ಬಲಿಷ್ಠ ತಂಡ ಕಟ್ಟಿದ RCB ಫ್ರಾಂಚೈಸಿ.. ತಂಡದ ಆಟಗಾರರ ಸಂಪೂರ್ಣ ಲಿಸ್ಟ್​..!

ಟಾರ್ಗೆಟ್​ ಲಿಸ್ಟ್​ನಲ್ಲಿದ್ದ ಆಟಗಾರರ ಹಿಂದೆ ಬಿದ್ದ ಆರ್​​ಸಿಬಿ ಅಂದ್ಕೊಂಡಿದ್ದಂತೆ ಬಹುತೇಕ ಆಟಗಾರರ ಬೇಟೆಯಾಡುವಲ್ಲಿ ಯಶಸ್ವಿಯಾಯ್ತು. ತಾಳ್ಮೆ ನಡೆ ಅನುಸರಿಸಿದ ರೆಡ್​ ಆರ್ಮಿಯ ಮ್ಯಾನೇಜ್​ಮೆಂಟ್​​ ಆಕ್ಷನ್​​ನಲ್ಲಿ ಚೀಪ್​ ಅಂಡ್ ಬೆಸ್ಟ್​​ ಪಿಕ್​ ಮಾಡಿತು.

author-image
Ganesh Kerekuli
RCB (6)
Advertisment

ಪರ್ಸ್​​​​ನಲ್ಲಿ ಕಡಿಮೆ ದುಡ್ಡಿದ್ರೂ ಆರ್​​ಸಿಬಿ ಸಖತ್​ ಗೇಮ್​ ಆಡಿತು. ಟಾರ್ಗೆಟ್​ ಲಿಸ್ಟ್​ನಲ್ಲಿದ್ದ ಆಟಗಾರರ ಹಿಂದೆ ಬಿದ್ದ ಆರ್​​ಸಿಬಿ, ಅಂದ್ಕೊಂಡಿದ್ದಂತೆ ಬಹುತೇಕ ಆಟಗಾರರ ಬೇಟೆಯಾಡುವಲ್ಲಿ ಯಶಸ್ವಿಯಾಯ್ತು. ತಾಳ್ಮೆ ನಡೆ ಅನುಸರಿಸಿದ ರೆಡ್​ ಆರ್ಮಿಯ ಮ್ಯಾನೇಜ್​ಮೆಂಟ್​​ ಆಕ್ಷನ್​​ನಲ್ಲಿ ಚೀಪ್​ ಅಂಡ್ ಬೆಸ್ಟ್​​ ಪಿಕ್​ ಮಾಡಿತು.

ಕೆಕೆಆರ್​​ ಜೊತೆಗೆ ಆಕ್ಷನ್​ ಅಖಾಡದಲ್ಲಿ ಬಿಗ್​ ಫೈಟ್​ ನಡೆಸಿದ ರೆಡ್​ ಆರ್ಮಿ, ಅಂತಿಮವಾಗಿ 7 ಕೋಟಿ ನೀಡಿ ವೆಂಕಟೇಶ್ ಅಯ್ಯರ್​ ಅವರನ್ನ ಖರೀದಿಸಿತು. ವಿಶ್ವದ ನಂಬರ್​ 2 ಟಿ20 ಬೌಲರ್ ಜೇಕಬ್​ ಡಫಿಯನ್ನ ಕೇವಲ 2 ಕೋಟಿಗೆ ಆರ್​​ಸಿಬಿ ಬುಟ್ಟಿಗೆ ಹಾಕಿಕೊಳ್ತು. ಮಧ್ಯಪ್ರದೇಶದ ಯುವ ಆಲ್​​ರೌಂಡರ್​ ಮಂಗೇಶ್​ ಯಾದವ್​ನ 5.20 ಕೋಟಿಗೆ ಖರೀದಿಸಿತು.

