/newsfirstlive-kannada/media/media_files/2025/10/25/virat-kohli-1-2025-10-25-15-03-19.jpg)
ವಿರಾಟ್ ಕೊಹ್ಲಿ ಅಂದ್ರೆ ನಂಬರ್ 3. ನಂಬರ್ 3 ಅಂದ್ರೆ ವಿರಾಟ್ ಕೊಹ್ಲಿ ಅನ್ನೋ ಮಾತಿತ್ತು. ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ಮೇಲೆ ಆ ಸ್ಲಾಟ್​​ಗೆ ಯಾರು ಅನ್ನೋ ಪ್ರಶ್ನೆ ಹಲವಾರು ಭಾರಿ ಮೂಡಿತ್ತು. ಉತ್ತರ ಮಾತ್ರ ಸಿಕ್ಕಿರಲಿಲ್ಲ. ಆದ್ರೀಗ ಕೊಹ್ಲಿ ಸ್ಥಾನ ತುಂಬಲು ಒಬ್ಬ ಆಟಗಾರ ಪರ್ಫೆಕ್ಟ್ ಆಗಿದ್ದಾನೆ.
ಸ್ಟೈಲಿಶ್, ಡೇರಿಂಗ್, ಅಗ್ರೆಸಿವ್, ಫಿಯರ್​ಲೆಸ್ ಕ್ರಿಕೆಟಿಗ 23 ವರ್ಷದ ತಿಲಕ್ ವರ್ಮಾ ಸದ್ಯ ಸೆನ್ಸೇಷನ್ ಸೃಷ್ಟಿಸುತ್ತಿದ್ದಾರೆ. ಟಿ-20 ಕ್ರಿಕೆಟ್​​ಗೆ ಹೇಳಿ ಮಾಡಿಸಿದಂತಿರುವ ಹೈದ್ರಾಬಾದ್ ಬ್ಯಾಟರ್, ಬೌಲರ್​ಗಳನ್ನ ಧೂಳಿಪಟ ಮಾಡ್ತಿದ್ದಾರೆ. ತಿಲಕ್ ಬ್ಯಾಟಿಂಗ್ ಅಬ್ಬರಕ್ಕೆ, ಎದುರಾಳಿಗಳು ಕೊಚ್ಚಿ ಹೋಗ್ತಿದ್ದಾರೆ. ತಿಲಕ್ ರನ್​ ಸುನಾಮಿಗೆ, ಸ್ಕೋರ್ ಬೋರ್ಡ್ ನಿಂತೇ ಹೋಗಿದೆ.
ಇದನ್ನೂ ಓದಿ: 30,000 ಅಡಿ ಎತ್ತರದಲ್ಲಿದ್ದ ವಿಮಾನ.. ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಗೆ CPR ಮಾಡಿ ಜೀವ ಉಳಿಸಿದ ನಿಂಬಾಳ್ಕರ್..!
/filters:format(webp)/newsfirstlive-kannada/media/media_files/2025/12/12/tilak-varma-2025-12-12-07-59-04.jpg)
ಕೊಹ್ಲಿಯ ನಂತರ ಟೀಮ್ ಇಂಡಿಯಾಕ್ಕೆ ನಂಬರ್ 3 ಪ್ರಾಬ್ಲಂ ಎದುರಾಗಿತ್ತು. ಟಿ-20 ವಿಶ್ವಕಪ್ ಗೆಲುವಿನ ಬಳಿಕ ಟೀಮ್ ಮ್ಯಾನೇಜ್ಮೆಂಟ್, 8 ಬ್ಯಾಟ್ಸ್​ಮನ್​ಗಳನ್ನ ಆ ಸ್ಲಾಟ್​ನಲ್ಲಿ ಆಡಿಸಿ ಎಕ್ಸ್​ಪೀರಿಮೆಂಟ್ ಮಾಡಿತ್ತು. ಆದ್ರೆ ನಂಬರ್ 3 ಸ್ಲಾಟ್​​ನಲ್ಲಿ ಯಾರೂ ಪಾಸಾಗಿರಲಿಲ್ಲ. ಯಂಗ್ ತಿಲಕ್ ವರ್ಮಾ, ಆ ಸ್ಲಾಟ್​​ನಲ್ಲಿ ಅಬ್ಬರಿಸ್ತಿದ್ದಾರೆ.​​ ನಂಬರ್.3 ಸ್ಲಾಟ್​​ ನನ್ನದೇ ಅಂತಿದ್ದಾರೆ.
