30,000 ಅಡಿ ಎತ್ತರದಲ್ಲಿದ್ದ ವಿಮಾನ.. ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಗೆ CPR ಮಾಡಿ ಜೀವ ಉಳಿಸಿದ ನಿಂಬಾಳ್ಕರ್..!

ಅಂಜಲಿ ನಿಂಬಾಳ್ಕರ್​ ಅವರು ವಿದೇಶಿ ಮಹಿಳೆಯೊಬ್ಬರ ಪ್ರಾಣ ಉಳಿಸಿದ ಪುಣ್ಯ ಕಟ್ಕೊಂಡಿದ್ದಾರೆ. ಇನ್ನೇನು ವಿಮಾನದಲ್ಲೇ ಜೀವ ಹೋಯ್ತು ಎಂದು ಬೊಬ್ಬೆ ಹೊಡೆಯುತ್ತಿರುವಾಗ, ದೇವರಂತೆ ಬಂದ ನಿಂಬಾಳ್ಕರ್​, ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

author-image
Ganesh Kerekuli
Anajli Nimbalkar
Advertisment

ಮಾಜಿ ಶಾಸಕಿ, ವೈದ್ಯೆ ಅಂಜಲಿ ನಿಂಬಾಳ್ಕರ್ (Anjali Nimbalkar) ಅವರ ಈ ಮಾನವೀಯತೆ ಸೇವೆಗೆ ನೀವು ಸೆಲ್ಯೂಟ್ ಹೊಡೆಯಲೇಬೇಕು. ವಿಮಾನ ಹಾರಾಟದ ಅವಧಿಯಲ್ಲಿ, ಆಕಾಶಮಧ್ಯದಲ್ಲಿ ಪ್ರಾಣ ಸಂಕಷ್ಟಕ್ಕೆ ಸಿಲುಕಿದ್ದ ವಿದೇಶಿ ಮಹಿಳೆಯೊಬ್ಬರ ಜೀವ ಉಳಿಸಿ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ. ಅಂಜಲಿ ನಿಂಬಾಳ್ಕರ್​ ಅವರ ಈ ಪುಣ್ಯದ ಕೆಲಸಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಗಿದ್ದೇನು..? 

ಕಾಂಗ್ರೆಸ್​ ಇವತ್ತು ದೆಹಲಿಯಲ್ಲಿ ‘ವೋಟ್ ಚೋರಿ’ ವಿರುದ್ಧ ಪ್ರತಿಭಟನೆ ನಡೆಸ್ತಿದೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ಅಂಜಲಿ ನಿಂಬಾಳ್ಕರ್ ನಿನ್ನೆ ಗೋವಾ ದಿಂದ ದೆಹಲಿಗೆ ಪ್ರಯಾಣಿಸಿದ್ದರು. ವಿಮಾನವು ಸುಮಾರು 30 ಸಾವಿರ ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿತ್ತು. ಈ ವೇಳೆ ಅಮೆರಿಕನ್ ಜೆನ್ನಿ ಎಂಬ ಮಹಿಳೆ ಒಬ್ಬರು ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ಇದರಿಂದ ಇತರೆ ಪ್ರಯಾಣಿಕರು, ಗಾಬರಿಯಾಗಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಅಂಜಲಿ ನಿಂಬಾಳ್ಕರ್, ತಮ್ಮ ಜಾಗದಿಂದ ಅಲ್ಲಿಗೆ ದೌಡಾಯಿಸಿ ತೀವ್ರ ಅಸ್ವಸ್ಥಗೊಂಡಿದ್ದ ರೋಗಿಗೆ ಕಾರ್ಡಿಯೋಪಲ್ಮನರಿ ರೆಸಸ್ಸಿಟೇಶನ್ (CPR) ಮಾಡಿದ್ದಾರೆ. 

ಇದನ್ನೂ ಓದಿ: ಮೆಸ್ಸಿ ಭಾರತಕ್ಕೆ ಬಂದ ವಿಮಾನದ ಬೆಲೆ 1 ಬಿಲಿಯನ್ ಡಾಲರ್! ಬೆರಗುಗೊಳಿಸುವ ಸೌಕರ್ಯಗಳು..!

