ಆರ್​ಸಿಬಿ ಬೇಕು 8 ಆಟಗಾರರು.. ಯಾವೆಲ್ಲ ಆಟಗಾರರ ಮೇಲೆ ಬಿಡ್ ಮಾಡಲಿದೆ..?

18 ವರ್ಷಗಳ ಟ್ರೋಫಿ ಗೆದ್ದ RCB ಕಣ್ಣು ಈಗ 2ನೇ ಟ್ರೋಫಿ ಮೇಲಿದೆ. ಹೀಗಾಗಿ ಮುಂದಿನ ಸೀಸನ್​​ಗೂ ಮುನ್ನ ತಂಡವನ್ನ ಮತ್ತಷ್ಟು ಬಲಿಷ್ಠಗೊಳಿಸಲು ರೆಡ್​​ ಆರ್ಮಿ ಮುಂದಾಗಿದೆ. ಭರ್ಜರಿ ತಯಾರಿ ನಡೆಸಿ ಮಿನಿ ಆಕ್ಷನ್​ ಅಖಾಡಕ್ಕಿಳಿಯಲು ಹಾಲಿ ಚಾಂಪಿಯನ್​ ಟೀಮ್​​ ಸಜ್ಜಾಗಿದೆ. ಆರ್​​ಸಿಬಿಯ ಟಾರ್ಗೆಟ್​ ಯಾರು?

author-image
Ganesh Kerekuli
RCB (4)
Advertisment
  • 8 ಸ್ಲಾಟ್​ ಖಾಲಿ, ಪರ್ಸ್​ನಲ್ಲಿದೆ 16.4 ಕೋಟಿ ರೂಪಾಯಿ
  • IPL ಮಿನಿ ಆಕ್ಷನ್​ಗೆ ಆರ್​​ಸಿ​​ಬಿಯ ಪ್ಲ್ಯಾನ್​ ಏನು.?
  • ವೆಂಕಟೇಶ್​ ಅಯ್ಯರ್​ಗೆ​ ರೆಡ್​ ಆರ್ಮಿ ಗಾಳ ಹಾಕುತ್ತಾ.?

ಡಿಫೆಂಡಿಂಗ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಮುಂದಿನ ಐಪಿಎಲ್​ ಟೂರ್ನಿಯ ಪ್ರತಿಷ್ಠೆಯ ಕದನ. ಟೈಟಲ್ ಡಿಫೆಂಡ್ ಮಾಡಿಕೊಳ್ಳೋಕೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ. ಇಂದು ನಡೆಯೋ ಮಿನಿ ಹರಾಜಿನಲ್ಲಿ ತಂಡವನ್ನ ಮತ್ತಷ್ಟು ಬಲಿಷ್ಠಗೊಳಿಸೋಕೆ ರೆಡ್​ ಆರ್ಮಿ ರೆಡಿಯಾಗಿದೆ. ತಂಡದ ವೀಕ್​ನೆಸ್​​ ಮೇಲೆ ಫೋಕಸ್​ ಮಾಡಿರೋ ಆರ್​ಸಿಬಿ ಥಿಂಕ್​ ಟ್ಯಾಂಕ್ಸ್​​ ಹಲವು ಆಟಗಾರರ ಮೇಲೆ ಕಣ್ಣಿಟ್ಟಿದ್ದಾರೆ. 

ರಿಟೈನ್​ ಅವಕಾಶದಲ್ಲಿ 8 ಆಟಗಾರರನ್ನ ರಿಲೀಸ್​ ಮಾಡಿದ ಆರ್​​ಸಿಬಿ ತಂಡ 17 ಆಟಗಾರರನ್ನ ಉಳಿಸಿಕೊಂಡಿದೆ. 2 ವಿದೇಶಿ ಆಟಗಾರರು ಹಾಗೂ 6 ಭಾರತೀಯ ಆಟಗಾರರ ಸ್ಲಾಟ್​ ಸೇರಿ ಒಟ್ಟು 8 ಸ್ಲಾಟ್​ಗಳು ಬಾಕಿ ಉಳಿದಿವೆ. ಆರ್​​ಸಿಬಿಯ ಪರ್ಸ್​ನಲ್ಲಿ 16.4 ಕೋಟಿ ಹಣ ಬಾಕಿ ಉಳಿದಿದ್ದು, ಆ ಹಣದಲ್ಲೇ ಚೀಪ್​ ಮತ್ತು ಬೆಸ್ಟ್​ ಖರೀದಿಯನ್ನ ಎದುರುನೋಡ್ತಿದೆ. 

