/newsfirstlive-kannada/media/media_files/2025/10/02/rcb-2025-10-02-09-21-58.jpg)
ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalith Modi) ಅವರು ಆರ್‌ಸಿಬಿ (RCB) ಫ್ರಾಂಚೈಸಿ ಮಾರಾಟದ ಬಗ್ಗೆ ಪ್ರಸ್ತಾಪಿಸಿ, ಭಾರೀ ಚರ್ಚೆಗೆ ನಾಂದಿ ಹಾಡಿದ್ದಾರೆ. ಲಲಿತ್ ಮೋದಿ ಮಾಡಿರುವ ಆರ್​ಸಿಬಿ ಮಾರಾಟ ಕುರಿತ ಟ್ವೀಟ್ ಹಲವು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
ಅಂತೆಯೇ ಆರ್‌ಸಿಬಿ ಖರೀದಿಸಲು ಬಿಲಿಯನೇರ್ ಅದಾರ್​ ಪೂನವಾಲಾ (Adar Poonawalla) ಎದುರು ನೋಡುತ್ತಿದ್ದಾರೆ ಎಂದು ವರದಿಯಾಗಿದೆ. ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಕೋವಿಶೀಲ್ಡ್ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (Serum Institute of India) ಸಿಇಒ ಆಗಿರುವ ಪೂನವಾಲಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್​ ನೋಡಿದ ಕೆಲವರು ಆರ್‌ಸಿಬಿ ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎಂದು ಊಹಿಸಲಾಗುತ್ತಿದೆ. 1.5 ಲಕ್ಷ ಕೋಟಿ ರೂ. ನಿವ್ವಳ ಮೌಲ್ಯ ಹೊಂದಿರುವ ಪೂನವಾಲಾ, ದೇಶದ ಅತಿದೊಡ್ಡ ಚಲನಚಿತ್ರ ನಿರ್ಮಾಣ ಕಂಪನಿಗಳಲ್ಲಿ ಒಂದಾದ ಧರ್ಮ ಪ್ರೊಡಕ್ಷನ್ಸ್‌ನಲ್ಲಿ (Dharma productions) ಪಾಲು ಹೊಂದಿದ್ದಾರೆ.
ಇದೀಗ ಇಂಡಿಯನ್ ಪ್ರೀಮಿಯರ್​ ಲೀಗ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಲ್ಲಿ ಪಾಲನ್ನು ಖರೀದಿಸುವ ಸಾಧ್ಯತೆ ಇದೆ. ಇನ್ನು ಪೂನವಾಲಾ ಏನೆಂದು ಟ್ವೀಟ್ ಮಾಡಿದ್ದಾರೆ ಎಂದು ನೋಡೋದಾರೆ, ‘ಸರಿಯಾದ ಮೌಲ್ಯಮಾಪನದ ಪ್ರಕಾರ.. RCB ಒಂದು ಉತ್ತಮ ತಂಡ’ ಎಂದು ಬರೆದುಕೊಂಡಿದ್ದಾರೆ. ಯುನೈಟೆಡ್ ಸ್ಪಿರಿಟ್ಸ್ ಒಡೆತನದ ಫ್ರಾಂಚೈಸಿಯಲ್ಲಿ ಪಾಲು ಹೊಂದಲು ಪೂನವಾಲಾ ಆಸಕ್ತರಾಗಿದ್ದಾರೆ ಎನ್ನಲಾಗುತ್ತಿದೆ.
ಪೂನವಾಲಾ ಬಳಿ ಆಸ್ತಿ ಎಷ್ಟಿದೆ..?
ಪೂನವಾಲಾ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಇವರ ಒಟ್ಟು ನಿವ್ವಳ ಮೌಲ್ಯ 1.5 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅವರ ತಂದೆ ಸೈರಸ್ ಪೂನವಾಲಾ ಕೂಡ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅವರ ಕಂಪನಿ, SII, ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡದಿರಬಹುದು. ಆದರೆ ಅದರ ಮೌಲ್ಯ ಸುಮಾರು 2.5 ಲಕ್ಷ ಕೋಟಿ ರೂ.ಗಳಿಂದ 3 ಲಕ್ಷ ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ಸೇಲ್​ಗೆ ಇದೆಯಾ ಐಪಿಎಲ್​ನ ಹಾಟ್ ಫೇವರಿಟ್ RCB? ಲಲಿತ್ ಮೋದಿ ಸ್ಫೋಟಕ ಮಾಹಿತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