/newsfirstlive-kannada/media/media_files/2025/12/16/jacob-duffy-2025-12-16-16-49-21.jpg)
ವೆಂಕಟೇಶ್ ಅಯ್ಯರ್ ಖರೀದಿ ಬೆನ್ನಲ್ಲೇ ಮತ್ತೊಬ್ಬ ಭರವಸೆಯ ಆಟಗಾರನ ಆರ್​ಸಿಬಿ ಖರೀದಿಸಿದೆ. ನ್ಯೂಜಿಲೆಂಡ್​ನ ಸ್ಟಾರ್ ಬೌಲರ್ ಜಾಕೋಬ್ ಡಫ್ಫಿ (Jacob Duffy)ಯನ್ನು ಆರ್​ಸಿಬಿ ಖರೀದಿಸಿದೆ.
ಟಿ20 ಕ್ರಿಕೆಟ್​ನ ನಂಬರ್ 2 ಬೌಲರ್ ಆಗಿರುವ ಇವರು, ಮೂರು ಫಾರ್ಮ್ಯಾಟ್​ಗಳಲ್ಲೂ ನ್ಯೂಜಿಲೆಂಡ್ ಪರ ಆಡುತ್ತಿದ್ದಾರೆ. ಒಟ್ಟು 38 ಅಂತಾರಾಷ್ಟ್ರೀಯ ಟಿ-20 ಮ್ಯಾಚ್ ಆಡಿರುವ ಜಾಕೋಬ್, ಒಟ್ಟು 53 ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ: RCB ಸೇರಿದ ವೆಂಕಟೇಶ್ ಅಯ್ಯರ್.. ಆದರೆ, ಸಂಬಳದಲ್ಲಿ 16.75 ಕೋಟಿ ರೂ ಕುಸಿತ..!
ಜಾಕೋಬ್ ಬೇಸ್​ ಪ್ರೈಸ್ 2 ಕೋಟಿ ರೂಪಾಯಿ ಆಗಿತ್ತು. ಆರಂಭದಲ್ಲೇ ಆರ್​ಸಿಬಿ ಬಿಡ್ ಮಾಡಿ ಗೆದ್ದಿದೆ. ಹೇಜಲ್​ವುಡ್​ಗೆ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಆರ್​ಸಿಬಿಗೆ ಹೇಜಲ್​ವುಡ್ ಸ್ಥಾನ ತುಂಬುವ ಆಟಗಾರನೊಬ್ಬ ಬೇಕಾಗಿತ್ತು. ಇದೀಗ ಜಾಕೋಬ್​ ಅವರನ್ನು ಖರೀದಿಸುವ ಮೂಲಕ್, ಬೌಲಿಂಗ್ ವಿಭಾಗವನ್ನು ಮತ್ತಷ್ಟು ಸ್ಟ್ರಾಂಗ್ ಮಾಡಿಕೊಂಡಿದೆ.
ಇನ್ನು, ಮತ್ತೊಬ್ಬ ಸ್ಟ್ರಾಂಗ್ ಬ್ಯಾಟರ್ ವೆಂಕಟೇಶ್ ಅಯ್ಯರ್ ಅವರನ್ನು ಆರ್​ಸಿಬಿ ಖರೀದಿಸಿದೆ. ವೆಂಕಟೇಶ್ ಅಯ್ಯರ್​ಗೆ 7 ಕೋಟಿ ನೀಡಿ, ಆರ್​ಸಿಬಿ ಖರೀದಿಸುವಲ್ಲಿ ಯಶಸ್ವಿಯಾಗಿದೆ.
A bowler who is effective in all 3 phases of the game! 🔥
— Royal Challengers Bengaluru (@RCBTweets) December 16, 2025
Over 5️⃣0️⃣ T20I wickets at an economy under 7️⃣.5️⃣, and ranked No. 2 in the world for this format, Jacob Duffy is built to trouble the batters. ⚡️
The Kiwi Pacer will now play for RCB. ❤️🔥#PlayBold#ನಮ್ಮRCB#IPLAuction… pic.twitter.com/N06GB1JkcD
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us