Advertisment

ಒಟ್ಟು 101 ಕೋಟಿ ರೂಪಾಯಿ ಬಹುಮಾನ.. ಚಾಂಪಿಯನ್ ಭಾರತಕ್ಕೆ ಸಿಕ್ಕಿದ್ದು ಎಷ್ಟು ಕೋಟಿ..?

ಟಿ-20 ವಿಶ್ವಕಪ್​​ ಪಂದ್ಯಾವಳಿ ನಿನ್ನೆಗೆ ಮುಕ್ತಾಯಗೊಂಡಿದೆ. ಗುಜರಾತ್​ನ ಅಹ್ಮದಾಬಾದ್​ನಲ್ಲಿರುವ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಮಣಿಸಿ ಚಾಂಪಿಯನ್ ಪಟ್ಟವನ್ನ ಡಿಪೆಂಡ್ ಮಾಡಿಕೊಂಡಿದೆ.

author-image
Ganesh Kerekuli
t20 world cup (1)
Advertisment

ಟಿ-20 ವಿಶ್ವಕಪ್​​ ಪಂದ್ಯಾವಳಿ ನಿನ್ನೆಗೆ ಮುಕ್ತಾಯಗೊಂಡಿದೆ. ಗುಜರಾತ್​ನ ಅಹ್ಮದಾಬಾದ್​ನಲ್ಲಿರುವ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಮಣಿಸಿ ಚಾಂಪಿಯನ್ ಪಟ್ಟವನ್ನ ಡಿಪೆಂಡ್ ಮಾಡಿಕೊಂಡಿದೆ. ಆ ಮೂಲಕ ಮತ್ತೊಮ್ಮೆ ಟ್ರೋಫಿಗೆ ಮುತ್ತಿಟ್ಟು ಕೋಟಿ ಕೋಟಿ ಹಣವನ್ನು ಬಹುಮಾನ ಪಡೆದುಕೊಂಡಿದೆ. 

Advertisment

ಸಿಕ್ಕ ಹಣವೆಷ್ಟು? 

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 2026ರ ಟಿ20 ವಿಶ್ವಕಪ್‌ಗಾಗಿ ಒಟ್ಟು 11 ಮಿಲಿಯನ್ ಅಮೆರಿಕನ್ ಡಾಲರ್ ಪ್ರೈಜ್ ಪೂಲ್ (Prize pool) ಅನ್ನು ನಿಗದಿಪಡಿಸಿದೆ. ಇದು ಭಾರತೀಯ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 101 ಕೋಟಿ ರೂ.ಗಳಿಗೂ ಅಧಿಕ. ಇದೇ 101 ಕೋಟಿ ರೂ. ಗಳಿಂದ ವಿಜೇತ, ರನ್ನರ್-ಅಪ್ ಮತ್ತು ಇತರ ತಂಡಗಳಿಗೆ ಹಣ ಹಂಚಿಕೆಯಾಗಲಿದೆ.

  • ವಿನ್ನರ್ ಭಾರತ - ಸುಮಾರು 21.5 ಕೋಟಿ ರೂಪಾಯಿ
  • ರನ್ನರ್​ ಅಪ್ ನ್ಯೂಜಿಲೆಂಡ್- 10.75 ಕೋಟಿ ರೂಪಾಯಿ
  • ಸೆಮಿಫೈನಲ್​​ನಲ್ಲಿ ಸೋತ ಎರಡೂ ತಂಡಗಳಿಗೆ ತಲಾ ಸುಮಾರು 6.20 ಕೋಟಿ ರೂಪಾಯಿ (ಇಂಗ್ಲೆಂಡ್, ದಕ್ಷಿಣ ಆಫ್ರಿಕಾ)

