪಡೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup 2025 India Win india vs pakistan asia cup India vs Pakisthan final Asia cup final asia cup trophy india win asia cup
Advertisment