/newsfirstlive-kannada/media/media_files/2025/12/16/green-2025-12-16-15-24-29.jpg)
ಐಪಿಎಲ್ ಹರಾಜಿನಲ್ಲಿ ಆಟಗಾರರ ಖರೀದಿ ಜೋರಾಗಿದೆ. ಕ್ಯಾಮರೂನ್ ಗ್ರೀನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಬರೋಬ್ಬರಿ 25.20 ಕೋಟಿ ರೂಪಾಯಿಗೆ ಖರೀದಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕೆಕೆಆರ್ ನಡುವೆ ತೀವ್ರ ಬಿಡ್ಡಿಂಗ್ ವಾರ್​ ನಡೆಯಿತು, 25 ಕೋಟಿ ರೂಪಾಯಿ ವರೆಗೆ ಬಿಡ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಂತರ ಹಿಂತೆಗೆದುಕೊಂಡಿತು. ಗ್ರೀನ್ ಈಗ ಐಪಿಎಲ್ ಹರಾಜು ಇತಿಹಾಸದಲ್ಲಿ ಅತ್ಯಂತ ವಿದೇಶಿ ದುಬಾರಿ ಆಟಗಾರನಾಗಿದ್ದಾರೆ. 2024 ರ ಹರಾಜಿನಲ್ಲಿ ಕೆಕೆಆರ್ 24.75 ಕೋಟಿಗೆ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿಸಿತ್ತು.
ಇದನ್ನೂ ಓದಿ: IPL Auction: ಈ ಐದು ಆಟಗಾರರಿಗೆ ಭಾರೀ ಡಿಮ್ಯಾಂಡ್, ಯಾರಿಗೆ ಎಷ್ಟು ಕೋಟಿ..?
ಮುಂಬೈ ಇಂಡಿಯನ್ಸ್ ಕೂಡ ಗ್ರೀನ್‌ಗಾಗಿ ಬಿಡ್ಡಿಂಗ್ ಮಾಡಿತ್ತು. ಆದರೆ ಮುಂಬೈ ಇಂಡಿಯನ್ಸ್ ಬಳಿ ಬರೀ 2.27 ಕೋಟಿ ಹಣ ಇರೋದ್ರಿಂದ ನಂತರ ಸುಮ್ಮನಾಯಿತು. ಇನ್ನು ಕೆಕೆಆರ್ ಜೊತೆ ರಾಜಸ್ಥಾನ್ ರಾಯಲ್ಸ್ ಕೂಡ ಪೈಪೋಟಿ ನಡೆಸಿತ್ತು.
ಚೆನ್ನೈ-ಕೋಲ್ಕತ್ತಾದಲ್ಲಿ ಬಿಡ್ಡಿಂಗ್ ಯುದ್ಧ
ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮಧ್ಯಪ್ರವೇಶಿಸಿತು. ಚೆನ್ನೈ ಮತ್ತು ಕೋಲ್ಕತ್ತಾ ಫ್ರಾಂಚೈಸಿಗಳ ನಡುವೆ ತೀವ್ರ ಬಿಡ್ಡಿಂಗ್ ಯುದ್ಧ ನಡೆಯಿತು. ಎರಡೂ ತಂಡಗಳಿಗೆ ಆಲ್‌ರೌಂಡರ್ ಅಗತ್ಯವಿತ್ತು. ಆದ್ದರಿಂದ ಅವರು ಹಣವನ್ನು ಖರ್ಚು ಮಾಡಲು ಹಿಂಜರಿಯಲಿಲ್ಲ. ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರನೊಬ್ಬನಿಗೆ ಹಾಕಿದ ಅತ್ಯಧಿಕ ಬಿಡ್ ಆಗಿತ್ತು. ಇದಕ್ಕೂ ಮೊದಲು ಸಿಎಸ್​ಕೆ ಬೆನ್ ಸ್ಟೋಕ್ಸ್ ಅವರನ್ನು 16.25 ಕೋಟಿ ರೂಪಾಯಿಗೆ ಖರೀದಿಸಿತ್ತು.
ಇದನ್ನೂ ಓದಿ: ಖ್ಯಾತ ನಟಿಯ ಕಿಡ್ನ್ಯಾಪ್! ಹೆಂಡತಿಯನ್ನೇ ಅಪಹರಿಸಿದ ಗಂಡ.. ಯಾಕೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us