/newsfirstlive-kannada/media/media_files/2025/09/23/kl_rahul_gill-2025-09-23-15-24-32.jpg)
ಏಷ್ಯಾಕಪ್​​ ಗೆದ್ದು ಏಷ್ಯನ್​ ಕಿಂಗ್​ ಆದ ಟೀಮ್​ ಇಂಡಿಯಾದ ಮುಂದೆ ಇದೀಗ ರೆಡ್​ ಬಾಲ್​ ಚಾಲೆಂಜ್​​ ಎದುರಾಗಿದೆ. ಇಂಡೋ-ವಿಂಡೀಸ್​​ ಮೊದಲ ಟೆಸ್ಟ್​ ಪಂದ್ಯ ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುರುವಾಗಿದೆ. ವೆಸ್ಟ್​ ವಿಂಡೀಸ್ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಹೇಗಿದೆ ಟೀಂ ಇಂಡಿಯಾ..?
ವೆಸ್ಟ್ ವಿಂಡೀಸ್ ವಿರುದ್ಧದ ಪಂದ್ಯಕ್ಕೆ ಭಾರತ ಬಲಿಷ್ಠ ಪ್ಲೇಯಿಂಗ್-11 ಪ್ರಕಟ ಮಾಡಿದೆ. ಎಡಗೈ ಬ್ಯಾಟರ್​​ ಯಶಸ್ವಿ ಜೈಸ್ವಾಲ್​, ಕನ್ನಡಿಗ ಕೆ.ಎಲ್​ ರಾಹುಲ್​ ಇನ್ನಿಂಗ್ಸ್​ ಆರಂಭಿಸೋದು ಫಿಕ್ಸ್​ 3ನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಸ್ಥಾನ ಪಡೆದುಕೊಂಡಿದ್ದು, ಕನ್ನಡಿಗ ದೇವದತ್​​ ಪಡಿಕ್ಕಲ್​ಗೆ ಕೊಕ್ ನೀಡಲಾಗಿದೆ.
ಇಂಗ್ಲೆಂಡ್​ ಪ್ರವಾಸದಲ್ಲಿ ವಿರಾಟ್​ ಕೊಹ್ಲಿ ಸ್ಲಾಟ್​ನಲ್ಲಿ ಆಡಿದ್ದ ಶುಭ್​ಮನ್​ ಗಿಲ್​ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ದರು. ಒತ್ತಡದ ನಡುವೆಯೂ ಕನ್ಸಿಸ್ಟೆಂಟ್​​​ ಆಗಿ ರನ್​ಗಳಿಸಿದ್ದ ಕ್ಯಾಪ್ಟನ್​ ಶುಭ್​ಮನ್​ ಗಿಲ್​ 4ನೇ ಕ್ರಮಾಂಕದಲ್ಲಿ ಆಡೋದು ಫಿಕ್ಸ್ ಆಗಿದೆ. ಖಾಯಂ ವಿಕೆಟ್​ ಕೀಪರ್​​ ರಿಷಭ್​ ಪಂತ್​​ ಇಂಜುರಿಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಪಂತ್​ ಸ್ಥಾನದಲ್ಲಿ ದೃವ್​ ಜುರೇಲ್​​​ ಸ್ಥಾನ ಪಡೆದಿದ್ದು, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ ನಡೆಸಲಿದ್ದಾರೆ.
ಇದನ್ನೂ ಓದಿ:RCB ಖರೀದಿಸೋರು ಇವರೇನಾ? ಯಾರು ಇವರು?
ಇಂಗ್ಲೆಂಡ್​ ಪ್ರವಾಸದಲ್ಲಿ ಇಂಜುರಿಗೆ ತುತ್ತಾಗಿದ್ದ ನಿತೀಶ್​ ರೆಡ್ಡಿ ಫುಲ್​ ಫಿಟ್​ ಆಗಿದ್ದು, ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಬ್ಬರು ಸ್ಪೆಷಲಿಸ್ಟ್​ ವೇಗಿಗಳಿಗೆ ಕೋಚ್​ ಗೌತಮ್​ ಗಂಭೀರ್​ ಮಣೆ ಹಾಕಲಿದ್ದಾರೆ. ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರಿತ್​ ಬೂಮ್ರಾ, ಮೊಹಮ್ಮದ್​ ಸಿರಾಜ್​​ ವೇಗಿಗಳಾಗಿ ಕಣಕ್ಕಿಳಿದಿದ್ದಾರೆ. ಇನ್ನುಳಿದಂತೆ ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದಾರೆ.
ಟೀಂ ಇಂಡಿಯಾ: ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಗಿಲ್ (ನಾಯಕ), ಧ್ರುವ್ ಜರೇಲ್, ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ್, ನಿತೀಶ್ ರೆಡ್ಡಿ, ಕುಲ್ದೀಪ್ ಯಾದವ್, ಬುಮ್ರಾ, ಸಿರಾಜ್.
ಇದನ್ನೂ ಓದಿ:ಮೈಸೂರು ದಸರಾ ಶುರುವಾಗಿದ್ದು ಹೇಗೆ? ಯಾವಾಗ? ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