/newsfirstlive-kannada/media/media_files/2025/09/30/bcci-and-team-india-2025-09-30-08-15-54.jpg)
ಏಷ್ಯಾ ಕಪ್ ಫೈನಲ್‌ನಲ್ಲಿ (Asia Cup Final) ಪಾಕಿಸ್ತಾನ ವಿರುದ್ಧ ಜಯಗಳಿಸಿದ ಟೀಮ್ ಇಂಡಿಯಾಗೆ ಬಿಸಿಸಿಐ ಭರ್ಜರಿ ಬಹುಮಾನ ಘೋಷಣೆ ಮಾಡಿದೆ. 15 ಮಂದಿ ಆಟಗಾರರು, ಇತರೆ ಸಿಬ್ಬಂದಿ ಒಟ್ಟು 21 ಕೋಟಿ ರೂಪಾಯಿ ಹಣವನ್ನು ಪಡೆಯಲಿದ್ದಾರೆ.
ಕಳೆದ 15 ತಿಂಗಳುಗಳಲ್ಲಿ ಟೀಮ್ ಇಂಡಿಯಾ ಮೂರು ಪ್ರಮುಖ ಪಂದ್ಯಾವಳಿಗಳನ್ನು ಗೆದ್ದಿದೆ. 2024ರ ಟಿ 20 ವಿಶ್ವಕಪ್‌ನಿಂದ ಪ್ರಾರಂಭಿಸಿ, 2025ರ ಚಾಂಪಿಯನ್ಸ್ ಟ್ರೋಫಿ ಮತ್ತು 2025ರ ಏಷ್ಯಾ ಕಪ್‌ಗೆ ಗೆಲ್ಲುತ್ತ ಬಂದಿದೆ. ಇದೇ ಕಾರಣಕ್ಕೆ ಬಿಸಿಸಿಐ ತನ್ನ ಆಟಗಾರರಿಗೆ ಬಂಪರ್ ಗಿಫ್ಟ್ ನೀಡುತ್ತಿದೆ.
ಈ ಬಾರಿಯ ಏಷ್ಯಾ ಕಪ್ ಗೆಲುವು ಟೀಮ್ ಇಂಡಿಯಾಗೆ ತುಂಬಾನೇ ಮಹತ್ವದ್ದಾಗಿತ್ತು. ಫೈನಲ್‌ನಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಎರಡೂ ದೇಶಗಳ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಪರಿಣಾಮವಾಗಿ ಏಷ್ಯಾ ಕಪ್ ಎಲ್ಲರ ಗಮನ ಸೆಳೆಯಿತು. ಈ ಅವಧಿಯಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಮೂರು ಬಾರಿ ಸೋಲಿಸಿತು. ಈ ಗಮನಾರ್ಹ ಗೆಲುವು ಹಿನ್ನೆಲೆಯಲ್ಲಿ ಬಿಸಿಸಿಐ 21 ಕೋಟಿ ರೂಪಾಯಿ ಬಹುಮಾನ ಹಣ ಘೋಷಣೆ ಮಾಡಿದೆ.
ಇದನ್ನೂ ಓದಿ: ASIA CUP ಟೂರ್ನಿಯಲ್ಲಿ ಒಂದೇ 1 ಪಂದ್ಯ ಆಡಿಲ್ಲ.. ಫೈನಲ್​​ನಲ್ಲಿ ರಿಂಕು ಸಿಂಗ್ ಚಾಂಪಿಯನ್!
ಮಾರ್ಚ್ 9, 2025 ರಂದು ನ್ಯೂಜಿಲೆಂಡ್ ಸೋಲಿಸುವ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಆಗ ಬಿಸಿಸಿಐ ಆಟಗಾರರು ಮತ್ತು ತರಬೇತುದಾರರ ಸಿಬ್ಬಂದಿ ಸೇರಿದಂತೆ ತಂಡದ ಎಲ್ಲಾ ಸದಸ್ಯರಿಗೆ 58 ಕೋಟಿ ರೂ ಬಹುಮಾನ ಘೋಷಿಸಿತು.
ಟಿ20 ವಿಶ್ವಕಪ್‌ಗೆ 125 ಕೋಟಿ ರೂಪಾಯಿ
ಜೂನ್ 2024 ರಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿತು. ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿ 7 ರನ್‌ಗಳಿಂದ ಸೋಲಿಸಿ, 17 ವರ್ಷಗಳ ಕಾಯುವಿಕೆಯ ನಂತರ ಟ್ರೋಫಿಗೆ ಮುತ್ತಿಟ್ಟಿತ್ತು. ಆ ಸಮಯದಲ್ಲಿ ಬಿಸಿಸಿಐ ಟೀಮ್ ಇಂಡಿಯಾಗೆ 125 ಕೋಟಿ ರೂ. ಬಹುಮಾನದ ಹಣವನ್ನು ಘೋಷಿಸಿತು. ಇದು ಇಲ್ಲಿಯವರೆಗಿನ ಅತ್ಯಧಿಕ ಬಹುಮಾನದ ಮೊತ್ತವಾಗಿದೆ. ಈ ಮೂರು ಪಂದ್ಯಾವಳಿಗಳನ್ನು ಗೆದ್ದಿದ್ದಕ್ಕಾಗಿ ಬಿಸಿಸಿಐ ಟೀಮ್ ಇಂಡಿಯಾಕ್ಕೆ ಒಟ್ಟು 204 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