/newsfirstlive-kannada/media/media_files/2025/11/05/rcb-2025-11-05-13-13-50.jpg)
ಡಿಫೆಂಡಿಂಗ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಐಪಿಎಲ್ ಸೀಸನ್-19 ಪ್ರತಿಷ್ಟೆಯ ಟೂರ್ನಿಯಾಗಿದೆ. ಒಂದೆಡೆ ಟೈಟಲ್ ಡಿಫೆಂಡ್ ಮಾಡಿಕೊಳ್ಳೋದು ಆರ್​ಸಿಬಿ ಮುಂದಿರೋ ದೊಡ್ಡ ಸವಾಲಾದ್ರೆ ಮತ್ತೊಂದೆಡೆ ಮಿನಿ ಹರಾಜಿನಲ್ಲಿ ಲೆಕ್ಕಾಚಾರ ಹಾಕಿ ಆಟಗಾರರನ್ನ ಖರೀದಿ ಮಾಡೋದು ಬೆಂಗಳೂರು ತಂಡಕ್ಕೆ ಬಿಗ್ ಟಾಸ್ಕ್ ಆಗಿದೆ.
ತಂಡದಲ್ಲಿ ಖಾಲಿ ಇರುವ ಸ್ಲಾಟ್ ಎಷ್ಟು?
ಮಿನಿ ಹರಾಜಿಗೂ ಮುನ್ನ ಆರ್​ಸಿಬಿ 17 ಆಟಗಾರರನ್ನ ರೀಟೇನ್ ಮಾಡಿಕೊಂಡಿದೆ. 8 ಮಂದಿ ಆಟಗಾರರನ್ನ ತಂಡದಿಂದ ರಿಲೀಸ್ ಮಾಡಿದೆ. ಸದ್ಯ ತಂಡದಲ್ಲಿ 8 ಸ್ಲಾಟ್​​ಗಳು ಖಾಲಿ ಇವೆ. ಅದ್ರಲ್ಲಿ ಇಬ್ಬರು ವಿದೇಶಿ ಆಟಗಾರರು ಮತ್ತು 6 ಮಂದಿ ಭಾರತೀಯ ಆಟಗಾರರನ್ನ ಬೆಂಗಳೂರು ತಂಡ ಖರೀದಿಸಬೇಕಿದೆ.
ಇದನ್ನೂ ಓದಿ: ಮೆಸ್ಸಿ ಭಾರತಕ್ಕೆ ಬಂದ ವಿಮಾನದ ಬೆಲೆ 1 ಬಿಲಿಯನ್ ಡಾಲರ್! ಬೆರಗುಗೊಳಿಸುವ ಸೌಕರ್ಯಗಳು..!
ಖಾಲಿ ಇರುವ 8 ಮಂದಿ ಆಟಗಾರರ ಸ್ಲಾಟ್​​ಗೆ ಆರ್​ಸಿಬಿ ಅಕೌಂಟ್​ನಲ್ಲಿ ಉಳಿದಿರೋದು, 16.4 ಕೋಟಿ ರೂಪಾಯಿ. ಇರೋ ಹಣದಲ್ಲಿ ಆರ್​ಸಿಬಿ ಎಚ್ಚರಿಕೆಯಿಂದ ಆಟಗಾರರನ್ನ ಖರೀದಿಸಬೇಕಿದೆ. ತಂಡಕ್ಕೆ ಬೇಕಾಗಿರೋ ಆಟಗಾರರನ್ನ ಖರೀದಿಸಿದ್ರೆ ರಾಯಲ್ ಚಾಲೆಂಜರ್ಸ್​ ಮತ್ತಷ್ಟು ಸ್ಟ್ರಾಂಗ್ ಆಗಲಿದೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ, ಯಾವುದೇ ಪ್ರಾಬ್ಲಂ ಇಲ್ಲ. ಲೆಕ್ಕಾಚಾರ ಹಾಕಿ ಆಟಗಾರರನ್ನ ರೀಟೇನ್ ಌಂಡ್ ರಿಲೀಸ್ ಮಾಡಿರುವ ಆರ್​ಸಿಬಿ, ಆಲ್​ಮೋಸ್ಟ್ ಎಲ್ಲಾ ರೋಲ್​ಗಳನ್ನ ಕವರ್ ಮಾಡಿದೆ. ಸ್ಪಿನ್ ಮತ್ತು ಪೇಸ್​​​​ ಅಟ್ಯಾಕ್​ ಅನ್ನ ಸ್ವಲ್ಪ ಟಿಂಕರ್ ಮಾಡಿದ್ರೆ, ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಟವಾಗಿ ಕಾಣಲಿದೆ.
