Advertisment

ಟ್ರೋಫಿ ಸ್ವೀಕರಿಸಲ್ಲ ಎಂದಿರಲಿಲ್ಲ, ಅವರು ಕಪ್ ಎತ್ಕೊಂಡು ಓಡಿದರು -ಸೂರ್ಯ ಮತ್ತೆ ಆಕ್ರೋಶ

ಏಷ್ಯಾ ಕಪ್​ ಗೆದ್ದ ಟೀಂ ಇಂಡಿಯಾ ತವರಿಗೆ ಮರಳಿದ್ದು, ಅದ್ದೂರಿ ಸ್ವಾಗತ ನೀಡಲಾಗಿದೆ. ಬೆನ್ನಲ್ಲೇ ಮಾಧ್ಯಮವೊಂದಕ್ಕೆ ಮಾತನಾಡಿದ ಕ್ಯಾಪ್ಟನ್ ಸೂರ್ಯ, ನಾವು ಡ್ರೆಸ್ಸಿಂಗ್ ರೂಮ್​ನ ಡೋರ್ ಕ್ಲೋಸ್​ ಮಾಡಿ ಒಳಗೆ ಕೂತಿರಲಿಲ್ಲ. ಪ್ರೆಸೆಂಟೇಶನ್ ಸಮಾರಂಭಕ್ಕಾಗಿ ಯಾರನ್ನೂ ಕಾಯುವಂತೆ ಮಾಡಲಿಲ್ಲ ಎಂದಿದ್ದಾರೆ.

author-image
Ganesh Kerekuli
Surya kumar yadav (3)
Advertisment

ಏಷ್ಯಾ ಕಪ್ ಟ್ರೋಫಿ (Asia cup trophy) ವಿವಾದಕ್ಕೆ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಬಿಗ್ ಟ್ವಿಸ್ಟ್ ನೀಡಿದ್ದಾರೆ. ನಾವು ಯಾವತ್ತೂ ಟ್ರೋಫಿಯನ್ನ ಸ್ವೀಕರಿಸಲ್ಲ ಎಂದು ಹೇಳಿಯೇ ಇಲ್ಲ. ಟ್ರೋಫಿಗಾಗಿ ಒಂದೂವರೆ ಗಂಟೆ ಮೈದಾನದಲ್ಲಿ ಕಾದು ಕೂತಿದ್ದೇವು. ಆದರೆ ಅವರು (ಏಷ್ಯನ್ ಕ್ರಿಕೆಟ್ ಕೌನ್ಸಿಲ್) ಟ್ರೋಫಿಯನ್ನ ತೆಗೆದುಕೊಂಡು ಹೋಗ್ತಿರೋದನ್ನ ನೋಡಿದೇವು ಎಂದಿದ್ದಾರೆ. 

Advertisment

ಯಾರೂ ನಮಗೆ ಸೂಚನೆ ಕೊಟ್ಟಿರಲಿಲ್ಲ

ಏಷ್ಯಾ ಕಪ್​ ಗೆದ್ದ ಟೀಂ ಇಂಡಿಯಾ ತವರಿಗೆ ಮರಳಿದ್ದು, ಅದ್ದೂರಿ ಸ್ವಾಗತ ನೀಡಲಾಗಿದೆ. ಬೆನ್ನಲ್ಲೇ ಮಾಧ್ಯಮವೊಂದಕ್ಕೆ ಮಾತನಾಡಿದ ಕ್ಯಾಪ್ಟನ್ ಸೂರ್ಯ, ನಾವು ಡ್ರೆಸ್ಸಿಂಗ್ ರೂಮ್​ನ ಡೋರ್ ಕ್ಲೋಸ್​ ಮಾಡಿ ಒಳಗೆ ಕೂತಿರಲಿಲ್ಲ. ಪ್ರೆಸೆಂಟೇಶನ್ ಸಮಾರಂಭಕ್ಕಾಗಿ ಯಾರನ್ನೂ ಕಾಯುವಂತೆ ಮಾಡಲಿಲ್ಲ. ಅವರು ಟ್ರೋಫಿಯೊಂದಿಗೆ ಓಡಿಹೋದರು. ನಾವು ಅದನ್ನು ನೋಡಿದೇವು. ಕೆಲವರು ನಮ್ಮ ವೀಡಿಯೊ ಮಾಡುತ್ತಿದ್ದರು. ನಾವು ಮೈದಾನದಲ್ಲಿ ನಿಂತಿದ್ದೆವು. ನಾವು ಡ್ರೆಸ್ಸಿಂಗ್ ರೂಮ್​​ನಲ್ಲಿ ಇರಲಿಲ್ಲ ಎಂದಿದ್ದಾರೆ. 

