ಖ್ಯಾತ ನಟಿಯ ಕಿಡ್ನ್ಯಾಪ್! ಹೆಂಡತಿಯನ್ನೇ ಅಪಹರಿಸಿದ ಗಂಡ.. ಯಾಕೆ?

ಮಹಾಶೂರ ಪತಿರಾಯನೊಬ್ಬ ತನ್ನ ಪತ್ನಿಯನ್ನೇ ಅಪಹರಣ ಮಾಡಿರುವ ಆರೋಪ ಕೇಳಿಬಂದಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾದ ಕತೆ ಇದು! ಯಾಕೆ ಏನು ಅನ್ನೋ ವಿವರಗಳು ಈ ಸ್ಟೋರಿಯಲ್ಲಿದೆ.

author-image
Ganesh Kerekuli
Kidnap case
Advertisment

ಬೆಂಗಳೂರು: ಮಹಾಶೂರ ಪತಿರಾಯನೊಬ್ಬ ತನ್ನ ಪತ್ನಿಯನ್ನೇ ಅಪಹರಣ ಮಾಡಿರುವ ಆರೋಪ ಕೇಳಿಬಂದಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾದ ಕತೆ ಇದು! 

ಏನಿದು ಕೇಸ್​..? 

ಹರ್ಷ ವರ್ಧನ್ ಪತ್ನಿಯನ್ನೇ ಕಿಡ್ನ್ಯಾಪ್ ಮಾಡಿರುವ ಆರೋಪ ಹೊತ್ತ ವ್ಯಕ್ತಿ. ಹರ್ಷ ವರ್ಧನ್, ‘ವರ್ಧನ್ ಎಂಟರ್ಪ್ರೈಸ್​ನ  ಮಾಲೀಕ ಹಾಗೂ ಚಿತ್ರ ನಿರ್ಮಾಪಕ. ಹರ್ಷ ವರ್ಧನ್ ಪತ್ನಿ ಹೆಸರು ಚೈತ್ರಾ ಆರ್​. ಇವರು ನಟಿ. ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಇದೀಗ ಹರ್ಷ ವರ್ಧನ್ ತನ್ನ ಪತ್ನಿಯನ್ನೇ ಕಿಡ್ನಾಪ್ ಮಾಡಿ ಸುದ್ದಿಯಾಗಿದ್ದಾನೆ. 

ಯಾಕೆ ಕಿಡ್ನಾಪ್ ಮಾಡಿದ..?

ಈ ಜೋಡಿಗೆ ಒಂದು ಮಗು ಇದೆ. ದಂಪತಿ ಮಧ್ಯೆ ವಿರಸ ಹಿನ್ನೆಲೆಯಲ್ಲಿ ಚೈತ್ರಾ ಮಗುವಿನ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಇದರಿಂದ ಪತಿ ಹರ್ಷ ವರ್ಧನ್ ಬೇಸರಗೊಂಡಿದ್ದ. ಮಗುವನ್ನು ತನ್ನ ಬಳಿ ಇಟ್ಟುಕೊಳ್ಳುವ ಸಲುವಾಗಿ ಪತ್ನಿಯ್ನೇ ಕಿಡ್ನ್ಯಾಪ್ ಮಾಡಿದ್ದಾನೆ ಎಂಬ ಆರೋಪವಿದೆ. 

ಹೇಗೆ ಕಿಡ್ನ್ಯಾಪ್ ಮಾಡಿದ..? 

ಕಿಡ್ನ್ಯಾಪ್​ಗಾಗಿ ಹರ್ಷ ವರ್ಧನ್, ಸ್ನೇಹಿತ ಕೌಶಿಕ್​ನ ಸಹಾಯ ಪಡೆದುಕೊಂಡಿದ್ದಾನೆ. ಕೌಶಿಕ್​​, ಶೂಟಿಂಗ್ ನೆಪದಲ್ಲಿ ಚೈತ್ರಾ ಅವರನ್ನು ಸಂಪರ್ಕಿಸಿದ್ದ. ಮಾತುಕತೆ ಬಳಿಕ ಶೂಟಿಂಗ್​ ಬರೋದಾಗಿ ಚೈತ್ರಾ ಒಪ್ಪಿಕೊಂಡಿದ್ದಾರೆ. ಅಲ್ಲದೇ ಮುಂಗಡವಾಗಿ 20 ಸಾವಿರ ಹಣವನ್ನ ಪಡೆದುಕೊಂಡಿದ್ದಾರೆ. ಈ ವೇಳೆ ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ಚೈತ್ರಾಗೆ ನಂಬಿಸಲಾಗಿದೆ. ಪಿಕ್​ಅಪ್ ನೆಪದಲ್ಲಿ ಮೈಸೂರು ರಸ್ತೆ ಮೂಲಕ ನೈಸ್ ರೋಡಲ್ಲಿ‌ ಚೈತ್ರಾಳನ್ನು ಕಿಡ್ನ್ಯಾಪ್ ಮಾಡಲಾಗಿದೆ. 

