/newsfirstlive-kannada/media/media_files/2025/12/17/satvik-deswal-2025-12-17-09-49-03.jpg)
16.4 ಕೋಟಿ. ನಿನ್ನೆಯ ಮಿನಿ ಹರಾಜಿಗೂ ಮುನ್ನ ಆರ್​ಸಿಬಿ ಪರ್ಸ್​​ನಲ್ಲಿದ್ದ ಮೊತ್ತ. ಎಲ್ಲಾ ಫ್ರಾಂಚೈಸಿಗಳು ದೊಡ್ಡ ದೊಡ್ಡ ಆಟಗಾರರ ಹಿಂದೆ ಬಿದ್ರೆ, ಪಕ್ಕಾ ಲೆಕ್ಕಾಚಾರವನ್ನ ಹಾಕಿ ಆರ್​​​ಸಿಬಿ ಆಟಗಾರರ ಬೇಟೆಯಾಡಿತು. ಸರ್​​ಪ್ರೈಸ್​ ಪಿಕ್​ ಮಾಡಿ ಅಭಿಮಾನಿಗಳನ್ನೂ ಅಚ್ಚರಿಗೆ ದೂಡಿತು.
18 ವರ್ಷದ ಸತ್ವಿಕ್​ RCBಯ ಸರ್​​ಪ್ರೈಸ್​ ಪಿಕ್
ಮಿನಿ ಆಕ್ಷನ್​ನಲ್ಲಿ ಆರ್​​ಸಿಬಿ ಸರ್​​ಪ್ರೈಸ್​ ಪಿಕ್​ ಈ ಸಾತ್ವಿಕ್​ ದೆಸ್ವಾಲ್​. ಪುದುಚೇರಿ ತಂಡದ 18 ವರ್ಷದ ಆಟಗಾರನನ್ನ ಆರ್​​ಸಿಬಿ ಬೇಸ್​​ಪ್ರೈಸ್​ 30 ಲಕ್ಷಕ್ಕೆ ಬೇಟೆಯಾಡಿತು. ಕಳೆದ ಸೀಸನ್​ನಲ್ಲಿ ಸಾತ್ವಿಕ್ ಆರ್​​ಸಿಬಿಯ ನೆಟ್​ ಬೌಲರ್​ ಆಗಿದ್ರು. ಈ ಬಾರಿಯ ಪುದುಚೇರಿ ಪ್ರೀಮಿಯರ್​ ಲೀಗ್​ನಲ್ಲೂ ಇಂಪ್ರೆಸ್ಸಿವ್​ ಪ್ರದರ್ಶನ ನೀಡಿದ್ರು. ಇದೆಲ್ಲದರ ಆಧಾರದಲ್ಲೇ ಸಾತ್ವಿಕ್​​ನ ಆರ್​ಸಿಬಿ ಬಿಡ್​ ಮಾಡಿದೆ.
ಸಾತ್ವಿಕ್ ದೇಸಾಲ್ ಅವರು, ಸ್ಪಿನ್ ಬೌಲರ್ ಹಾಗೂ ಬ್ಯಾಟಿಂಗ್ ಕೂಡ ಮಾಡಬಲ್ಲರು. ಕಳೆದ ಕೆಲವು ವರ್ಷಗಳಿಂದ ಆರ್​ಸಿಬಿ ಕ್ಯಾಂಪ್​ನಲ್ಲಿ ಕೆಲಸ ಮಾಡಿದ್ದಾರೆ.
ಇಂಗ್ಲೆಂಡ್​ನ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್ ಜೋರ್ಡನ್​ ಕಾಕ್ಸ್​ನ ಆರ್​​ಸಿಬಿ ಬೇಸ್​ ಪ್ರೈಸ್​ಗೆ ಬಲೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯ್ತು. ಪಿಎಸ್​ಎಲ್​, ಬಿಬಿಎಲ್​, ಎಸ್​ಎಟಿ20, ಎಲ್​ಪಿಎಲ್​, ದಿ ಹಂಡ್ರೆಡ್​ ಲೀಗ್​ಗಳಲ್ಲಿ ಪ್ರಾಮಿಸಿಂಗ್​ ಪರ್ಫಾಮೆನ್ಸ್​ ನೀಡಿರುವ ಜೋರ್ಡಾನ್​ ಕಾಕ್ಸ್​ನ 75 ಲಕ್ಷಕ್ಕೆ ಆರ್​​ಸಿಬಿ ಡೀಲ್ ಮಾಡಿತು.​
ಇದನ್ನೂ ಓದಿ: ಬಲಿಷ್ಠ ತಂಡ ಕಟ್ಟಿದ RCB ಫ್ರಾಂಚೈಸಿ.. ತಂಡದ ಆಟಗಾರರ ಸಂಪೂರ್ಣ ಲಿಸ್ಟ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us