ಕೇವಲ ಫೈನಲ್ ತಲುಪಿದ ತಂಡಗಳಿಗಷ್ಟೇ ಅಲ್ಲ, ಟೂರ್ನಿಯಲ್ಲಿ ಭಾಗವಹಿಸಿದ ಇತರ ತಂಡಗಳಿಗೂ ಐಸಿಸಿ ಭರ್ಜರಿ ಪ್ರೈಜ್ ಮನಿ ನೀಡಲಿದೆ.  ಸೆಮಿಫೈನಲ್ ವರೆಗೂ ಬಂದು ಮುಗ್ಗರಿಸಿದ ಪ್ರತಿಯೊಂದು ತಂಡಕ್ಕೆ ಅಂದಾಜು 6.20 ಕೋಟಿ ರೂ. ಸಿಗಲಿದೆ. ಸೂಪರ್-8 ಪ್ರವೇಶಿಸಿ ಸೆಮಿಫೈನಲ್ ತಲುಪಲು ವಿಫಲವಾದ ಪ್ರತಿ ತಂಡಕ್ಕೆ ಅಂದಾಜು 2.48 ಕೋಟಿ ರೂ. ನೀಡಲಾಗುತ್ತದೆ.

Advertisment

ಗ್ರೂಪ್ ಹಂತದ ತಂಡಗಳಿಗೆ: ಟೂರ್ನಿಯ ಗ್ರೂಪ್ ಹಂತದಲ್ಲೇ ಎಲಿಮಿನೇಟ್ ಆಗಿ ಹೊರಬಿದ್ದ ಪ್ರತಿಯೊಂದು ತಂಡಕ್ಕೂ ಬಹುಮಾನದ ರೂಪದಲ್ಲಿ ಅಂದಾಜು 1.24 ಕೋಟಿ ರೂ. ಸಿಗಲಿದೆ. ಮಾತ್ರವಲ್ಲ ವಿಶ್ವಕಪ್​ನಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಐಸಿಸಿ ಸಹಾಯಧನ ರೂಪದಲ್ಲಿ 1.03 ಕೋಟಿ ನೀಡಲಿದೆ. ಜೊತೆಗೆ ಗೆದ್ದ ತಂಡಗಳಿಗೆ ಪ್ರತಿ ಮ್ಯಾಚ್​ನಂತೆ 28.64 ಲಕ್ಷ ರೂಪಾಯಿ ನೀಡಲಿದೆ. 

ವಿಶೇಷವೆಂದರೆ, 2024ರ ಟಿ20 ವಿಶ್ವಕಪ್‌ಗೆ ಹೋಲಿಸಿದರೆ ಈ ಬಾರಿಯ (2026) ಬಹುಮಾನದ ಮೊತ್ತದಲ್ಲಿ ಐಸಿಸಿ ಶೇಕಡಾ 20ರಷ್ಟು ಭಾರೀ ಏರಿಕೆ ಮಾಡಿದೆ. ಒಟ್ಟಿನಲ್ಲಿ ವಿಶ್ವಕಪ್ ಕಿರೀಟ ಯಾರ ಮುಡಿಗೇರಲಿದೆ ಹಾಗೂ ಈ ಭಾರಿ ಮೊತ್ತವನ್ನು ಯಾರು ತಮ್ಮದಾಗಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಅಹಮದಾಬಾದ್ ಮೈದಾನ ಸಾಕ್ಷಿಯಾಗಲಿದೆ.

ಇದನ್ನೂ ಓದಿ:2 ದಿನದ ಹಿಂದಷ್ಟೇ ಭೀಕರ ಅಪಘಾತ.. ಕಿಶನ್ ಅರ್ಧಶತಕ ಬಾರಿಸಿ ಆಕಾಶದತ್ತ ಬ್ಯಾಟ್ ತೋರಿಸಿ ನಮನ ಸಲ್ಲಿಸಿದ್ರ ಹಿಂದಿದೆ ಕಣ್ಣೀರ ಕತೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 WORLD CUP 2026 T20 world cup
Advertisment
Advertisment
Advertisment