/newsfirstlive-kannada/media/media_files/2025/10/04/jadeja-gill-2025-10-04-13-52-01.jpg)
ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಅಹ್ಮದಬಾದ್​ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್, 162 ರನ್​ಗೆ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ರಾಹುಲ್, ಜುರೇಲ್, ಜಡೇಜಾರ ಶತಕದ ನೆರವಿನಿಂದ 448 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು. ಆ ಮೂಲಕ 286 ರನ್​ಗಳ ಹಿನ್ನಡೆಯೊಂದಿಗೆ ದ್ವೀತಿಯ ಇನ್ನಿಂಗ್ಸ್​ ಆರಂಭಿಸಿದ ವೆಸ್ಟ್ ಇಂಡೀಸ್ 146 ರನ್​​ಗಳಿಗೆ ಸರ್ವಪತನವಾಯ್ತು. ಇದರೊಂದಿಗೆ ಟೀಮ್ ಇಂಡಿಯಾಗೆ ಇನ್ನಿಂಗ್ಸ್ ಹಾಗೂ 140 ರನ್​ಗಳ ಗೆಲುವು ದಾಖಲಿಸಿತು.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಹಿಂತಿರುಗುತ್ತಾರಾ ರೋಹಿತ್, ವಿರಾಟ್ ಕೋಹ್ಲಿ: ಇಂದು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ
ಮೂರನೇ ದಿನವಾದ ಇವತ್ತು ವಿಂಡೀಸ್​ ಬ್ಯಾಟರ್​ಗಳಿಗೆ ಟೀಂ ಇಂಡಿಯಾ ಬೌಲರ್​​ಗಳು ನಡುಕ ಹುಟ್ಟಿಸಿದರು. ರವೀಂದ್ರ ಜಡೇಜಾ ಹಾಗೂ ಸಿರಾಜ್ ಮಾರಕ ಸ್ಪೆಲ್​​ಗೆ ವಿಂಡೀಸ್ ಉಡೀಸ್ ಆಗಿದೆ. ರವೀಂದ್ರ ಜಡೇಜಾ ಎರಡನೇ ಇನ್ನಿಂಗ್ಸ್​ನಲ್ಲಿ ನಾಲ್ಕು ವಿಕೆಟ್ ಪಡೆದರು. ಇನ್ನು, ಮೊಹ್ಮದ್ ಸಿರಾಜ್ ಮೂರು ವಿಕೆಟ್ ಪಡೆದ್ರೆ, ಕುಲ್ದೀಪ್ ಯಾದವ್ 2 ವಿಕೆಟ್ ಕಿತ್ತರು. ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಕಿತ್ತು ತಂಡದ ಗೆಲುವಿಗೆ ಸಹಕಾರಿಯಾದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