/newsfirstlive-kannada/media/media_files/2025/12/16/ipl-auction-2026-2025-12-16-08-32-33.jpg)
ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​ನ ಮಿನಿ ಆಕ್ಷನ್​ಗೆ ಕೌಂಟ್​ಡೌನ್​ ಆರಂಭವಾಗಿದೆ. ಅಬುಧಾಬಿಯಲ್ಲಿ ಕೆಲವೇ ಗಂಟೆಗಳಲ್ಲಿ ಕೋಟಿ-ಕೋಟಿ ಲೆಕ್ಕದಲ್ಲಿ ಹಣದ ಹೊಳೆ ಹರಿಯಲಿದೆ. ಮಿನಿ ಆಕ್ಷನ್​ಗೆ ಫ್ರಾಂಚೈಸಿಗಳ ಸಿದ್ಧತೆ ಹೇಗಿದೆ? ಯಾವ ತಂಡದ ಪರ್ಸ್​ ಎಷ್ಟು ಕೋಟಿ ಇದೆ? ಎಷ್ಟು ಸ್ಲಾಟ್​ ಖಾಲಿ ಉಳಿದಿವೆ? ಮಿನಿ ಆಕ್ಷನ್​ನ ಫುಲ್​​ ಡಿಟೇಲ್ಸ್​ ಇಲ್ಲಿದೆ.
ಇಂಡಿಯನ್​ ಪ್ರೀಮಿಯರ್​ ಲೀಗ್​ ಮಿನಿ ಆಕ್ಷನ್​ ಕೌಂಟ್​​ಡೌನ್​ ಆರಂಭವಾಗಿದೆ. ಮುಂದಿನ ಸೀಸನ್​ಗೆ ತಂಡವನ್ನ ಬಲಿಷ್ಠಗೊಳಿಸೋಕೆ ಸಜ್ಜಾಗಿರೋ ಫ್ರಾಂಚೈಸಿಗಳು ಮಿನಿ ಆಕ್ಷನ್​ನಲ್ಲಿ ವೀಕ್​​ನೆಸ್​ಗಳ ಮೇಲೆ ವರ್ಕೌಟ್​ ಮಾಡೋಕೆ ಮುಂದಾಗಿವೆ. ವಾರದಿಂದಲೇ ಭರ್ಜರಿ ಸಭೆಗಳನ್ನ ನಡೆಸಿರೋ ಫ್ರಾಂಚೈಸಿಗಳು ಫ್ಯೂಚರ್​​ ಪ್ಲಾನ್​​ನೊಂದಿಗೆ ಆಕ್ಷನ್​ ಅಖಾಡಕ್ಕಿಳಿಯಲು ಸಜ್ಜಾಗಿವೆ.
77 ಸ್ಲಾಟ್ ಖಾಲಿ​​, 237.55 ಕೋಟಿ ಹಣ ಬಾಕಿ
ಮಿನಿ ಆಕ್ಷನ್​ಗೆ ದೇಶ-ವಿದೇಶಗಳಿಂದ ಬರೋಬ್ಬರಿ 1335 ಮಂದಿ ಆಟಗಾರರು ರಿಜಿಸ್ಟರ್​ ಮಾಡಿಕೊಂಡಿದ್ರು. ಆಟಗಾರರ ಹೆಸರನ್ನ ಫಿಲ್ಟರ್​ ಮಾಡಿರೋ ಬಿಸಿಸಿಐ, ಕೇವಲ 350 ಆಟಗಾರರ ಹೆಸರನ್ನ ಶಾರ್ಟ್​ ಲಿಸ್ಟ್​ ಮಾಡಿದೆ. ಈ ಪೈಕಿ 16 ಮಂದಿ ಕ್ಯಾಪ್ಡ್​ ಇಂಡಿಯನ್​ ಪ್ಲೇಯರ್ಸ್​ ಆದ್ರೆ, 96 ಮಂದಿ ಕ್ಯಾಪ್ಡ್​ ಫಾರಿನ್​ ಆಟಗಾರರಿದ್ದಾರೆ. 224 ಮಂದಿ ಅನ್​ಕ್ಯಾಪ್ಡ್​ ಇಂಡಿಯನ್ಸ್​ ಹಾಗೂ 14 ಮಂದಿ ಅನ್​ಕ್ಯಾಪ್ಡ್​ ಫಾರಿನ್​ ಪ್ಲೇಯರ್ಸ್​ ಇದ್ದಾರೆ. 350 ಆಟಗಾರರು ಹರಾಜಿನ ಕಣದಲ್ಲಿದ್ರೂ 77 ಸ್ಲಾಟ್ ಮಾತ್ರ​ ಖಾಲಿ ಉಳಿದಿದೆ. 10 ಫ್ರಾಂಚೈಸಿಗಳಿಂದ ಒಟ್ಟು 237.55 ಕೋಟಿ ಹಣ ಬಾಕಿ ಉಳಿದಿದೆ.