ನ್ಯೂ ಚಂಡೀಗಢ ಟಿ-20 ಪಂದ್ಯದಲ್ಲಿ ತಿಲಕ್ ವರ್ಮಾ ಏಕಾಂಗಿ ಹೋರಾಟ ನಡೆಸಿದ್ರು. ಆ ಪಂದ್ಯವನ್ನ ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ. 34 ಎಸೆತಗಳಲ್ಲಿ 62 ರನ್ ಚಚ್ಚಿದ ತಿಲಕ್​​ಗೆ, ಸಾಥ್ ಕೊಡೋರೇ ಇರ್ಲಿಲ್ಲ. ಒಂದು ವೇಳೆ ತಿಲಕ್​ ಜೊತೆ ಯಾರಾದ್ರೂ ನಿಂತಿದ್ರೆ ಕಥೆನೇ ಬೇರೆಯಾಗ್ತಿತ್ತು. ಹರಿಣಗಳ ಬೇಟೆಯಾಡೋದು ಅಂದ್ರೆ ತಿಲಕ್​ಗೆ ತುಂಬಾ ಇಷ್ಟ. ಕಳೆದ 4 ಟಿ-20 ಪಂದ್ಯಗಳಲ್ಲಿ ತಿಲಕ್ 2 ಶತಕ, 1 ಅರ್ಧಶತಕ ಸೇರಿದಂತೆ ಒಟ್ಟು 324 ರನ್​ ಸಿಡಿಸಿದ್ದಾರೆ. ಆಫ್ರಿಕಾ ವಿರುದ್ಧ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈ ಮಾತು ನೂರಕ್ಕೆ ನೂರು ಸತ್ಯ. ಹೈದ್ರಾಬಾದ್ ಬ್ಯಾಟರ್ ಕ್ರಿಸ್​​ನಲ್ಲಿದ್ರೆ ರನ್​ ಮಳೆ ಪಕ್ಕಾ. ಕಳೆದೊಂದು ವರ್ಷದಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿರುವ ತಿಲಕ್, ಟಿ-20 ಕ್ರಿಕೆಟ್​ನಲ್ಲಿ ಶ್ರೇಷ್ಟ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. 2 ಶತಕ, 5 ಶತಕ ಸಿಡಿಸಿರುವ ತಿಲಕ್, 47 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಹಾಗೆ ತಿಲಕ್ ಸ್ಟ್ರೈಕ್​ರೇಟ್ ಆಲ್​ಮೋಸ್ಟ್ 150 ಇದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಏಕದಿನ ಕ್ರಿಕೆಟ್​ನಲ್ಲಿ ಕಿಂಗ್ ಕೊಹ್ಲಿ ಮಾಡ್ರನ್ ಡೇ ಕ್ರಿಕೆಟ್​​ನ ಚೇಸ್ ಮಾಸ್ಟರ್ ಎನಿಸಿಕೊಂಡಿದ್ರು. ಟಿ-20 ಕ್ರಿಕೆಟ್​ನಲ್ಲಿ ತಿಲಕ್ ವರ್ಮಾ, ಚೇಸ್ ಮಾಸ್ಟರ್​ ಆಗಿದ್ದಾರೆ. ಕಳೆದ 11 ಇನ್ನಿಂಗ್ಸ್​ಗಳಲ್ಲಿ ಚೇಸಿಂಗ್​ನಲ್ಲಿ 4 ಅರ್ಧಶತಗಳನ್ನ ಸಿಡಿಸಿರುವ ತಿಲಕ್, 5 ಬಾರಿ ಮ್ಯಾಚ್ ಫಿನಿಷ್ ಮಾಡಿ ನಾಟೌಟ್ ಆಗಿ ಉಳಿದುಕೊಂಡಿದ್ದಾರೆ.
ಫಿನಿಷರ್, ಗೇಮ್ ಚೇಂಜರ್​​​ ತಿಲಕ್
ಟಿ-20 ಕ್ರಿಕೆಟ್​ನಲ್ಲಿ ತಿಲಕ್ ವರ್ಮಾ ಎಂಥಹ ಬ್ಯಾಟರ್ ಅನ್ನೋದು ಕಳೆದ ಏಷ್ಯಾಕಪ್​ನಲ್ಲಿ ತಿಳಿಯಿತು. ಫೈನಲ್​​ನಲ್ಲಿ ಪಾಕ್ ದಾಳಿಯನ್ನ ಧೂಳಿಪಟ ಮಾಡಿದ ತಿಲಕ್, ಸಿಂಗಲ್ ಹ್ಯಾಂಡ್​​ ಆಗಿ ಗೇಮ್ ಫಿನಿಷರ್ ಮಾಡಿದ್ರು. ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿ ಗೇಮ್ ಚೇಂಜರ್ ಎನಿಸಿಕೊಂಡ್ರು. ಮುಂಬರುವ ಟಿ-20 ವಿಶ್ವಕಪ್​​ನಲ್ಲಿ ತಿಲಕ್, ತಂಡದ ಮ್ಯಾಚ್ ವಿನ್ನರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಹೈದ್ರಾಬಾದ್ ಹೀರೋ ತಿಲಕ್, ರೇರ್ ಟ್ಯಾಲೆಂಟ್. ತಿಲಕ್​ಗೆ ಕೇವಲ ಟ್ಯಾಲೆಂಟ್ ಅಷ್ಟೇ ಅಲ್ಲ. ಸ್ಮಾರ್ಟ್ ಗೇಮ್ ಆಡುವ ತಲೆ ಕೂಡ ಇದೆ. ಹಾಗಾಗೇ ತಿಲಕ್, ಸದ್ಯ ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ಆಗಿ ಶೈನ್ ಆಗ್ತಿರೋದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us