Advertisment

ಸೇಲ್​ಗೆ ಇದೆಯಾ ಐಪಿಎಲ್​ನ ಹಾಟ್ ಫೇವರಿಟ್ RCB? ಲಲಿತ್ ಮೋದಿ ಸ್ಫೋಟಕ ಮಾಹಿತಿ

ಆರ್​ಸಿಬಿ ಸೇಲ್​ ಬಗ್ಗೆ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ. ಆರ್​ಸಿಬಿ ನಿಗದಿ ಪಡಿಸುವ ಈ ಹೊಸ ಮೌಲ್ಯವೇ, ಇತರೆ ತಂಡಗಳಿಗೆ ಇನ್ಮೇಲೆ ಮೂಲ ಬೆಲೆಯಾಗಲಿದೆ. ಅವರು ಏನು ಹೇಳಿದ್ದಾರೆ ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ.

author-image
Ganesh Kerekuli
RCB_KOHLI
Advertisment

ಮಾರಾಟಕ್ಕೆ ಇದೆಯಾ ಐಪಿಎಲ್​ನ ಹಾಟ್ ಫೇವರಿಟ್ ಆರ್​ಸಿಬಿ? ಹೀಗೊಂದು ಪ್ರಶ್ನೆ ಮತ್ತೆ ಉದ್ಭವ ಆಗಿದೆ. ಆರ್​ಸಿಬಿ ಸೇಲ್ ಆಗಲಿದೆ ಅನ್ನೋ ವದಂತಿ ನಿನ್ನೆ, ಮೊನ್ನೆಯದ್ದಲ್ಲ. ಅನೇಕ ಬಾರಿ ಈ ವಿಚಾರ ಬಂದು ಹೋಗಿದೆ. ಆದರೆ ಈಗ ವಿಷಯ ಪ್ರಸ್ತಾಪಿಸಿದ್ದು ಸಾಮಾನ್ಯ ವ್ಯಕ್ತಿ ಅಲ್ಲ. ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ! 

Advertisment

ಲಲಿತ್ ಮೋದಿ ಅವರು ಐಪಿಎಲ್ ಮಾರಾಟವಾಗುವ ಬಗ್ಗೆ ಪ್ರಸ್ತಾಪ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಇತಿಹಾಸದಲ್ಲಿ ಆರ್​ಸಿಬಿ ಹೊಸ ದಾಖಲೆ ಬರೆಯುತ್ತದೆ. ದಾಖಲೆ ಬೆಲೆಗೆ ಮಾರಾಟವಾಗಲಿದೆ ಎಂದು ಲಲಿತ್ ಮೋದಿ ಹೇಳಿದ್ದು, ಅವರ ಟ್ವೀಟ್ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. 

ಇದನ್ನೂ ಓದಿ:ಟ್ರೋಫಿ ಸ್ವೀಕರಿಸಲ್ಲ ಎಂದಿರಲಿಲ್ಲ, ಅವರು ಕಪ್ ಎತ್ಕೊಂಡು ಓಡಿದರು -ಸೂರ್ಯ ಮತ್ತೆ ಆಕ್ರೋಶ

ಆರ್​ಸಿಬಿ ಸೇಲ್?

ಐಪಿಎಲ್ ಫ್ರಾಂಚೈಸಿಗಳು ಅದ್ರಲ್ಲೂ ಆರ್​ಸಿಬಿ ಫ್ರಾಂಚೈಸಿಯ ಮಾರಾಟದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಆದ್ರೆ ಈ ಹಿಂದೆ ಇದನ್ನ ಆರ್​ಸಿಬಿ ತಳ್ಳಿಹಾಕಿದೆ. ಆದ್ರೀಗ, ಅದರ ಮಾಲೀಕರು ಕಡೆಗೂ ತಮ್ಮ ಬ್ಯಾಲೆನ್ಸ್ ಶೀಟ್​ನಿಂದ ಹೊರ ತೆಗೆದು ಮಾರಾಟ ಮಾಡೋದಕ್ಕೆ ಮುಂದಾಗಿದ್ದಾರೆ ಅನಿಸುತ್ತಿದೆ. ಕಳೆದ ಸೀಸನ್​ನಲ್ಲಿ ಐಪಿಎಲ್​ನ ಗೆಲುವು, ಜೊತೆಗೆ ತಂಡಕ್ಕಿರುವ ಸ್ಟ್ರಾಂಗ್ ಫ್ಯಾನ್ ಬೇಸ್, ಅದಕ್ಕಿಂತಲೂ ಹೆಚ್ಚಾಗಿ ಬಲಿಷ್ಠ ತಂಡ ಮತ್ತು ಅದ್ಭುತ ಟೀಮ್ ಮ್ಯಾನೇಜ್ಮೆಂಟ್, ಇದನ್ನೆಲ್ಲಾ ನೋಡಿದ್ರೆ ಸಂಪೂರ್ಣವಾಗಿ ಐಪಿಎಲ್ ಫ್ರಾಂಚೈಸಿ ಅಂತ ಸಿಗುವ ತಂಡ ಇದೊಂದೇ ಅಂತ ನನಗೆ ನಂಬಿಕೆ ಇದೆ.