ಇದನ್ನೂ ಓದಿ: ಮತ್ತೆ ಭರ್ಜರಿ ಗಿಫ್ಟ್ ಕೊಟ್ಟ ಬಿಸಿಸಿಐ.. ಹ್ಯಾಟ್ರಿಕ್ ಟ್ರೋಫಿ ಹೊಡೆದ ತಂಡಕ್ಕೆ ಸಿಕ್ಕಿದ್ದು ಒಟ್ಟು 204 ಕೋಟಿ..!

bcci and team india

ಮೈದಾನದಲ್ಲಿ ನಾವು ಮೊಬೈಲ್ ಹಿಡಿದು ಒಂದೂವರೆ ಗಂಟೆಯಿಂದ ಕಾದೆವು. ಶಿವಂ ದುಬೆ, ಕುಲ್ದೀಪ್ ಯಾದವ್, ಅಭಿಷೇಕ್ ಶರ್ಮಾ ಪ್ರಶಸ್ತಿ ಸ್ವೀಕರಿಸಲು ವೇದಿಕೆ ಹತ್ತಿರ ಹೋಗಿದ್ದರು. ಪ್ರಶಸ್ತಿ ನೀಡುತ್ತಾರೆ ಎಂದು ಅಲ್ಲಿಗೆ ಹೋಗಿದ್ದರು. ಅದರೆ ಅವರು (ನಖ್ವಿ) ಪ್ರಶಸ್ತಿಯನ್ನು ತೆಗೆದುಕೊಂಡು ಹೋದರು ಎಂದು ಸೂರ್ಯ ಆರೋಪಿಸಿದ್ದಾರೆ. 

Advertisment

ಇದೇ ವೇಳೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ತೆಗೆದುಕೊಳ್ಳದಂತೆ ಸರ್ಕಾರ ಅಥವಾ ಬಿಸಿಸಿಐ ನಮ್ಮ ಮೇಲೆ ಒತ್ತಡ ಹೇರಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಇದು ಭಾರತೀಯ ಕ್ರಿಕೆಟ್ ತಂಡದ ನಿಲುವು ಎಂದಿದ್ದಾರೆ.

ಇದನ್ನೂ ಓದಿ: ‘ಪ್ರೀತಿಯ ಅಣ್ಣನಿಗೆ..’ ನಾರಾ ಲೋಕೇಶ್​ಗೆ ಸ್ಪೆಷಲ್ ಗಿಫ್ಟ್​ ಕೊಟ್ಟ ತಿಲಕ್ ವರ್ಮಾ.. ಏನದು?

Tema india (1)

‘ಮೊದಲನೆಯದಾಗಿ, ನಾನು ಸ್ಪಷ್ಟಪಡಿಸುತ್ತೇನೆ. ಯಾರಾದರೂ ಟ್ರೋಫಿ ನೀಡಿದರೆ ನಾವು ಅದನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಲು ನಮಗೆ ಯಾವುದೇ ಸೂಚನೆ ಬಂದಿರಲಿಲ್ಲ. ಸರ್ಕಾರ ಅಥವಾ ಬಿಸಿಸಿಐನಿಂದ ಯಾರೂ ಕೂಡ ಹೇಳಿರಲಿಲ್ಲ. ನಾವು ಮೈದಾನದಲ್ಲಿ ಆ ನಿರ್ಧಾರವನ್ನು ತೆಗೆದುಕೊಂಡೆವು. ಏಸಿಸಿ ಅಧಿಕಾರಿಗಳು ವೇದಿಕೆಯ ಮೇಲೆ ನಿಂತಿದ್ದರು. ನಾವು ಕೆಳಗೆ ನಿಂತಿದ್ದೆವು. ವೇದಿಕೆಯ ಮೇಲೆ ಮಾತನಾಡುತ್ತಿರುವುದನ್ನು ನೋಡಿದೆ. ಅವರ ಸಂಭಾಷಣೆಯ ವಿವರಗಳು ನನಗೆ ತಿಳಿದಿಲ್ಲ. ಗುಂಪಿನಲ್ಲಿದ್ದ ಕೆಲವರು ಬೊಬ್ಬೆ ಹೊಡೆಯಲು ಪ್ರಾರಂಭಿಸಿದರು. ತದನಂತರ ಅವರ ಪ್ರತಿನಿಧಿಯಾಗಿದ್ದ ಒಬ್ಬರು ಟ್ರೋಫಿಯನ್ನು ತೆಗೆದುಕೊಂಡು ಓಡಿಹೋಗುವುದನ್ನು ನೋಡಿದ್ದೇವು ಎಂದಿದ್ದಾರೆ. 

Advertisment

ಇದನ್ನೂ ಓದಿ:ASIA CUP ಟೂರ್ನಿಯಲ್ಲಿ ಒಂದೇ 1 ಪಂದ್ಯ ಆಡಿಲ್ಲ.. ಫೈನಲ್​​ನಲ್ಲಿ ರಿಂಕು ಸಿಂಗ್ ಚಾಂಪಿಯನ್!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

india win asia cup asia cup trophy india vs pakistan asia cup Asia Cup 2025 Asia cup final Surya kumar Yadav
Advertisment
Advertisment
Advertisment