/newsfirstlive-kannada/media/media_files/2025/12/16/venkatesh-iyer-3-2025-12-16-16-01-26.jpg)
ವೆಂಕಟೇಶ್ ಅಯ್ಯರ್ (Venkatesh Iyer) ಮೊದಲ ಬಾರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಹೊರತುಪಡಿಸಿ ಬೇರೆ ಐಪಿಎಲ್ ತಂಡಕ್ಕೆ ಆಡಲಿದ್ದಾರೆ. ಕೆಕೆಆರ್ ಕೂಡ ಹರಾಜಿನಲ್ಲಿ ಅವರನ್ನು ಆಯ್ಕೆ ಮಾಡಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡ್ ಗೆದ್ದಿದೆ. ಕಳೆದ ವರ್ಷ ಕೆಕೆಆರ್​​ನಲ್ಲಿ ಅವರು 23.75 ಕೋಟಿ ರೂಪಾಯಿ ಸಂಬಳ ಪಡೆದಿದ್ದರು. ಈ ಬಾರಿ ಅವರ ವ್ಯಾಲ್ಯೂ 10 ಕೋಟಿಗಿಂತ ಕಡಿಮೆಯಾಗಿದೆ.
ವೆಂಕಟೇಶ್ ಅಯ್ಯರ್ IPL 2026 ಬೆಲೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿಗೆ ಖರೀದಿಸಿದೆ. ಅವರ ಚೊಚ್ಚಲ ಐಪಿಎಲ್ ಜರ್ನಿಯಿಂದಲೂ ಅಯ್ಯರ್ ಕೆಕೆಆರ್‌ನಲ್ಲಿದ್ದರು. ಈಗ ವಿರಾಟ್ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದಾರೆ. ಅಯ್ಯರ್ ಅವರ ಮೂಲ ಬೆಲೆ 2 ಕೋಟಿ ರೂಪಾಯಿ ಆಗಿತ್ತು. ಅವರ ಸಂಬಳ ಕಳೆದ ವರ್ಷಕ್ಕಿಂತ ₹16.75 ಕೋಟಿ ಕಡಿಮೆಯಾಗಿದೆ.
ಇದನ್ನೂ ಓದಿ: ಬರೋಬ್ಬರಿ 25.20 ಕೋಟಿ ರೂಪಾಯಿಗೆ ಸೇಲ್ ಆದ RCB ಮಾಜಿ ಸ್ಟಾರ್​..!
ವೆಂಕಟೇಶ್ ಅಯ್ಯರ್ ಐಪಿಎಲ್ ವೃತ್ತಿ ಜೀವನ
ವೆಂಕಟೇಶ್ ಅಯ್ಯರ್ 2021ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಅಂದಿನಿಂದ ಅವರು ಕೆಕೆಆರ್ ತಂಡದ ಭಾಗವಾಗಿದ್ದಾರೆ. 2021 ರಿಂದ 2025 ರವರೆಗೆ, ಅವರು ಕೆಕೆಆರ್ ಪರ 62 ಪಂದ್ಯಗಳನ್ನು ಆಡಿದ್ದಾರೆ. 29.95 ರ ಸರಾಸರಿಯಲ್ಲಿ 1,468 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಒಂದು ಶತಕ ಮತ್ತು 12 ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರು ಮೂರು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
ಕಳೆದ ವರ್ಷ ವೆಂಕಟೇಶ್ ಅಯ್ಯರ್, 11 ಪಂದ್ಯಗಳಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 142 ರನ್ ಗಳಿಸಿದರು. ಆದರೆ ಫ್ರಾಂಚೈಸಿ ಅವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲವಾಯಿತು.
Left-hand fire and fearless intent. 🔥
— Royal Challengers Bengaluru (@RCBTweets) December 16, 2025
A big stage performer, Venkatesh Iyer, brings explosive top-order power and all-around punch. 👊
He’s that kind of player who shifts momentum, FAST. 😮💨
Welcome to RCB, Venkatesh Iyer. ❤️🔥#PlayBold#ನಮ್ಮRCB#IPLAuction#BidForBoldpic.twitter.com/vEx4NuXUDD
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us