IPL Auction: ಈ ಐದು ಆಟಗಾರರಿಗೆ ಭಾರೀ ಡಿಮ್ಯಾಂಡ್, ಯಾರಿಗೆ ಎಷ್ಟು ಕೋಟಿ..?

ಐಪಿಎಲ್​ ಮಿನಿ ಆಕ್ಷನ್​ನಲ್ಲಿಂದು ಸ್ಟಾರ್​ ಆಟಗಾರರೇ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದ್ದಾರೆ. ತಂಡದ ಸ್ಟ್ರೆಂಥ್​ ಹೆಚ್ಚಿಸಲು ಮುಂದಾಗಿರೋ ಫ್ರಾಂಚೈಸಿಗಳು ಬಿಗ್​ ಫಿಶ್​ಗಳ ಬೇಟೆಗೆ ಪಣತೊಟ್ಟಿವೆ. ಈ ಆಟಗಾರರ ಮೇಲಂತೂ ಕೋಟಿ-ಕೋಟಿ ಸುರಿಯೋದಕ್ಕೆ ಸಜ್ಜಾಗಿವೆ. ಡಿಮ್ಯಾಂಡ್​ನಲ್ಲಿರೋ ಆಟಗಾರರು ಯಾರು?

author-image
Ganesh Kerekuli
pathiarana venkatesh iyer green
Advertisment
  • ಆಸಿಸ್​ ಆಲ್​​ರೌಂಡರ್​ ಗ್ರೀನ್​ಗೆ ಫುಲ್​ ಡಿಮ್ಯಾಂಡ್​
  • ವೆಂಕಟೇಶ್​​ ಅಯ್ಯರ್​​ಗಾಗಿ ಬಿಡ್​ ವಾರ್​​ ಫಿಕ್ಸ್​
  • ರವಿ ಬಿಷ್ನೋಯ್​ಗೆ ಖುಲಾಯಿಸುತ್ತಾ ಅದೃಷ್ಟ..?

ಐಪಿಎಲ್​ ಮಿನಿ ಆಕ್ಷನ್​ ಅಖಾಡಕ್ಕೆ ವೇದಿಕೆ ಸಜ್ಜಾಗಿದೆ. ಸೂಪರ್​ ಸ್ಟಾರ್​ ಆಟಗಾರರೇ ಇಂದಿನ ಹರಾಜಿನ ಹಾಟ್​ ಫೇವರಿಟ್​ ಎನಿಸಿದ್ದಾರೆ. ಅದ್ರಲ್ಲೂ 2 ಕೋಟಿ ಬ್ರ್ಯಾಕೆಟ್​​ನಲ್ಲಿರುವ ಪ್ಲೇಯರ್ಸ್​ ಫ್ರಾಂಚೈಸಿ ಓನರ್​​ಗಳ ಮೇನ್​ ಟಾರ್ಗೆಟ್​ ಎನಿಸಿದ್ದಾರೆ. ಈ ಟಾಪ್ 5​ ಪ್ಲೇಯರ್​ಗಳ ಖರೀದಿಗೆ ಫ್ರಾಂಚೈಸಿಗಳ ನಡುವೆ ಬಿಡ್​​​ ವಾರ್​ ನಡೆಯೋದು ಪಕ್ಕಾ. 

ಗ್ರೀನ್​ಗೆ ಫುಲ್​ ಡಿಮ್ಯಾಂಡ್

ಕಳೆದ ಐಪಿಎಲ್​ನಿಂದ ಹೊರಗುಳಿದಿದ್ದ ಆಲ್​ರೌಂಡರ್​ ಕ್ಯಾಮರೂನ್ ಗ್ರೀನ್​ ಈ ಬಾರಿ ಆಕ್ಷನ್​ ಅಖಾಡಕ್ಕೆ ಬಂದಿದ್ದಾರೆ. ಬಿಗ್​ ಪರ್ಸ್​ ಹೊಂದಿರೋ ಕೊಲ್ಕತ್ತಾ ನೈಟ್​ ರೈಡರ್ಸ್​, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಟಾರ್ಗೆಟ್​ ಪ್ಲೇಯರ್​ ಲಿಸ್ಟ್​ನಲ್ಲಿ ಕ್ಯಾಮರೂನ್​ ಗ್ರೀನ್​ ಟಾಪ್​ ಪ್ಲೇಸ್​ನಲ್ಲಿದ್ದಾರೆ. ಹೈದ್ರಾಬಾದ್​ ಸೇರಿದಂತೆ ಉಳಿದ ಫ್ರಾಂಚೈಸಿಗಳ ಕಣ್ಣೂ ಗ್ರೀನ್​ ಮೇಲಿದ್ದು, ಆಸಿಸ್​ ಆಲ್​​ರೌಂಡರ್​ಗಾಗಿ ಬಿಡ್​ ವಾರ್​ ಜೋರಾಗಿ ನಡೆಯಲಿದೆ.

