Advertisment

IND vs PAK; ಪಂದ್ಯದಲ್ಲಿ ದಿಟ್ಟತನ ಮೆರೆದ ಭಾರತದ ಕ್ಯಾಪ್ಟನ್.. ಪಾಕ್​ ನಾಯಕಿ ಜೊತೆ No Handshake​..!​

ಭಾರತದ ನಾಯಕಿ ಹಾಗೂ ಪಾಕಿಸ್ತಾನದ ನಾಯಕಿ ಇಬ್ಬರು ಬೇರೆ ಬೇರೆಯಾಗಿ ಮೈದಾನಕ್ಕೆ ಆಗಮಿಸಿದರು. ಒಬ್ಬರಿಗೊಬ್ಬರು ಮುಖ ಕೂಡ ನೋಡಲಿಲ್ಲ. ಟಾಸ್ ಗೆದ್ದ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಜೊತೆ ಭಾರತ ತಂಡದ ನಾಯಕಿ ಚಹ್ಯಾಂಡ್​ಶೇಕ್ ಮಾಡಲಿಲ್ಲ

author-image
Bhimappa
INDVSPAK
Advertisment

2025ರ ಐಸಿಸಿ ವುಮೆನ್ಸ್​ ವರ್ಲ್ಡ್​​​ಕಪ್​ ಟೂರ್ನಿಯಲ್ಲಿ ಪಾಕಿಸ್ತಾನದ ಮಹಿಳಾ ತಂಡದ ನಾಯಕಿ ಫಾತಿಮಾ ಸನಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಹರ್ಮನ್​ಪ್ರೀತ್ ನೇತೃತ್ವದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ವೇಳೆ ನೋ ಹ್ಯಾಂಡ್​ಶೇಕ್​  ಮುಂದುವರೆದಿದ್ದು ಇದರಿಂದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾದಂತೆ ಆಗಿದೆ.

Advertisment

ಕೊಲಂಬೊದ ಆರ್​​.ಪ್ರೇಮಾದಾಸ್ ಸ್ಟೇಡಿಯಂನಲ್ಲಿ ಗ್ರೂಪ್​ ಸ್ಟೇಜ್  ಪಂದ್ಯ ನಡೆಯುತ್ತಿದ್ದು ಟಾಸ್​ ಮಾಡುವಾಗ ಭಾರತದ ನಾಯಕಿ ಹಾಗೂ ಪಾಕಿಸ್ತಾನದ ನಾಯಕಿ ಇಬ್ಬರು ಬೇರೆ ಬೇರೆಯಾಗಿ ಮೈದಾನಕ್ಕೆ ಆಗಮಿಸಿದರು. ಒಬ್ಬರಿಗೊಬ್ಬರು ಮುಖ ಕೂಡ ನೋಡಲಿಲ್ಲ. ಟಾಸ್ ಗೆದ್ದ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಜೊತೆ ಭಾರತ ತಂಡದ ನಾಯಕಿ ಚಹ್ಯಾಂಡ್​ಶೇಕ್ ಮಾಡಲಿಲ್ಲ ಎಂದು ಹೇಳಲಾಗಿದೆ.

ಬ್ರಾಡ್​ಕಾಸ್ಟರ್​ ಮೆಲ್ ಜೋನ್ಸ್​ ಜೊತೆ ಇಬ್ಬರು ಮಾತನಾಡಿದ ಬಳಿಕ ತಮ್ಮ ತಮ್ಮ ತಂಡ ಸೇರಿಕೊಂಡರು. ಭಾರತ- ಪಾಕಿಸ್ತಾನ ನಡುವಿನ ಪಂದ್ಯ ಮಹತ್ವದ ಪಡೆದುಕೊಂಡಿದ್ದರೂ ಎಲ್ಲರನ್ನು ಸೆಳೆದಿರುವುದು ಮಾತ್ರ ನಾಯಕಿಯರ ನೋ ಹ್ಯಾಂಡ್​ಶೇಕ್​. ಸದ್ಯ ಪಂದ್ಯ ಆರಂಭವಾಗಿದ್ದು ಹರ್ಮನ್​​ಪ್ರೀತ್​ ಕೌರ್​ ಪಡೆ ಬ್ಯಾಟಿಂಗ್ ಮಾಡುತ್ತಿದೆ.  

ಇದನ್ನೂ ಓದಿ: ಪ್ರೀತಿಯ ತಂಗಿಯ ಮದುವೆಗೆ ಹೋಗಲೇ ಇಲ್ಲ ಯಂಗ್​ ಕ್ರಿಕೆಟರ್​ ಅಭಿಷೇಕ್ ಶರ್ಮಾ.. ಕಾರಣ?

Advertisment

INDVSPAK_1

ಇತ್ತೀಚೆಗೆ ದುಬೈನಲ್ಲಿ ನಡೆದ ಪುರುಷರ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಅವರು ಪಾಕ್​ ತಂಡದ ನಾಯಕ ಸಲ್ಮಾನ್​ ಜೊತೆ ಹ್ಯಾಂಡ್​ಶೇಕ್ ಮಾಡಿರಲಿಲ್ಲ. ಇದು ದೊಡ್ಡ ವಿವಾದವಾಗಿತ್ತು. ಇದು ಸದ್ಯ ಮಹಿಳಾ ಕ್ರಿಕೆಟ್​​ನಲ್ಲೂ ಮುಂದುವರೆದಿದ್ದು ಟೀಮ್ ಇಂಡಿಯಾದ ನಾಯಕಿ ಹರ್ಮನ್​ಪ್ರೀತ್ ಕೌರ್​​ ತಮ್ಮ ನಿಲುವು ತೆಳೆದು ದಿಟ್ಟತನ ಮೆರೆದಿದ್ದಾರೆ. 

ಜಮ್ಮುಕಾಶ್ಮೀರದ ಪಹಲ್ಗಾಮ್​​ಗೆ ಪಾಕಿಸ್ತಾನದ ಉಗ್ರರು ನುಸುಳಿ ಗುಂಡುಗಳನ್ನು ಹಾರಿಸಿ 26 ಜನರ ಜೀವ ತೆಗೆದಿದ್ದರು. ಈ ವೇಳೆ ಧರ್ಮ ಕೇಳಿ ಹತ್ಯೆ ಮಾಡಿರುವುದು ಎಲ್ಲರನ್ನೂ ಕೆರಳಿಸಿತ್ತು. ಈ ಸಂಬಂಧ ಇಡೀ ವಿಶ್ವವೇ ಪಾಕಿಸ್ತಾನದ ಉಗ್ರತ್ವದ ಪ್ರಚೋದನೆಗೆ ಭಾರೀ ವಿರೋಧ ವ್ಯಕ್ತಪಡಿಸಿತ್ತು.    

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
World Cup Women's World Cup Women’s ODI World Cup 2025 Ind vs Pak
Advertisment
Advertisment
Advertisment