ಇದನ್ನೂ ಓದಿ: 77 ಸ್ಲಾಟ್ ಖಾಲಿ​​, 237.55 ಕೋಟಿ ರೂ ಹಣ! ಮಿನಿ ಆಕ್ಷನ್​ನ ಫುಲ್​​ ಡಿಟೇಲ್ಸ್..!

IPL Auction 2026

ಆಸಿಸ್​ ಮಿಸೈಲ್​ ಜೋಷ್​ ಹೇಜಲ್​ವುಡ್​ ಇಂಜುರಿ ಕಾಟದಿಂದ ಬಳಲ್ತಿದ್ದಾರೆ. ಪ್ರತಿಷ್ಠಿತ ಆ್ಯಷಸ್​ ಸರಣಿಯಂದಲೇ ಹೊರಗುಳಿದಿರೋ ಜೋಷ್​ ಹೇಜಲ್​ವುಡ್​, ಟಿ20 ವಿಶ್ವಕಪ್​ ವೇಳೆಗೆ ಕಮ್​ಬ್ಯಾಕ್​ ಮಾಡೋ ನಿರೀಕ್ಷೆಯಿದೆ. ಆದ್ರೂ ಫಿಟ್​ನೆಸ್​ ಬಗ್ಗೆ ಅನುಮಾನಗಳಿವೆ, ಹೀಗಾಗಿ ಹೇಜಲ್​ವುಡ್​ಗೆ ಬ್ಯಾಕ್​ಅಪ್​ ವೇಗಿಯೊಬ್ಬ ಆರ್​ಸಿಬಿಗೆ ಬೇಕಿದೆ. ಮತೀಶ ಪತಿರಣ, ಜೆರಾಲ್ಡ್​ ಕೋಟ್ಜಿ. ಮುಸ್ತಫಿಝುರ್​ ರೆಹಮಾನ್​ರಂತ ವಿದೇಶಿ ಪೇಸರ್​ಗಳ ಮೇಲೆ ರೆಡ್​ ಆರ್ಮಿಯ ಕಣ್ಣಿದೆ.

ಸ್ಪೆಷಲಿಸ್ಟ್​ ಸ್ಪಿನ್ನರ್ ಖರೀದಿ​

ಹಾಲಿ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬ್ಯಾಟಿಂಗ್​ ವಿಭಾಗದಲ್ಲಿ ಸಖತ್​ ಸ್ಟ್ರಾಂಗ್ ಇದೆ. ವೇಗಿಗಳ ಪಡೆ ಕೂಡ ಬಲಿಷ್ಠವಾಗಿದೆ. ಆದ್ರೆ ಸ್ಪಿನ್​ ವಿಭಾಗ ಹೇಳಿಕೊಳ್ಳುವಂತಿಲ್ಲ. ಮಿನಿ ಹರಾಜಿನಲ್ಲಿ ವೀಕ್​ನೆಸ್​ ಮೇಲೆ ವರ್ಕೌಟ್​ ಮಾಡೋಕೆ ಹೊರಟಿರೋ ರೆಡ್​ಆರ್ಮಿ ಸ್ಪೆಷಲಿಸ್ಟ್​ ಸ್ಪಿನ್ನರ್​ ಖರೀದಿಸೋಕೆ ಪ್ಲಾನ್​ ರೂಪಿಸಿದೆ. ಲಕ್ನೋ ತಂಡ ರಿಲೀಸ್​ ಮಾಡಿರೋ ರವಿ ಬಿಷ್ನೋಯ್​ ಖರೀದಿಗೆ ಹೆಚ್ಚು ಆಸಕ್ತಿಯನ್ನ ಹೊಂದಿದೆ. 