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಬ್ಯಾಟಿಂಗ್​ನಲ್ಲಿ ಸಖತ್ ಸ್ಟ್ರಾಂಗ್ ಆಗಿದೆ. ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಜತ್ ಪಟಿದಾರ್​​ರಂತಹ ಸಾಲಿಡ್ ಟಾಪ್ ಆರ್ಡರ್ ಬ್ಯಾಟರ್ಸ್, ತಂಡದ ಬಲ​ ಹೆಚ್ಚಿಸಿದ್ದಾರೆ. ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮೆರಿಯೋ ಶರ್ಪರ್ಡ್​​, ಆರ್​ಸಿಬಿಯ ಲೋವರ್ ಮಿಡಲ್ ಆರ್ಡರ್ ಸ್ಟ್ರೆಂಥ್ ಹೆಚ್ಚಿಸಿದ್ದಾರೆ. ಈ ತ್ರಿಮೂರ್ತಿಗಳು ತಂಡಕ್ಕೆ ಬ್ಯಾಟಿಂಗ್ ಡೆಪ್ತ್​​​​​​​​​​​​​​​​​​​ ನೀಡೋದಲ್ಲದೇ, ಗ್ರೇಟ್ ಫಿನಿಷರ್​ಗಳಾಗಿ ಕೂಡ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: 30,000 ಅಡಿ ಎತ್ತರದಲ್ಲಿದ್ದ ವಿಮಾನ.. ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಗೆ CPR ಮಾಡಿ ಜೀವ ಉಳಿಸಿದ ನಿಂಬಾಳ್ಕರ್..!
ಕೃನಾಲ್ ಪಾಂಡ್ಯ, ಸುಯೆಷ್ ಶರ್ಮಾ, ಸ್ವಪ್ನಿಲ್ ಸಿಂಗ್, ಜೇಕಬ್ ಬೆಥಲ್​​, ಬೆಂಗಳೂರು ತಂಡದ ಸ್ಪಿನ್ ಡಿಪಾರ್ಟ್​ಮೆಂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆರ್​ಸಿಬಿ ಸ್ಪಿನ್ ಡೀಸೆಂಟ್ ಆಗಿ ಕಂಡರೂ, ತಂಡಕ್ಕೆ ಮತ್ತೋರ್ವ ಕ್ವಾಲಿಟಿ ಸ್ಪಿನ್ನರ್ ಅಥವಾ ಸ್ಪಿನ್ ಆಲ್​ರೌಂಡರ್ ಅವಶ್ಯಕತೆ ಇದೆ. ಹರಾಜಿನಲ್ಲಿ ಆ ಸ್ಲಾಟ್ ಫಿಲ್ ಮಾಡಬೇಕಿದೆ. ಆರ್​ಸಿಬಿ ತಂಡದಲ್ಲಿ ಅನುಭವಿ ಮತ್ತು ಯುವ ವೇಗಿಗಳಿದ್ದಾರೆ. ಆಸಿಸ್​​ ಗ್ರೇಟ್ ಜೋಷ್​ ಹೇಝಲ್​ವುಡ್, ಇಂಡಿಯನ್ ಲೆಜೆಂಡ್ ಭುವನೇಶ್ವರ್ ಕುಮಾರ್, ಲಂಕಾದ ನುವಾನ್ ತುಷಾರ, ಭಾರತದ ಯಶ್ ದಯಾಳ್ ಮತ್ತು ರಸಿಕ್ ಧರ್ ಇದ್ದಾರೆ. ಆದ್ರೆ ವರ್ಕ್​ಲೋಡ್, ಏಜ್, ಇನ್​ಎಕ್ಸ್​ಪೀರಿಯನ್ಸ್​​ ಎಲ್ಲವನ್ನೂ ಗಮನಿಸಿದ್ರೆ, ಬೆಂಗಳೂರು ತಂಡಕ್ಕೆ ಒಬ್ಬ ಹೈ ಎಂಡ್ ಪೇಸರ್ ಅತ್ಯಾವಶಕವಾಗಿದೆ.
ಮಿನಿ ಹರಾಜಿನಲ್ಲಿ ಆರ್​ಸಿಬಿ ಬಾಕಿ ಉಳಿದಿರೋ ಹಣದಲ್ಲಿ ಬೆಸ್ಟ್ ಪ್ಲೇಯರ್​ಗಳನ್ನ ಪಿಕ್ ಮಾಡಬೇಕಿದೆ. ಆಕ್ಷನ್​ನಲ್ಲಿ ಆರ್​ಸಿಬಿ ಮುಂದಿರೋ ದೊಡ್ಡ ಸವಾಲೆಂದ್ರೆ ಲೋಕಲ್ ಪ್ಲೇಯರ್​ಗಳನ್ನ ಖರೀದಿ ಮಾಡೋದು..!
ಇದನ್ನೂ ಓದಿ: ಕೊಹ್ಲಿ ಬ್ಯಾಟಿಂಗ್ ಆರ್ಡರ್ ಸ್ಥಾನ ತುಂಬಲು ತಂಡಕ್ಕೆ ಸಿಕ್ಕೇ ಬಿಟ್ರು ಭಲೇ ಆಟಗಾರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us