ಇದನ್ನೂ ಓದಿ: ಮಾಜಿ CSK ಸ್ಟಾರ್​ಗೆ ಒಲಿದ ಜಾಕ್​ಪಾಟ್.. ಪತಿರಣ ಮೇಲೆ ಕೋಟಿ ಕೋಟಿ ಬಿಡ್ ಮಾಡಿ ಗೆದ್ದ KKR..!​

ಮಿನಿ ಆಕ್ಷನ್​ನಲ್ಲಿ ಆರ್​​ಸಿಬಿ ಸರ್​​ಪ್ರೈಸ್​ ಪಿಕ್​ ಈ ಸತ್ವಿಕ್​ ದೆಸ್ವಾಲ್​. ಪುದುಚೇರಿ ತಂಡದ 18 ವರ್ಷದ ಆಟಗಾರನನ್ನ ಆರ್​​ಸಿಬಿ ಬೇಸ್​​ಪ್ರೈಸ್​ 30 ಲಕ್ಷಕ್ಕೆ ಬೇಟೆಯಾಡಿತು. ಇಂಗ್ಲೆಂಡ್​ನ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್ ಜೋರ್ಡನ್​ ಕಾಕ್ಸ್​ನ ಆರ್​​ಸಿಬಿ ಬೇಸ್​ ಪ್ರೈಸ್​ಗೆ ಬಲೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯ್ತು. 

ಯುವ ಆಲ್​​ರೌಂಡರ್​ ವಿಕ್ಕಿ ಓಟ್ಸಾಲ್​, ಅಂಡರ್​​ 19 ಏಷ್ಯಾಕಪ್​ನಲ್ಲಿ ಮೋಡಿ ಮಾಡ್ತಿರೋ ವಿಹಾನ್​ ಮಲ್ಹೋತ್ರ ಹಾಗೂ ಆಲ್​​ರೌಂಡರ್​ ಕನಿಶ್ಕ್​ ಚೌಹಾಣ್​ಗೆ ಆರ್​​ಸಿಬಿ ಮಣೆ ಹಾಕಿತು. ಮಿನಿ ಆಕ್ಷನ್​ನಲ್ಲಿ ಜಾಣ ಹೆಜ್ಜೆ ಇಟ್ಟ ಆರ್​​ಸಿಬಿ ಪರ್ಸ್​ನಲ್ಲಿ 25 ಲಕ್ಷ ಹಣವನ್ನ ಬಾಕಿ ಉಳಿಸಿಕೊಂಡೆ 8 ಸ್ಲಾಟ್​ಗಳನ್ನ ಫಿಲ್​ ಮಾಡಿತು.

ಇದನ್ನೂ ಓದಿ:ವಿಶ್ವದ ನಂಬರ್ 2 ಬೌಲರ್​​ನ ಕರೆತಂದ ಆರ್​ಸಿಬಿ.. ಬೆಂಗಳೂರು ತಂಡ ಮತ್ತಷ್ಟು ಸ್ಟ್ರಾಂಗ್..!

ಆರ್​ಸಿಬಿ ಹೊಸ ತಂಡ

  • ಬ್ಯಾಟಿಂಗ್:

    ರಜತ್ ಪಾಟೀದಾರ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡನ್​ ಕಾಕ್ಸ್
  • ಆಲ್​ರೌಂಡರ್ಸ್:

    ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೆವಿಡ್, ರೊಮಾರಿಯೋ ಶೆಫಾರ್ಡ್​, ಜಾಕೊಬ್ ಬೆಥಲ್, ವೆಂಕಟೇಶ್ ಅಯ್ಯರ್, ಸತ್ವಿಕ್​ ದೆಸ್ವಾಲ್, ಮಂಗೇಶ್​ ಯಾದವ್, ವಿಕ್ಕಿ ಓಟ್ಸಾಲ್,ವಿಹಾನ್​ ಮಲ್ಹೋತ್ರ, ಕನಿಶ್ಕ್​ ಚೌಹಾಣ್
  • ಬೌಲಿಂಗ್ ವಿಭಾಗ:

    ಜೋಶ್ ಹೇಜಲ್​ವುಡ್, ರಶಿಕ್ ದಾರ್, ಸುಯೇಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜೇಕಬ್​ ಡಫಿ, ಯಶ್ ದಯಾಳ್. 

ಇದನ್ನೂ ಓದಿ:IPL Auction: ಆರ್​​ಸಿಬಿ ಭರ್ಜರಿ ಬೇಟೆ.. ಹೊಸದಾಗಿ ತಂಡಕ್ಕೆ ಯಾರೆಲ್ಲ ಬಂದ್ರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Virat Kohli Rajat Patidar Royal Challengers Bengaluru RCB Venkatesh Iyer rcb team
Advertisment