ಇದನ್ನೂ ಓದಿ: CSK ಯಿಂದ ಆಟಗಾರರ ಮಿನಿ ಹರಾಜಿಗೆ ಪ್ಲ್ಯಾನ್‌ : ಯಾರು ಅನ್ನು ಖರೀದಿಸುವ ಪ್ಲ್ಯಾನ್ ಇದೆ ಗೊತ್ತಾ?

RCB

2025ರ ಮೆಗಾ ಹರಾಜಿನಲ್ಲಿ ಆಲ್​​ರೌಂಡರ್​ ವೆಂಕಟೇಶ್​ ಅಯ್ಯರ್​ ಖರೀದಿಗೆ ಆರ್​​ಸಿಬಿ ಜಿದ್ದಿಗೆ ಬಿದ್ದು ಹೋರಾಡಿತ್ತು. ಬರೋಬ್ಬರಿ 23.50 ಕೋಟಿವರಗೆ ಬಿಡ್ ಮಾಡಿ ಸೋತಿತ್ತು. ಕಳೆದ ಸೀಸನ್​ನಲ್ಲಿ ಕೆಕೆಆರ್​ ಪಾಲಾಗಿದ್ದ ವೆಂಕಿ ಅಯ್ಯರ್​ ಇದೀಗ ಮತ್ತೆ ಆಕ್ಷನ್​ ಅಖಾಡದಲ್ಲಿದ್ದಾರೆ. ಭಾರತೀಯ ಪೇಸ್​ ಆಲ್​​ರೌಂಡರ್​ ಹುಡುಕಾಟದಲ್ಲಿರೋ ಆರ್​​ಸಿಬಿ ವೆಂಕಿ ಅಯ್ಯರ್​ಗೆ ಮತ್ತೆ ಬಿಡ್​ ಮಾಡೋ ಸಾಧ್ಯತೆಯಿದೆ. ಕಳೆದ ಸೀಸನ್​ನಲ್ಲಿ ವೆಂಕಿ ಫ್ಲಾಪ್​ ಶೋ ನೀಡಿರೋದ್ರಿಂದ ಹೆಚ್ಚು ಹಣಕ್ಕೆ ಬಿಡ್​ ಮಾಡೋದು ಡೌಟೇ.

ಭಾರತೀಯ ವೇಗಿಯೊಬ್ಬ ತಂಡಕ್ಕೆ ಬೇಕೆ ಬೇಕು

ವಿರೋಧದ ನಡುವೆಯೂ ಅತ್ಯಾಚಾರ ಆರೋಪಿ ಎಡಗೈ ವೇಗಿ ಯಶ್​ ದಯಾಳ್​ನ ಆರ್​​ಸಿಬಿ ರಿಟೈನ್​ ಮಾಡಿಕೊಂಡಿದೆ. ಯಶ್​ ದಯಾಳ್​ 2025ರ ಐಪಿಎಲ್ ಫೈನಲ್​ ಬಳಿಕ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ.  ಐಪಿಎಲ್​ನೊಳಗೆ ಆರೋಪದಿಂದ ಮುಕ್ತರಾಗದೇ ಇದ್ರೆ ಯಶ್​ ದಯಾಳ್​ ಬಿಸಿಸಿಐ ಆಡೋಕೆ ಅವಕಾಶ ನೀಡಲ್ಲ. ಹೀಗಾಗಿ ಯಶ್​ ದಯಾಳಗ್​ಗೆ ಬ್ಯಾಕ್​ ಅಪ್ ಪ್ಲೇಯರ್​ ಆಗಿ ಭಾರತೀಯ​ ವೇಗಿ ತಂಡಕ್ಕೆ ಬೇಕಿದೆ. ಯುವ ಆಟಗಾರರಾದ ಆಕಾಶ್​ ಮಧ್ವಾಲ್, ಕನ್ನಡಿಗ ವಿಧ್ವತ್​ ಕಾವೇರಪ್ಪ, ಸೀಮರ್ಜಿತ್​ ಸಿಂಗ್​ ಖರೀದಿಯ ಬಗ್ಗೆ ಮ್ಯಾನೇಜ್​ಮೆಂಟ್​ ವಲಯದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. 