ದೊಡ್ಡ ದೊಡ್ಡ ಜಾಗತಿಕ ಹೂಡಿಕೆ ಸಂಸ್ಥೆಗಳು ಅಥವಾ ಸ್ವಾಯತ್ತ ಹೂಡಿಕೆ ಸಂಸ್ಥೆಗಳು, ತಮ್ಮ ಹೂಡಿಕೆಯ ಭಾಗವಾಗಿ, ಅದ್ರಲ್ಲೂ ಭಾರತದಲ್ಲಿ ಹೂಡಿಕೆ ಭಾಗವಾಗಿ ಖಂಡಿತವಾಗಿಯೂ ಈ ತಂಡವನ್ನ ತಮ್ಮ ಜೊತೆ ಇರಿಸಿಕೊಳ್ಳಲು ಮುಗಿ ಬೀಳುವ ವಿಶ್ವಾಸ ನನಗಿದೆ. ಇದಕ್ಕಿಂತಲೂ ಒಳ್ಳೆಯ, ಅತ್ಯುತ್ತಮ ಹೂಡಿಕೆಯ ಅವಕಾಶ ನನಗಂತೂ ಹೊಳೆಯುತ್ತಿಲ್ಲ.

ಇದನ್ನ ಯಾರೇ ಖರೀದಿಸೋದಿದ್ರೂ ಅವರಿಗೆ ನನ್ನ ಶುಭ ಹಾರೈಕೆಗಳು. ವ್ಯಾಲ್ಯುವೇಷನ್​ನಲ್ಲೂ ಇದು ನಿಜವಾಗಿಯೂ ಹೊಸ ದಾಖಲೆಯನ್ನ ಬರೆಯುತ್ತೆ. ಇದರಿಂದ ಐಪಿಎಲ್ ಕೇವಲ ವೇಗವಾಗಿ ಬೆಳೆಯುತ್ತಿರುವ ಸ್ಪೋರ್ಟಿಂಗ್ ಲೀಗ್ ಆಷ್ಟೇ ಅಲ್ಲ, ಭಾರೀ ಮೌಲ್ಯವನ್ನೂ ಹೊಂದಿದೆ ಅನ್ನೋದನ್ನೂ ಸಾಬೀತುಪಡಿಸಲಿದೆ.

ಆರ್​ಸಿಬಿ ನಿಗದಿ ಪಡಿಸುವ ಈ ಹೊಸ ಮೌಲ್ಯವೇ, ಇತರೆ ತಂಡಗಳಿಗೆ ಇನ್ಮೇಲೆ ಮೂಲ ಬೆಲೆಯಾಗಲಿದೆ. ಎಲ್ಲರಿಗೂ ಶುಭ ಹಾರೈಕೆಗಳು. ಸೂಕ್ತ ಹೂಡಿಕೆದಾರರಿಗೆ ಹರಾಜು ಹಾಕೋ ಮೂಲಕ ಸಿಟಿ ಬ್ಯಾಂಕ್ ಅದ್ಭುತ ಕಾರ್ಯ ನಿರ್ವಹಿಸುತ್ತೆ ಅನ್ನೋ ವಿಶ್ವಾಸವಿದೆ.
- ಲಲಿತ್ ಮೋದಿ, ಐಪಿಎಲ್ ಮಾಜಿ ಅಧ್ಯಕ್ಷ

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Royal Challengers Bengaluru ಆರ್​ಸಿಬಿ RCB Tilak Varma RCB Phil Salt RCB RCB CARES IPL
Advertisment
Advertisment
Advertisment