ಇದನ್ನೂ ಓದಿ:  KKR ಪರ್ಸ್​ 64.3 ಕೋಟಿ.. ಆಟಗಾರರ ರಿಲೀಸ್​​ ವೇಳೆ ಮಹಾ ಯಡವಟ್ಟು..!

Cameron Green_RCB

ಪತಿರಣ ಖರೀದಿಗೆ ಪೈಪೋಟಿ ಪಕ್ಕಾ

ಶ್ರೀಲಂಕಾದ ಯಂಗ್ ಪೇಸರ್ ಮಥೀಶ ಪತಿರಣ, ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸೇಲ್ ಆದ್ರೂ ಆಶ್ಚರ್ಯವಿಲ್ಲ. ಈ ಹಿಂದೆ ಚೆನ್ನೈ ಸೂಪರ್​ಕಿಂಗ್ಸ್​ ಫ್ರಾಂಚೈಸಿ ಪರ ಅದ್ಭುತ ಪ್ರದರ್ಶನ ನೀಡಿರುವ ಪತಿರಣ, ಟಿ-ಟ್ವೆಂಟಿ ಕ್ರಿಕೆಟ್​ನ ಡೇಂಜರಸ್ ಬೌಲರ್. ನ್ಯೂ ಬಾಲ್ ಮತ್ತು ಡೆಥ್ ಓವರ್​ಗಳಲ್ಲಿ ತಂಡಕ್ಕೆ ಬ್ರೇಕ್ ನೀಡೋ ಪತಿರಣ, ಈ ಬಾರಿ ಹರಾಜಿನಲ್ಲಿ ಬಹು ಬೇಡಿಕೆಯ ಆಟಗಾರ ಎನಿಸಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್​​ ರೈಡರ್ಸ್​ ಪತಿರಣ ಖರೀದಿಗೆ ಆಸಕ್ತಿಯನ್ನ ತೋರಿಸಿವೆ. ಅತ್ತ ಚೆನ್ನೈ ಸೂಪರ್​ ಕಿಂಗ್ಸ್​ ಕಡಿಮೆ ಮೊತ್ತಕ್ಕೆ ಪತಿರಣನ ಬೈ ಬ್ಯಾಕ್ ಮಾಡಲು ಸೈಲೆಂಟ್​ ಸ್ಕೆಚ್​ ಹಾಕಿ ಕೂತಿದೆ. 

ಇದನ್ನೂ ಓದಿ: IPL ಹರಾಜಿನಲ್ಲಿ 11 ಮಂದಿ ಕನ್ನಡಿಗರು.. ಯಾರ ಅದೃಷ್ಟ ಬದಲಾಗಲಿದೆ..?

venkatesh iyer pathirana russel

ಅಯ್ಯರ್​​ಗಾಗಿ ಬಿಡ್

ಕೆಕೆಆರ್​ ತಂಡ ರಿಲೀಸ್​ ಮಾಡಿರೋ ಆಲ್​​ರೌಂಡರ್ ವೆಂಕಟೇಶ್​ ಅಯ್ಯರ್​ ಖರೀದಿಗೆ ಆಕ್ಷನ್ ಅಖಾಡದಲ್ಲಿ ಬಿಗ್​ಫೈಟ್​ ನಡೆಯೋದ್ರಲ್ಲಿ ಯಾವುದೇ ಅನುಮಾನ ಬೇಡ. ಡೀಸೆಂಟ್ ಮಿಡಲ್ ಆರ್ಡರ್ ಬ್ಯಾಟರ್ ಮತ್ತು ಪಾರ್ಟ್​​ಟೈಮ್ ಮೀಡಿಯಮ್ ಪೇಸರ್​ ವೆಂಕಿ ಅಯ್ಯರ್, ಇಂಡಿಯನ್ ಪಿಚ್​​​​ಗಳಲ್ಲಿ ಡೇಂಜರಸ್ ಪ್ಲೇಯರ್. ಒಂದು ಕಥೆ ರಿಲೀಸ್​ ಮಾಡಿರೋ ಕೆಕೆಆರ್​ ಫ್ರಾಂಚೈಸಿಯೇ ಕಡಿಮೆ ಮೊತ್ತಕ್ಕೆ ಮತ್ತೆ ಖರೀದಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಚೆನ್ನೈ, ಲಕ್ನೋ, ಡೆಲ್ಲಿ ಹಾಗೂ ಹೈದ್ರಾಬಾದ್​ ತಂಡಗಳು ವೆಂಕಿ ಖರೀದಿಗೆ ಆಸಕ್ತಿ ಹೊಂದಿವೆ. 

ಜೇಮಿ ಸ್ಮಿತ್.​.?