Anajli Nimbalkar (2)

ಆಗ ಅಮೆರಿಕನ್ ಮಹಿಳೆ ಕೊಂಚ ಚೇತರಿಸಿಕೊಂಡಿದ್ದಾರೆ. ಆಗ ಸೀಟಿನಲ್ಲಿ ಒರಗಿಸಿ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆದರೆ ನಿಂಬಾಳ್ಕರ್​, ಅವರ ಪಕ್ಕದಲ್ಲೇ ನಿಂತು, ಅವರಿಗೆ ಬೇಕಾಗಿರುವ ವೈದ್ಯಕೀಯ ಅಗತ್ಯಗಳ ಕಡೆಗೆ ನಿರಂತರ ಗಮನ ಹರಿಸಿ ಧೈರ್ಯ ತುಂಬಿದ್ದಾರೆ. ಆದರೂ ಮತ್ತೆ ಆರೋಗ್ಯ ಹದಗೆಟ್ಟಿತ್ತು ಎನ್ನಲಾಗಿದೆ.

ಕೊನೆಗೆ ಮತ್ತೆ ಸಿಪಿಆರ್​ ಮಾಡಿ ಜೆನ್ನಿ ಜೀವ ಉಳಿಸಿದ್ದಾರೆ. ಅಷ್ಟೇ ಅಲ್ಲದೇ, ವಿಮಾನವು ನಿಲ್ದಾಣ ಪ್ರವೇಶ ಮಾಡುವಷ್ಟರಲ್ಲೇ, ಸಿಬ್ಬಂದಿ ಜೊತೆಗೆ ಸಮನ್ವಯ ಸಾಧಿಸಿ ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಿಸಿದ್ದರು. ವಿಮಾವು ಲ್ಯಾಂಡ್ ಆಗುತ್ತಿದ್ದಂತೆಯೇ, ಆ್ಯಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ  ದಾಖಲಿಸುವಂತೆ ನೋಡಿಕೊಂಡಿದ್ದಾರೆ. 

ಇದನ್ನೂ ಓದಿ: ‘ಕೊಲ್ಹಾಪುರಿ ಚಪ್ಪಲಿ’ಗಳಿಗೆ ಗ್ಲೋಬಲ್ ಟಚ್.. ಈಗ ಒಂದು ಜೋಡಿಗೆ 84,000 ರೂಪಾಯಿ..!

Anajli Nimbalkar (1)

ನಿರ್ಜಲೀಕರಣ, ಆಹಾರ ಸಮಸ್ಯೆ ಅಥವಾ ಯಾವುದೋ ಮಾತ್ರೆ ಸೇವಿಸಿದಾಗ ಇಂಥ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ಕೆಲವೇ ಸೆಕೆಂಡ್​ಗಳಲ್ಲಿ ತುರ್ತು ಚಿಕಿತ್ಸೆ ಸಿಗದಿದ್ದರೆ, ಹೃದಯ ಬಡಿತ ನಿಂತು ಹೋಗುತ್ತದೆ. ವೈದ್ಯ ಸಲಕರಣೆಗಳು ಇದ್ದಾಗಲೂ ಪ್ರಾಣ ಹೋಗುವ ಸಾಧ್ಯತೆ ಇರುತ್ತದೆ. ಇಂಥ ತುರ್ತು ಸಂದರ್ಭಗಳಲ್ಲಿ ವಿಮಾನಗಳಲ್ಲಿ ಕನಿಷ್ಠ ಸೌಲಭ್ಯ ಇರಬೇಕು.

ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕಿ 

ನಿಂಬಾಳ್ಕರ್ ಅವರ ಈ ಮಾನವೀಯ ಕೆಲಸಕ್ಕೆ ವಿಮಾನದಲ್ಲಿನ ಸಿಬ್ಬಂದಿ ಧನ್ಯವಾದ ತಿಳಿಸಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಿಂಬಾಳ್ಕರ್ ಅವರನ್ನು ಶ್ಲಾಘಿಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

anjali nimbalkar hemant nimbalkar
Advertisment