ಇದನ್ನೂ ಓದಿ: ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಕಂಚು ಗೆದ್ದ ಕರ್ನಾಟಕ ತಂಡ : ಸಬ್ ಜ್ಯೂನಿಯರ್ ಹುಡುಗಿಯರ ತಂಡಕ್ಕೆ ಪ್ರಶಸ್ತಿ

RCB_WIN (1)

ಕನ್ನಡಿಗರ ಮೇಲಿದೆ ಮ್ಯಾನೇಜ್​ಮೆಂಟ್​ ಕಣ್ಣು

ಕಳೆದ ಸೀಸನ್​ನಲ್ಲಿ ರಿಪ್ಲೇಸ್​ಮೆಂಟ್​ ಪ್ಲೇಯರ್​ ಆಗಿ ಬಂದ ಮಯಾಂಕ್​ ಅಗರ್​ವಾಲ್​ ತಂಡ ಚಾಂಪಿಯನ್​ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ರು. ಮಯಾಂಕ್​ ಮತ್ತೆ ವಾಪಾಸ್​ ತಂಡಕ್ಕೆ ಸೇರಿಸಿಕೊಳ್ಳಲು ಆರ್​​ಸಿಬಿ ಹೆಚ್ಚು ಆಸಕ್ತಿ ಹೊಂದಿದೆ. ಜೊತೆಗೆ ಬಿಗ್​ ಹಿಟ್ಟರ್​ & ಫಿನಿಷರ್​ ಅಭಿನವ್​ ಮನೋಹರ್​ ಕೂಡ ಆಕ್ಷನ್​ ಅಖಾಡದಲ್ಲಿದ್ದಾರೆ. ಹೈದ್ರಾಬಾದ್​ ರಿಲೀಸ್​ ಮಾಡಿರೋ ಅಭಿನವ್​ ಮನೋಹರ್​ ಬೆಂಗಳೂರು ಖರೀದಿಸಲು ಯೋಜನೆ ಹಾಕಿಕೊಂಡಿದೆ. 

ತಂಡವನ್ನ ಬಲಿಷ್ಠಗೊಳಿಸೋಕೆ ಆರ್​​ಸಿಬಿ ಭರ್ಜರಿ ಪ್ಲಾನ್​ ಹಾಕಿಕೊಂಡು ಸಜ್ಜಾಗಿದೆ. ಆದ್ರೆ, ಆಕ್ಷನ್​ ಟೇಬಲ್​ನಲ್ಲಿ ಯಾವತ್ತೂ ಪ್ಲಾನ್​ ಪ್ರಕಾರ ಏನೂ ನಡೆಯಲ್ಲ. ಪರ್ಸ್​ನಲ್ಲಿರೋ ಡಿಸೆಂಟ್​ ಅಮೌಂಟ್​ನಲ್ಲಿ ಅಂದುಕೊಂಡಂತೆ ಆರ್​​ಸಿಬಿ ಬೆಸ್ಟ್  ಪ್ಲೇಯರ್​ಗಳನ್ನ ಪಿಕ್ ಮಾಡುತ್ತಾ? ಕಾದು ನೋಡೋಣ. 

ಇದನ್ನೂ ಓದಿ:ಆರ್​ಸಿಬಿಗೆ ಎದುರಾಯ್ತು ದೊಡ್ಡ ಚಾಲೆಂಜ್​.. ‘ಲೆಕ್ಕಾಚಾರ ಪಕ್ಕಾ ಇರಲಿ’ ಎಂದಿದ್ದೇಕೆ ಫ್ಯಾನ್ಸ್​..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tilak Varma RCB Phil Salt RCB RCB CARES IPL brand valuable RCB IPL 2026 auction ipl retention RCB retention IPL 2026 mini auction
Advertisment