ಇಂಗ್ಲೆಂಡ್​ ತಂಡದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಜೇಮಿ ಸ್ಮಿತ್​ ಈ ಬಾರಿಯ ಹರಾಜಿನಲ್ಲಿ ಸರ್​​ಪ್ರೈಸ್​ ಪಿಕ್​ ಆಗೋ ಸಾಧ್ಯತೆಯಿದೆ. ಸ್ಫೋಟಕ ಬ್ಯಾಟಿಂಗ್​ ನಡೆಸಬಲ್ಲ ಸ್ಮಿತ್​ನ ಬುಟ್ಟಿಗೆ ಹಾಕಿಕೊಳ್ಳಲು ಹಲವು ಫ್ರಾಂಚೈಸಿಗಳು ಸೈಲೆಂಟ್​ ಸ್ಕೆಚ್​ ಹಾಕಿ ಕುಳಿತಿವೆ. 2 ಕೋಟಿ ಮೂಲ ಬೆಲೆಗೆ ಹರಾಜಿಗಿರೋ ಜೇಮಿ ಸ್ಮಿತ್​ಗೆ ಇಂದು ಸಂಜೆಯೊಳಗೆ ಕೋಟಿ ಕುಬೇರ ಆದ್ರೂ ಅಚ್ಚರಿ ಪಡಬೇಕಿಲ್ಲ. 

ಇದನ್ನೂ ಓದಿ: ಆರ್​ಸಿಬಿ ಬೇಕು 8 ಆಟಗಾರರು.. ಯಾವೆಲ್ಲ ಆಟಗಾರರ ಮೇಲೆ ಬಿಡ್ ಮಾಡಲಿದೆ..?

ರವಿ ಬಿಷ್ನೋಯ್​ಗೆ ಖುಲಾಯಿಸುತ್ತಾ ಅದೃಷ್ಟ?

ಮಿನಿ ಹರಾಜಿನಲ್ಲಿ ಭಾರತದ ಸ್ಪೆಷಲಿಸ್ಟ್​ ಸ್ಪಿನ್ನರ್​ ರವಿ ಬಿಷ್ನೋಯ್​ ಕೂಡ ಹಲವು ಫ್ರಾಂಚೈಸಿಗಳ ಟಾರ್ಗೆಟೆಡ್​ ಪ್ಲೇಯರ್​ ಎನಿಸಿದ್ದಾರೆ. ಬೌಲಿಂಗ್​ ಜೊತೆಗೆ ಫೀಲ್ಡಿಂಗ್​ನಲ್ಲೂ ಅದ್ಭುತ ಪ್ರದರ್ಶನ ನೀಡಬಲ್ಲ ರವಿ ಬಿಷ್ನೋಯ್​ ಖರೀದಿಗೆ ಹಲವು ಫ್ರಾಂಚೈಸಿಗಳು ಪ್ಲಾನ್​ ಮಾಡಿಕೊಂಡಿವೆ. ಇನ್​ಫ್ಯಾಕ್ಟ್ಗ್. ಹಾಲಿ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕಣ್ಣು ಕೂಡ ಬಿಷ್ನೋಯ್​ ಮೇಲಿದೆ.

ಬಾಂಗ್ಲಾ ವೇಗಿ ಮಸ್ತಫಿಜುರ್​ಗೆ ಫುಲ್​ ಬೇಡಿಕೆ

ಬಾಂಗ್ಲಾದೇಶದ ಎಡಗೈ ಮೀಡಿಯಮ್ ಪೇಸರ್​​​​​​​ ಮುಸ್ತಫಿಝುರ್ ರೆಹಮಾನ್, ಟಿ-ಟ್ವೆಂಟಿ ಕ್ರಿಕೆಟ್​​​ಗೆ ಹೇಳಿ ಮಾಡಿಸಿದ ಬೌಲರ್. ತನ್ನ ಮೀಡಿಯಮ್ ಪೇಸ್ ಮತ್ತು ವೇರಿಯೇಷನ್ಸ್​ನಿಂದ ಮುಸ್ತಾಫಿಝುರ್, ಬ್ಯಾಟರ್​ಗಳಿಗೆ ಸಿಕ್ಕಾಪಟ್ಟೆ ಕಾಟ ಕೊಡ್ತಾರೆ. ಡೆತ್​ ಓವರ್​ನಲ್ಲೂ ಮೋಸ್ಟ್ ಎಕಾನಮಿಕಲ್ ಬೌಲರ್ ಎನಿಸಿರೋ ಮುಸ್ತಫಿಜುರ್​​ ಮೇಲೆ ಫ್ರಾಂಚೈಸಿಗಳು ಆಸಕ್ತಿ ಹೊಂದಿವೆ.

ಇದನ್ನೂ ಓದಿ:77 ಸ್ಲಾಟ್ ಖಾಲಿ​​, 237.55 ಕೋಟಿ ರೂ ಹಣ! ಮಿನಿ ಆಕ್ಷನ್​ನ ಫುಲ್​​ ಡಿಟೇಲ್ಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL IPL 2026 auction IPL 2026 mini auction
Advertisment