Advertisment

ಜೋಡಿ ಹಕ್ಕಿಗಳ ‘ಪ್ರೇಮ ನಿವೇದನೆ’ಗೆ ಸಾಕ್ಷಿಯಾದ ಟಿ-20 ವರ್ಲ್ಡ್​ಕಪ್ ಫೈನಲ್..! VIDEO

ಭಾರತ ತಂಡ ಟಿ20 ವಿಶ್ವಕಪ್ 2026ರ ಫೈನಲ್‌ನಲ್ಲಿ ಗೆದ್ದು ಬೀಗುತ್ತಿದೆ. ಈ ಮಧ್ಯೆ ಕ್ರಿಡಾಂಗಣದಲ್ಲಿ ಸದ್ದಿಲ್ಲದೆ ಎರಡು ಹೃದಯಗಳು ಪ್ರೀತಿ ಹಂಚಿಕೊಂಡಿವೆ. ಇಂತದ್ದೊಂದು ಅಪರೂಪದ ದೃಶ್ಶಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಿದೆ.

author-image
Ganesh Kerekuli
stadium love prapose
Advertisment

2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ, ಮೂರನೇ ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಗೆಲುವು ಸಾಧಿಸಿ ಬ್ಯಾಕ್-ಟು-ಬ್ಯಾಕ್ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸಿದೆ. ವಿಶ್ವಕಪ್ ಫೈನಲ್‌ನಂತಹ ಹೈ-ವೋಲ್ಟೇಜ್ ಪಂದ್ಯದಲ್ಲಿ ಅಭಿಮಾನಿಯೊಬ್ಬ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿ ಡಬಲ್ ಸೆಲೆಬ್ರೇಷನ್ ಮಾಡಿದ್ದಾನೆ. 

Advertisment

ಕ್ರಿಡಾಂಗಣದಲ್ಲಿ ಎಲ್ಲೆಲ್ಲೂ ಸಂಭ್ರಮ ಸಡಗರ ಆವರಿಸಿದ್ದು, ಅಭಿಮಾನಿಗಳ ಸಂತೋಷಕ್ಕಂತೂ ಪಾರವೇ ಇಲ್ಲದಂತಾಗಿದೆ. ಲಕ್ಷಾಂತರ ಅಭಿಮಾನಿಗಳ ಮಧ್ಯೆ ಬಾರತ ತಂಡದ ಆಟಗಾರರು ಗೆಲುವಿನ ನಗೆ ಬೀರಿದ್ದಾರೆ. ಈ ಸಮಯದಲ್ಲಿ ಒಬ್ಬ ಅಭಿಮಾನಿ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಇಂತಹ ಘಟನೆಗಳೂ ಈ ಹಿಂದೆ ಸಾಕಷ್ಟು ನಡೆದಿವೆ, ಅದೇರೀತಿ ಈ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನಡೆದಿದ್ದು ಆ ಯುವಕನಿಗೆ ಡಬಲ್​ ಧಮಾಕಾ ಆಗಿದೆ. ವಿಶ್ವಕಪ್​ ಗೆದ್ದಿದ್ದಕ್ಕೆ ಇಡೀ ದೇಶವೇ ಸಂಭ್ರಮಿಸುತ್ತಿರುವಾಗ, ಅತ್ತ ಗೆಳತಿಯೂ ಪ್ರೇಮಕ್ಕೆ 'ಗ್ರೀನ್ ಸಿಗ್ನಲ್' ನೀಡಿದ್ದು ಆತನ ಸಂತೋಷವನ್ನು ಇನ್ನಷ್ಟು ಜಾಸ್ತಿ ಮಾಡಿದೆ.

ಇದನ್ನೂ ಓದಿ: ಒಟ್ಟು 101 ಕೋಟಿ ರೂಪಾಯಿ ಬಹುಮಾನ.. ಚಾಂಪಿಯನ್ ಭಾರತಕ್ಕೆ ಸಿಕ್ಕಿದ್ದು ಎಷ್ಟು ಕೋಟಿ..?

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಈ ಅಪರೂಪದ ಕ್ಷಣದ ವೀಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ನೆಟ್ಟಿಗರು ಈ ಜೋಡಿಗೆ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದು, ತಮಾಷೆಯಾಗಿ ಹಾಗೂ ಪ್ರೀತಿಯಿಂದ ಕಾಮೆಂಟ್​ ಮಾಡುತ್ತಿದ್ದಾರೆ.

Advertisment

ಒಟ್ಟಿನಲ್ಲಿ, ಕ್ರಿಕೆಟ್ ಅಂದರೆ ಕೇವಲ ಆಟವಲ್ಲ, ಅದೊಂದು ಭಾವನೆ ಅನ್ನೊದು ಮತ್ತೊಮ್ಮೆ ಸಾಬೀತಾಗಿದೆ. ಭಾರತದ ಐತಿಹಾಸಿಕ ಗೆಲುವಿನ ಜೊತೆಗೆ ಈ ಜೋಡಿಯ ಹೊಸ ಪಯಣವೂ ನೆನಪಿನ ಪುಸ್ತಕದಲ್ಲಿ ಅಚ್ಚಳಿಯದ ಪುಟ ಸೇರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

love prapose Indian cricket team news Cricket news in Kannada Love story cricket players LOVE MARRIAGE Love cricketers love
Advertisment
Advertisment
Advertisment