/newsfirstlive-kannada/media/media_files/2025/10/01/gill_roston_chase-2025-10-01-14-55-08.jpg)
ವೆಸ್ಟ್​ ಇಂಡೀಸ್​ ಹಾಗೂ ಟೀಮ್ ಇಂಡಿಯಾ ನಡುವಿನ ಎರಡು ಟೆಸ್ಟ್​ ಪಂದ್ಯಗಳ ಸರಣಿ ಇಂದಿನಿಂದ ಆರಂಭವಾಗಲಿದೆ. ಈ ಹಿಂದೆ ಟೆಸ್ಟ್​ ಸರಣಿಗಳಲ್ಲಿ ಭಾರೀ ಮುಖಭಂಗ ಅನುಭವಿಸಿರುವ ಭಾರತ ತಂಡ ಗೆಲುವಿನ ಟ್ರ್ಯಾಕ್​ಗೆ ಮರಳುತ್ತಾ ಎಂದು ಕಾದು ನೋಡಬೇಕಿದೆ. ಶುಭ್​ಮನ್​ ಗಿಲ್​ ನೇತೃತ್ವದ ಟೀಮ್ ಇಂಡಿಯಾ ತವರಿನಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.
ವೈಟ್​ಬಾಲ್​ ಚಾಲೆಂಜ್​ನ ಗೆದ್ದು ಬೀಗಿರುವ ಯಂಗ್​ ಇಂಡಿಯಾ ಮುಂದೆ ರೆಡ್​​ ಬಾಲ್​ ಸವಾಲು ಇದೆ. ಇಂಡೋ-ವೆಸ್ಟ್​ ಇಂಡೀಸ್​​ ಟೆಸ್ಟ್​ ಸರಣಿ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಮೊದಲ ಪಂದ್ಯಕ್ಕೆ ಗುಜರಾತ್​ನ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಸಿದ್ಧವಾಗಿದೆ. ಏಷ್ಯಾಕಪ್​ನಲ್ಲಿ ಘರ್ಜಿಸಿದಂತೆ ಟೆಸ್ಟ್​ ಸರಣಿಯಲ್ಲೂ ವಿಜಯ ಪತಾಕೆ ಹಾರಿಸಬೇಕಿದೆ.
ತವರಿನಲ್ಲಿ ಆಡಿದ ಕೊನೆಯ ಸರಣಿಯಲ್ಲಿ ಭಾರತ ಹೀನಾಯ ಸೋಲು ಕಂಡಿತ್ತು. ನ್ಯೂಜಿಲೆಂಡ್​ ಎದುರು 3-0 ಅಂತರದಲ್ಲಿ ಸೋತು ವೈಟ್​ವಾಷ್​ ಮುಖಭಂಗ ಅನುಭವಿಸಿತ್ತು. ಈ ಅಪಮಾನದ ಬಳಿಕ ಟೀಮ್​ ಇಂಡಿಯಾದಲ್ಲಿ ಹಲವು ಬದಲಾವಣೆಯಾಗಿವೆ. ಯುವ ಆಟಗಾರ ಶುಭ್​ಮನ್​ ಗಿಲ್​ ನಾಯಕನ ಪಟ್ಟವನ್ನ ಏರಿದ್ದಾರೆ. ನಾಯಕನಾಗಿ ಇಂಗ್ಲೆಂಡ್​ ನೆಲದಲ್ಲಿ ಮೊದಲ ಸರಣಿಯಲ್ಲೇ ಸಕ್ಸಸ್​ ಕಂಡಿರೋ ಗಿಲ್​, ತವರಿನಲ್ಲೂ ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ತಿಮ್ಮಪ್ಪನ ಹುಂಡಿಯಲ್ಲಿ 197 ರಾಷ್ಟ್ರಗಳ ಪೈಕಿ 157 ದೇಶಗಳ ಕರೆನ್ಸಿ.. ಅಬ್ಬಾಬ್ಬ ಎಷ್ಟು ಕೋಟಿ ಆದಾಯ ಗೊತ್ತಾ?
ಭಾರತ ಹಾಗೂ ವೆಸ್ಟ್​ ಇಂಡೀಸ್​ ನಡುವಿನ ಪಂದ್ಯ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇಂದು ಬೆಳಗ್ಗೆ 9:30 ರಿಂದ ಮೊದಲ ಟೆಸ್ಟ್ ಮ್ಯಾಚ್ ಆರಂಭವಾಗಲಿದೆ. ಅಕ್ಟೋಬರ್​ 6ರವರೆಗೆ ಈ ಟೆಸ್ಟ್ ಮ್ಯಾಚ್ ಇರುತ್ತದೆ. ಬೇಗನೇ ಕೂಡ ಮುಗಿಯಬಹುದು. ಇದು ಎರಡು ತಂಡಗಳ ಮೇಲೆ ನಿರ್ಧರಿತವಾಗಿರುತ್ತದೆ.
ಟೀಮ್ ಇಂಡಿಯಾದ ಸಂಭಾವ್ಯ ಆಟಗಾರರ ಪಟ್ಟಿ
ಶುಭಮನ್ ಗಿಲ್ (ನಾಯಕ), ಧ್ರುವ್ ಜುರೆಲ್ (ವಿಕೆಟ್​ ಕೀಪರ್), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಎನ್ ಜಗದೀಸನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ದೇವದತ್ ಪಡಿಕಲ್, ನಿತೀಶ್​ ಕುಮಾರ್ ರೆಡ್ಡಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