IPL ಹರಾಜಿನಲ್ಲಿ 11 ಮಂದಿ ಕನ್ನಡಿಗರು.. ಯಾರ ಅದೃಷ್ಟ ಬದಲಾಗಲಿದೆ..?

ಕರ್ನಾಟಕದ ಆಟಗಾರರು ಕೂಡ ಐಪಿಎಲ್​ ಮಿನಿ ಹರಾಜಿನಲ್ಲಿ ಅದೃಷ್ಠ ಪರೀಕ್ಷೆಗಿಳಿದಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಶನ್​ನ 11 ಮಂದಿ ಆಟಗಾರರು ಹರಾಜಿಗೆ ನೊಂದಾಯಿಸಿಕೊಂಡಿದ್ದಾರೆ. ಮಯಾಂಕ್​​, ಅಭಿನವ್​ ಮನೋಹರ್​, ವಿಧ್ವತ್​ ಕಾವೇರಪ್ಪ, ಮನೋಜ್​ ಬಾಂಡಗೆ ಪ್ರಮುಖ ಆಟಗಾರರಾಗಿದ್ದಾರೆ

author-image
Ganesh Kerekuli
Karnataka players
Advertisment

ಇಂಡಿಯನ್​ ಪ್ರೀಮಿಯರ್​ ಲೀಗ್​ ಮಿನಿ ಆಕ್ಷನ್​ ಕೌಂಟ್​​ಡೌನ್​ ಆರಂಭವಾಗಿದೆ. ಮುಂದಿನ ಸೀಸನ್​ಗೆ ತಂಡವನ್ನ ಬಲಿಷ್ಠಗೊಳಿಸೋಕೆ ಸಜ್ಜಾಗಿರೋ ಫ್ರಾಂಚೈಸಿಗಳು ಮಿನಿ ಆಕ್ಷನ್​ನಲ್ಲಿ ವೀಕ್​​ನೆಸ್​ಗಳ ಮೇಲೆ ವರ್ಕೌಟ್​ ಮಾಡೋಕೆ ಮುಂದಾಗಿವೆ. ವಾರದಿಂದಲೇ ಭರ್ಜರಿ ಸಭೆಗಳನ್ನ ನಡೆಸಿರೋ ಫ್ರಾಂಚೈಸಿಗಳು ಫ್ಯೂಚರ್​​ ಪ್ಲಾನ್​​ನೊಂದಿಗೆ ಆಕ್ಷನ್​ ಅಖಾಡಕ್ಕಿಳಿಯಲು ಸಜ್ಜಾಗಿವೆ. 

ಕರ್ನಾಟಕದ ಆಟಗಾರರು ಕೂಡ ಐಪಿಎಲ್​ ಮಿನಿ ಹರಾಜಿನಲ್ಲಿ ಅದೃಷ್ಠ ಪರೀಕ್ಷೆಗಿಳಿದಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಶನ್​ನ 11 ಮಂದಿ ಆಟಗಾರರು ಹರಾಜಿಗೆ ನೊಂದಾಯಿಸಿಕೊಂಡಿದ್ದಾರೆ. ಮಯಾಂಕ್​ ಅಗರ್​ವಾಲ್​, ಅಭಿನವ್​ ಮನೋಹರ್​, ವಿಧ್ವತ್​ ಕಾವೇರಪ್ಪ, ಮನೋಜ್​ ಬಾಂಡಗೆ ಆಕ್ಷನ್​ ಅಖಾಡದಲ್ಲಿರೋ ಪ್ರಮುಖ ಆಟಗಾರರಾಗಿದ್ದಾರೆ. 75 ಲಕ್ಷ ಮೂಲ ಬೆಲೆಗೆ ಹರಾಜಿಗಿರೋ ಮಯಾಂಕ್ ಅಗರ್​ವಾಲ್​​ ಖರೀದಿಗೆ ಆರ್​​ಸಿಬಿ ಆಸಕ್ತಿ ಹೊಂದಿದೆ. 