ಇದನ್ನೂ ಓದಿ: ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಕಂಚು ಗೆದ್ದ ಕರ್ನಾಟಕ ತಂಡ : ಸಬ್ ಜ್ಯೂನಿಯರ್ ಹುಡುಗಿಯರ ತಂಡಕ್ಕೆ ಪ್ರಶಸ್ತಿ
/filters:format(webp)/newsfirstlive-kannada/media/media_files/2025/12/16/ipl-auction-2026-2025-12-16-08-32-33.jpg)
ಮಿನಿ ಆಕ್ಷನ್​ನ ಸೆಂಟರ್​ ಆಫ್​​ ಅಟ್ರಾಕ್ಷನ್ನೆ ಸಿಎಸ್​ಕೆ ಹಾಗೂ ಕೆಕೆಆರ್​. ಆಕ್ಷನ್​ಗೂ ಮುನ್ನ ತಂಡಕ್ಕೆ ಮೇಜರ್​ ಸರ್ಜರಿ ಮಾಡಿರೋ ಕೊಲ್ಕತ್ತಾ ನೈಟ್​ ರೈಡರ್ಸ್​, ಚೆನ್ನೈ ಸೂಪರ್​ ಕಿಂಗ್ಸ್​​ ಬಿಗ್​ ಪರ್ಸ್​ನೊಂದಿಗೆ ಆಟಗಾರರ ಹರಾಜಿಗೆ ಸಿದ್ಧವಾಗಿದೆ. ಕಳೆದ ಸೀಸನ್​ನಲ್ಲಿ ಹೀನಾಯ ಪರ್ಫಾಮೆನ್ಸ್​ ನೀಡಿದ್ದ ತಂಡಗಳು ಈ ಸೀಸನ್​ನಲ್ಲಿ ಬ್ಯಾಲೆನ್ಸ್​ಡ್​ ಟೀಮ್​ ಕಟ್ಟೋ ಲೆಕ್ಕಾಚಾರದಲ್ಲಿವೆ. ಮುಂಬೈ ಇಂಡಿಯನ್ಸ್​ ತಂಡ ಅತಿ ಕಡಿಮೆ ಪರ್ಸ್​ನೊಂದಿಗೆ ಮಿನಿ ಆಕ್ಷನ್​ಗೆ ಸಜ್ಜಾಗಿದೆ.
ಮಿನಿ ಆಕ್ಷನ್​ ಲೆಕ್ಕಾಚಾರ
ಕೆಕೆಆರ್​ ತಂಡದ ಪರ್ಸ್​ನಲ್ಲಿ 64.3 ಕೋಟಿ ಹಣ ಬಾಕಿ ಉಳಿದಿದ್ದು 13 ಸ್ಲಾಟ್​ಗಳು ಖಾಲಿ ಇವೆ. ಸಿಎಸ್​​ಕೆ ಅಕೌಂಟ್​ನಲ್ಲಿ 43.4 ಕೋಟಿ ಬಾಕಿ ಉಳಿದಿದ್ದು, 9 ಸ್ಲಾಟ್​ಗಳು ಖಾಲಿ ಉಳಿದಿವೆ. 10 ಸ್ಲಾಟ್​ಗಳು ಖಾಲಿ ಇರೋ ಸನ್​ರೈಸರ್ಸ್​ ಹೈದ್ರಾಬಾದ್​ ಬಳಿ 25.5 ಕೋಟಿ, 6 ಸ್ಲಾಟ್​ ಖಾಲಿ ಇರೋ ಲಕ್ನೋ ಸೂಪರ್​ ಜೈಂಟ್ಸ್​ ಬಳಿ 22.95 ಕೋಟಿ ಹಾಗೂ 8 ಸ್ಲಾಟ್​​ ಹೊಂದಿರೋ ಡೆಲ್ಲಿ ಕ್ಯಾಪಿಟಲ್ಸ್​ ಬಳಿ 21.8 ಕೋಟಿ ಹಣ ಉಳಿದಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಲಿಯೋನೆಲ್ ಮೆಸ್ಸಿ ಭೇಟಿಗೆ 1 ಕೋಟಿ ಖರ್ಚು ಮಾಡಿದ ಶ್ರೀಮಂತರು! : ಮೋದಿ, ಕೋಹ್ಲಿ ಸೇರಿ ಗಣ್ಯರ ಭೇಟಿ ನಿಗದಿ
/filters:format(webp)/newsfirstlive-kannada/media/media_files/2025/09/01/ipl_teams-2025-09-01-14-21-24.jpg)
ಮಿನಿ ಆಕ್ಷನ್​ ಲೆಕ್ಕಾಚಾರ
ತಂಡ | ಹಣ (ಕೋಟಿ ಲೆಕ್ಕದಲ್ಲಿ) | ಸ್ಲಾಟ್ |
| ರಾಜಸ್ಥಾನ್ ರಾಯಲ್ಸ್ | 16.5 | 9 |
| ಆರ್​ಸಿಬಿ | 16.4 | 8 |
| ಪಂಜಾಬ್ ಕಿಂಗ್ಸ್ | 11.5 | 4 |