ಇದನ್ನೂ ಓದಿ: ಮನರೇಗಾ ಯೋಜನೆ ಬದಲಾವಣೆಗೆ ಪ್ರಿಯಾಂಕಾ ಗಾಂಧಿ ವಿರೋಧ : ರಾಜ್ಯಗಳಿಗೆ ಆರ್ಥಿಕ ಹೊರೆ ವರ್ಗಾವಣೆ

Kidnap case (1)

ಮುಂದೆ ಏನು ಮಾಡಿದ..?

ಚೈತ್ರಾ ತನ್ನ ತೆಕ್ಕೆಗೆ ಸಿಗುತ್ತಿದ್ದಂತೆಯೇ, ಅವರ (ಚೈತ್ರಾ) ತಾಯಿಗೆ ಕರೆ ಮಾಡಿದ್ದಾನಂತೆ. ನಿನ್ನ ಮಗಳನ್ನ ನಾನು ಅಪಹರಣ ಮಾಡಿದ್ದೇನೆ. ನನ್ನ ಮಗಳನ್ನ ತಂದು ಒಪ್ಪಿಸಿದ್ರೆ ನಿಮ್ಮ ಮಗಳನ್ನ ಸೇಫಾಗಿ ಬಿಡ್ತೀನಿ ಎಂದು ಬೆದರಿಕೆ ಹಾಕಿದ್ದನಂತೆ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಚೈತ್ರಾಳ ಸಹೋದರಿ ದೂರು ದಾಖಲಿಸಿದ್ದಾರೆ.

ದೂರಿನ ಬಳಿಕ ಏನಾಯ್ತು..? 

ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ಕಾನೂನು ಪ್ರಕಾರ, ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನ ಠಾಣೆಗೆ ಕರೆತಂದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಕೊನೆಗೆ ಚೈತ್ರಾಳನ್ನು, ಹರ್ಷವರ್ಧನ್​ ಆಕೆಯ ಮನೆಯವರಿಗೆ ಒಪ್ಪಿಸಿದ್ದಾನೆ. 

ಆರೋಪಿ ಹರ್ಷವರ್ಧನ್ ಹಾಗೂ ನಟಿ ಚೈತ್ರಾ ಇಬ್ಬರನ್ನೂ ಪೊಲೀಸ್ರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕೌಟುಂಬಿಕ ಕಲಹ ಎಂದು ದಂಪತಿ ಹೇಳಿಕೊಂಡಿದೆ. ಇನ್ನುಂದೆ ಇಬ್ಬರು ಮಾತನ್ನಾಡಿಕೊಂಡು ಸರಿ ಹೋಗ್ತೀವಿ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಕಾನೂನು ಪ್ರಕಾರ ಪ್ರಕ್ರಿಯೆ ನಡೆಸಿರುವ ಪೊಲೀಸರು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಿದ್ದಾರೆ. 

ಇದನ್ನೂ ಓದಿ: ಒಜಿ ಸಿನಿಮಾ ನಿರ್ದೇಶಕ ಸುಜೀತ್‌ಗೆ ಲ್ಯಾಂಡ್ ರೋವರ್ ಡಿಫೆಂಡರ್ ಕಾರ್ ಗಿಫ್ಟ್ : ನಟ ಪವನ್ ಕಲ್ಯಾಣ್ ರಿಂದ ದುಬಾರಿ ಕಾರ್ ಗಿಫ್ಟ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Harsha Vardhan Chaitra R
Advertisment