ಇದನ್ನೂ ಓದಿ:CSK ಯಿಂದ ಆಟಗಾರರ ಮಿನಿ ಹರಾಜಿಗೆ ಪ್ಲ್ಯಾನ್‌ : ಯಾರು ಅನ್ನು ಖರೀದಿಸುವ ಪ್ಲ್ಯಾನ್ ಇದೆ ಗೊತ್ತಾ?

ನಿರೀಕ್ಷೆಯಲ್ಲಿ ಕರ್ನಾಟ ಆಟಗಾರರು..!

  • ಮಯಾಂಕ್ ಅಗರ್​ವಾಲ್ 75 ಲಕ್ಷ
  • ಅಭಿನವ್ ಮನೋಹರ್ 30 ಲಕ್ಷ
  • ವಿದ್ಯಾಧರ್ ಪಾಟೀಲ್ 30 ಲಕ್ಷ
  • ವಿದ್ವತ್ ಕಾವೇರಪ್ಪ 30 ಲಕ್ಷ
  • ಪ್ರವೀಣ್ ದುಬೆ 30 ಲಕ್ಷ
  • ಮನೋಜ್ ಭಾಂಡಗೆ 30 ಲಕ್ಷ
  • ಜಗದೀಶ್ ಸುಚಿತ್ 30 ಲಕ್ಷ
  • ಕೆಎಲ್ ಶ್ರೀಜಿತ್ 30 ಲಕ್ಷ
  • ಅಭಿಲಾಷ್ ಶೆಟ್ಟಿ 30 ಲಕ್ಷ
  • ಶ್ರೀವತ್ಸ ಆಚಾರ್ಯ 30 ಲಕ್ಷ

ಮಿನಿ ಆಕ್ಷನ್​ಗೆ ದೇಶ-ವಿದೇಶಗಳಿಂದ ಬರೋಬ್ಬರಿ 1335 ಮಂದಿ ಆಟಗಾರರು ರಿಜಿಸ್ಟರ್​ ಮಾಡಿಕೊಂಡಿದ್ರು. ಆಟಗಾರರ ಹೆಸರನ್ನ ಫಿಲ್ಟರ್​ ಮಾಡಿರೋ ಬಿಸಿಸಿಐ, ಕೇವಲ 350 ಆಟಗಾರರ ಹೆಸರನ್ನ ಶಾರ್ಟ್​ ಲಿಸ್ಟ್​ ಮಾಡಿದೆ. ಈ ಪೈಕಿ 16 ಮಂದಿ ಕ್ಯಾಪ್ಡ್​ ಇಂಡಿಯನ್​ ಪ್ಲೇಯರ್ಸ್​ ಆದ್ರೆ, 96 ಮಂದಿ ಕ್ಯಾಪ್ಡ್​ ಫಾರಿನ್​ ಆಟಗಾರರಿದ್ದಾರೆ. 224 ಮಂದಿ ಅನ್​ಕ್ಯಾಪ್ಡ್​ ಇಂಡಿಯನ್ಸ್​ ಹಾಗೂ 14 ಮಂದಿ ಅನ್​ಕ್ಯಾಪ್ಡ್​ ಫಾರಿನ್​ ಪ್ಲೇಯರ್ಸ್​ ಇದ್ದಾರೆ. 350 ಆಟಗಾರರು ಹರಾಜಿನ ಕಣದಲ್ಲಿದ್ರೂ 77 ಸ್ಲಾಟ್ ಮಾತ್ರ​ ಖಾಲಿ ಉಳಿದಿದೆ. 10 ಫ್ರಾಂಚೈಸಿಗಳಿಂದ ಒಟ್ಟು 237.55 ಕೋಟಿ  ಹಣ ಬಾಕಿ ಉಳಿದಿದೆ.

ಇದನ್ನೂ ಓದಿ: ಆರ್​ಸಿಬಿ ಬೇಕು 8 ಆಟಗಾರರು.. ಯಾವೆಲ್ಲ ಆಟಗಾರರ ಮೇಲೆ ಬಿಡ್ ಮಾಡಲಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL IPL 2026 auction ipl retention IPL 2026 mini auction
Advertisment