| ಗುಜರಾತ್ ಟೈಟನ್ಸ್ | 12.9 | 5 |
| ಮುಂಬೈ ಇಂಡಿಯನ್ಸ್​ | 2.75 | 5 |
2 ಕೋಟಿ ಮೂಲ ಬೆಲೆಯಲ್ಲಿ 40 ಆಟಗಾರರು
ಹೈಯೆಸ್ಟ್​​ ಬೇಸ್​​ ಪ್ರೈಸ್​ 2 ಕೋಟಿ ಮೂಲ ಬೆಲೆಗೆ 40 ಮಂದಿ ಆಟಗಾರರು ಹರಾಜಿಗೆ ತಮ್ಮ ಹೆಸರನ್ನ ನೊಂದಾಯಿಸಿಕೊಂಡಿದ್ದಾರೆ. ಅಚ್ಚರಿಯಂದ್ರೆ, ಈ 40 ಆಟಗಾರರ ಪೈಕಿ ಇಬ್ಬರು ಮಾತ್ರ ಭಾರತೀಯ ಆಟಗಾರರಾಗಿದ್ದಾರೆ. ವೆಂಕಟೇಶ್​ ಅಯ್ಯರ್​ ಹಾಗೂ ಸ್ಪಿನ್ನರ್​ ರವಿ ಬಿಷ್ನೋಯ್​​ 2 ಕೋಟಿ ಮೂಲ ಬೆಲೆಗೆ ಹರಾಜಿಗೆ ನೊಂದಾಯಿಸಿಕೊಂಡಿದ್ದಾರೆ. ಇನ್ನು, ಒಂದೂವರೆ ಕೋಟಿ ಮೂಲ ಬೆಲೆಯಲ್ಲಿ 9, 1.25 ಕೋಟಿಗೆ 4, 1 ಕೋಟಿಗೆ 17, 75 ಲಕ್ಷಕ್ಕೆ 42, 50 ಲಕ್ಷಕ್ಕೆ 4, 40 ಲಕ್ಷಕ್ಕೆ 7 ಹಾಗೂ 30 ಲಕ್ಷ ಬೇಸ್​​ ಪ್ರೈಸ್​ಗೆ 227 ಮಂದಿ ಆಟಗಾರರು ಹರಾಜಿಗಿದ್ದಾರೆ.
ಹರಾಜಿನ ಕಣದಲ್ಲಿ 14 ಮಂದಿ ಕನ್ನಡಿಗರು
ಕರ್ನಾಟಕದ ಆಟಗಾರರು ಕೂಡ ಐಪಿಎಲ್​ ಮಿನಿ ಹರಾಜಿನಲ್ಲಿ ಅದೃಷ್ಠ ಪರೀಕ್ಷೆಗಿಳಿದಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಶನ್​ನ 14 ಮಂದಿ ಆಟಗಾರರು ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ. ಮಯಾಂಕ್​ ಅಗರ್​ವಾಲ್​, ಅಭಿನವ್​ ಮನೋಹರ್​, ವಿಧ್ವತ್​ ಕಾವೇರಪ್ಪ, ಮನೋಜ್​ ಬಾಂಡಗೆ ಆಕ್ಷನ್​ ಅಖಾಡದಲ್ಲಿರೋ ಪ್ರಮುಖ ಆಟಗಾರರಾಗಿದ್ದಾರೆ. 75 ಲಕ್ಷ ಮೂಲ ಬೆಲೆಗೆ ಹರಾಜಿಗಿರೋ ಮಯಾಂಕ್ ಅಗರ್​ವಾಲ್​​ ಖರೀದಿಗೆ ಆರ್​​ಸಿಬಿ ಆಸಕ್ತಿ ಹೊಂದಿದೆ.
ಇದನ್ನೂ ಓದಿ: CSK ಯಿಂದ ಆಟಗಾರರ ಮಿನಿ ಹರಾಜಿಗೆ ಪ್ಲ್ಯಾನ್ : ಯಾರು ಅನ್ನು ಖರೀದಿಸುವ ಪ್ಲ್ಯಾನ್ ಇದೆ ಗೊತ್ತಾ?
ಇಂದು ನಡೆಯೋದು ಮಿನಿ ಆಕ್ಷನ್ನೇ ಆದ್ರೂ ಅಭಿಮಾನಿಗಳಲ್ಲಿ ವಿಶೇಷವಾದ ಕುತೂಹಲವನ್ನ ಹುಟ್ಟುಹಾಕಿದೆ. ಬಿಗ್​ ಪರ್ಸ್​ ಹೊಂದಿರೋ ಕೆಕೆಆರ್​, ಸಿಎಸ್​ಕೆ ಯಾರನ್ನ ಖರೀದಿಸುತ್ತೆ.? ಕೇವಲ 2.75 ಕೋಟಿ ಹೊಂದಿರೋ ಮುಂಬೈನ ಆಕ್ಷನ್​ ಲೆಕ್ಕಾಚಾರ ಏನು.? ಆರ್​​ಸಿಬಿ ತಂಡದ ಟಾರ್ಗೆಟ್​ ಯಾರು.? ಹೀಗೆ ಹಲವು ಕುತೂಹಲದ ಪ್ರಶ್ನೆಗಳು ಫ್ಯಾನ್ಸ್​ ಮನದಲ್ಲಿವೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us